ವಿಭೂತಿ ಶರಣರ ಅಂತರಂಗ ಬಹಿರಂಗದ ಸೌಂದರ‍್ಯದ ಕುರುಹು. ಆ ಕುರುಹಿನಲ್ಲಿ ಶಿವನಂತೆ ಕಂಡ ಶರಣರು ಶಿವಲೀಲೆಗಳು ಗೈದದ್ದು ಅದರ ಮುಖಾಂತರವೇ ಎಂದು ಶರಣಬಸವೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಪ್ರೊ. ವಿಜಯಲಕ್ಷ್ಮೀ ಅಲ್ಲದ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.
ಶರಣರ ದಾಸೋಹ ಮನೆಗೆ ಬರುವವರಾಗಲಿ, ದಾಸೋಹ ಪಡೆಯವವರೆ ಆಗಲಿ ವಿಭೂತಿಯನ್ನು ಕಡ್ಡಾಯವಾಗಿ ಧರಿಸಬೇಕಿತ್ತು. ಒಬ್ಬಾತ ಬಂದು ದಾಸೋಹ ಪಂಕ್ತಿಯಲ್ಲಿ ಕುಳಿತ, ಅಲ್ಲಿರುವವರು ಕೈಕಾಲು ತೊಳೆದು ವಿಭೂತಿ ಧರಿಸು ಎಂದು ಹೇಳಿದ್ದರೂ ಕೇಳಲಿಲ್ಲ. ಪ್ರಸಾದ ಮಾಡಬೇಕೆಂದು ಊಟ ಮಾಡಬೇಕೆನ್ನುತ್ತಾನೆ. ಆದರೆ ಕೈಗಳು ಎತ್ತುತ್ತಿಲ್ಲ. ತನ್ನ ತಪ್ಪಿನ ಅರಿವಾಗಿ ಅಲ್ಲಿರುವ ವಿಭೂತಿ ಉಂಡೆಗೆ ಹಣೆ ತಿಕ್ಕುತ್ತಾನೆ. ತಕ್ಷಣವೇ ಕೈಗಳು ಶಕ್ತಿಯುತವಾಗುತ್ತವೆ. ಓಡಿ ಹೋಗಿ ಶರಣರ ಪಾದವಿಡಿದು ತನ್ನ ತಪ್ಪನ್ನು ಒಪ್ಪಿಕೊಂಡನಲ್ಲದೆ ವಿಭೂತಿ ದಿನಾಲು ಧರಿಸುತ್ತಾನೆ.
ಕೋರವಾರದ ಭಕ್ತರೆಲ್ಲರೂ ಕೂಡಿ ಅಣವೀರಪ್ಪನ ಗುಡಿಯನ್ನು ಕಟ್ಟಲು ನಿರ್ಧಾರ ಮಾಡುತ್ತಾರೆ. ಗುಡಿ ಕಟ್ಟಲು ವಡ್ಡರು ಗುಡ್ಡದ ಮೇಲೆ ಇಪ್ಪತ್ತು ಕಲ್ಲುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಇಪ್ಪತ್ತೊಂದನೆ ಕಲ್ಲು ಎತ್ತಲು ಆಗುವುದಿಲ್ಲ. ಏನು ಮಾಡಿದರೂ ಆಗುವುದಿಲ್ಲ. ಆಗ ಹಿರಿಯರು ’ ಜೀವಂತ ದೇವರಾಗಿರುವ ಶರಣಬಸವರ ನಾಮಸ್ಮರಣೆ ಮಾಡಿ ಕಲ್ಲನ್ನು ಎತ್ತಿರಿ, ನೋಡೋಣ’ ಎಂದಾಗ ಎಲ್ಲರೂ ಒಂದೇ ಮನದಿಂದ ಶರಣರ ನಾಮಸ್ಮರಣೆ ಮಾಡಿ ಕಲ್ಲು ಎತ್ತಿದರು. ಆಗ ಅದು ಹೂವಿನ ಹಾಗೆ ಸರಾಗವಾಗಿ ತಾನೇ ಎದ್ದು ಆ ಇಪ್ಪತ್ತು ಕಲ್ಲುಗಳ ಬಳಿ ಕೂಡುತ್ತದೆ. ಆ ಕಡೆ ಕಲಬುರಗಿಯಲ್ಲಿ ಭಕ್ತರ ಮಧ್ಯಕುಳಿತು ಗುರುಭೋದೆ ಮಾಡುತ್ತಿದ್ದ ಶರಣರು ತಮ್ಮೆರಡು ಕೈಗಳನ್ನು ಎತ್ತುತ್ತಾರೆ. ’ ಯಾಕ್ಹೀಗೆ ಅಪ್ಪಾವರೆ’ ಎಂದಾಗ ಶರಣರು ’ ಕೋರವಾರ ಅಣವೀರಪ್ಪನ ಗುಡಿಗೆ ಕಲ್ಲೇತ್ತಿ ಕೊಟ್ಟಿನಿ’ ಎನ್ನುತ್ತಾರೆ.
ಬಬಲಾದಿಯಲ್ಲಿ ಹುಟ್ಟುಕುರುಡನೊಬ್ಬನಿದ್ದ. ಅವನ ಅಕ್ಕ ಶರಣರಲ್ಲಿಗೆ ಬಂದು ತನ್ನ ತಮ್ಮ ಕುರುಡನಿಗೆ ದಾರಿ ತೋರಿಸಲು ಕೇಳುತ್ತಾಳಲ್ಲದೆ ದುಃಖಿಸಿ ಅಳುತ್ತಾಳೆ. ಆಗ ಶರಣರು ಆಕೆಗೆ ಧೈರ್ಯ ಕೊಟ್ಟು ’ ಕಣ್ಣು ಬರುತ್ತವೆ ಸುಮ್ಮನಿರವ್ವ’ ಎಂದು ಸಮಾಧಾನ ಮಾಡುತ್ತಾರೆ. ತನ್ನ ಹೆಂಡತಿಯನ್ನು ಹುಡುಕುತ್ತ ಆ ಕುರುಡನ ಭಾವ ಶರಣರ ಹತ್ತಿರವೇ ಬರುತ್ತಾನೆ. ಶರಣರು ಅಗ ಅವನನ್ನು ಕರೆದು ’ ನಿನ್ನ ಮಗಳನ್ನು ಹೆಂಡತಿಯ ತಮ್ಮನಿಗೆ ಕೊಡಲು’ ಹೇಳುತ್ತಾರೆ. ಆತ ’ಬಾವಿಯೊಳಗೆ ಮಗಳನ್ನು ಒಯ್ದು ಹಾಕುತ್ತೇನೆ, ಆದರೆ ಆ ಕುರುಡನಿಗೆ ಕೊಡುವುದಿಲ್ಲ’ ವೆಂದು ಹೋಗುವಾಗ ಮಹಾಮನೆಯ ದ್ವಾರವು ದಾಟಿರುವುದಿಲ್ಲ ಅವನ ಕಣ್ಣು ಕಾಣುವುದಿಲ್ಲ,. ಕಿವಿ ಕೇಳುವುದಿಲ್ಲ, ಶಬ್ದವು ಅಡಗಿ ಹೋಗುತ್ತದೆ. ಅವನು ಮನೆಗೆ ಹೋದಾಗ ಮಗಳ ಕಣ್ಣು ಕಾಣದೆ ಕುರುಡಾಗಿ ಅಳುತ್ತಾ ಕುಳಿತಿರುತ್ತಾಳೆ. ಶರಣರ ಮಾತಿಗೆ ವಿರುದ್ಧ ಆಡಿದ್ದರ ಪ್ರತಿಫಲವಿದು ಎಂದು ಆತನನ್ನು, ಆತನ ಮಗಳನ್ನು ಜನರು ಕರೆದು ಕೊಂಡು ಬಂದು ಶರಣರ ಪಾದಕ್ಕೆ ಹಾಕುತ್ತಾರೆ. ಶರಣರು ಅವರನ್ನು ಕ್ಷಮೀಸುತ್ತಾರೆ. ಎಲ್ಲರೂ ಮೊದಲಿನಂತರಾಗುತ್ತಾರೆ. ಕುರುಡ ವ್ಯಕ್ತಿಯ ಕಣ್ಣು ಕೂಡಾ ಕಾಣುತ್ತದೆ. ತನ್ನ ಮಗಳನ್ನು ಅವನೊಂದಿಗೆ ಮದುವೆ ಮಾಡಿಸುತ್ತಾರೆ.
ಒಬ್ಬ ಬ್ರಾಹ್ಮಣ ಹೆಣ್ಣುಮಗಳು ಹೋಗುತ್ತಿರುವಾಗ ಕಾಮುಕನೊಬ್ಬ ಅವಳಿಗೆ ಬಲತ್ಕಾರ ಮಾಡಲು ಹೊರಟ. ಆಗ ಆಕೆ ಶರಣ ನಾಮಸ್ಮರಣೆ ಮಾಡುತ್ತಾ, ’ ನನಗೆ ಮುಟ್ಟಿದರೆ ಶರಣರ ಮೇಲೆ ಆಣೆ ನಿನಗೆ’ ಎನ್ನುತ್ತಾಳೆ. ತಕ್ಷಣವೇ ಆತ ಪುರುಷತ್ವ ಕಳೆದುಕೊಂಡು ಹುಚ್ಚನಂತಾಗುತ್ತಾನೆ. ಆತನು ಶರಣರ ಹತ್ತಿರ ಬಂದು ಆಕೆಗೆ ತಪ್ಪಾಯಿತು ಎಂದು ಪಾದವಿಡಿಯುತ್ತಾನೆ, ತಕ್ಷಣವೇ ಅವನು ಮೊದಲಿನಂತಾಗುತ್ತಾನೆ. ಹೀಗೆ ಶರಣಬಸವರು ಅನೇಕ ಲೀಲೆಗಳನ್ನು ಮಾಡಿದ ಶಿವನಾಗಿದ್ದರು ಎಂದು ಹೇಳಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…