ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ವಿದ್ಯಾನಗರ ಕಾಲೋನಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದಂಗವಾಗಿ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಧಾರವಾಡ ಜಿಲ್ಲೆಯ ಗರಗದ ಶ್ರೀ ಮಡಿವಾಳೇಶ್ವರ ಅವರ ಕುರಿತು ಪ್ರವಚನ ಕಾರ್ಯಕ್ರಮವನ್ನು ನರೋಣಾ ಹಾಗೂ ಗೋಳಾ(ಬಿ) ಹೊಸಮಠದ ಪೂಜ್ಯ ಶ್ರೀ ಚನ್ನಮಲ್ಲ ಸ್ಚಾಮಿಗಳು ಸೋಮವಾರದಂದೂ ನಡೆದ ಪ್ರವಚನ ನೀಡಿದ ಶ್ರೀಗಳು, ಕಣ್ಣಿಲ್ಲದ್ದವರಿಗೆ ಕಣ್ಣಾದವರು ಶರಣರು. ಶಕ್ತಿಯಿಲ್ಲದ್ದವರಿಗೆ ಶಕ್ತಿಯಾದರು. ಜಗತ್ತನ್ನೇ ಗೆಲ್ಲುವ ಶಕ್ತಿಯನ್ನು ಶರಣರು ತಮ್ಮ ನಡೆ-ನುಡಿಗಳ ಮೂಲಕ ನಮಗೆ ನೀಡಿದ್ದಾರೆ.
ಇಂದಿನ ಸಮಾಜ ಸ್ವಚ್ಚ ಇರಬೇಕಾದರೆ ಗುರುಗಳೆಂಬ ಮೀನು ಬೇಕು.. ಒಂದಕ್ಕೊಂದು ಸಂಬಂಧವಿವೆ ಎಂದು ಮಾರ್ಮಿಕವಾಗಿ ನುಡಿದರು. ಸತ್ತವರನ್ನು ಬದುಕಿಸುವುದಲ್ಲ, ಬದಲಾಗಿ ಸಾಯುವವರನ್ನು ಬದುಕಿಸುವವನು ನಿಜವಾದ ಶರಣನಾಗುತ್ತಾನೆ. ಆ ಕಾರ್ಯ ಶ್ರೀ ಮಡಿವಾಳೇಶ್ವರ ಎಂಬ ಗುರು ಮಾಡಿ ಹೋಗಿದ್ದಾರೆ ಎಂದು ತಿಳಿಸಿದರು. ಸತ್ತ ಮೇಲೂ ಸಮಾಜಸೇವೆ ಮಾಡಬೇಕಾದರೆ ಪ್ರತಿಯೊಬ್ಬರೂ ದೇಹದಾನ ಮಾಡುವ ಮೂಲಕ ಸಮಾಜದ ಋಣ ತೀರಿಸಿಕೊಳ್ಳಬೇಕೆಂದರು. ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರನ್ನು ಇದೇ ಸಂಸರ್ಭದಲ್ಲಿ ವಿಶೇಷವಾಗಿ ಸತ್ಕರಿಸಿದರು.
ಶಿವಾನಂದ ಮಠಪತಿ, ವಿದ್ಯಾನಗರ ವೆಲಫೇರ್ ಸೊಸೈಟಿಯ ಮಲ್ಲಿನಾಥ ದೇಶಮುಖ, ಶಿವರಾಜ ಅಂಡಗಿ ಸೇರಿ ಬಡಾವಣೆಯ ಪ್ರಮುಖರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…