ಬೆಳಗಾವಿ: ಪ್ರಬುದ್ಧ ಗ್ರಾಮೀಣ ಸೇವಾ ಸಂಸ್ಥೆಯ ವತಿಯಿಂದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೌಡವಾಡದಲ್ಲಿ ಶಾಲಾ ಮಕ್ಕಳಿಗೆ ನೃತ್ಯ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಗೌಡವಾಡ ಗ್ರಾಮದಲ್ಲಿ ಆಯೋಜಿಸಿದ ಕಾರ್ಯಕ್ರದ ದಿವ್ಯ ಸಾನಿಧ್ಯದಲ್ಲಿ ಕಲಬುರಗಿಯ ಶ್ರೀ ಅಕ್ಕ ಮಹಾದೇವಿ ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ ಇವರು ಇಂದಿನ ಮಕ್ಕಳು ನಾಳಿನ ಭವ್ಯ ಭಾರತ ಕನಸು ನೆನಸ ಮಾಡುವರು. ಇವತ್ತಿನ ಮಕ್ಕಳಲ್ಲಿ ಶರಣ ವಚನಗಳು ಮತ್ತು ಅನುಭವ ಮಂಟಪ ಬಗ್ಗೆ ಮಾಹಿತಿ ನೀಡಿದರು. ಹಲವಾರು ರೀತಿಯ ಕಲೆಗಳಿವೆ ಆ ಕಲೆಗಳನ್ನು ಗುರುತಿಸುವ ಕಾರ್ಯ ಶಿಕ್ಷಕರಾದವರು ಹಾಗೂ ಸಂಸ್ಥೆಗಳ ಆದರಿಂದ ಮಕ್ಕಳು ಕಲೆಯನ್ನು ವ್ಯಕ್ತಪಡಿಸಲು ಸರಿಯಾದ ವೇದಿಕೆ ಸೃಷ್ಟಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು. ಇವತ್ತಿನ ದಿನ ಈ ಪ್ರಬುದ್ಧ ಗ್ರಾಮೀಣ ಸೇವಾ ಸಂಸ್ಥೆಯಿಂದ ಮಕ್ಕಳಿಗೆ ನೃತ್ಯ ಸಾಮಗ್ರಿಗಳನ್ನು ನೀಡಿರುವುದು ಶ್ಲಾಘಿಸಿದರು.
ಸಂಸ್ಥೆ ಅಧ್ಯಕ್ಷರಾದ ಶ್ರವಣಕುಮಾರ ಬೇವಿನಕಟ್ಟಿ ಮಾತನಾಡಿನಮ್ಮ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸಂಸ್ಥೆ ನಾನು ನಮ್ಮ ಎಲ್ಲಾ ಪದಾಧಿಕಾರಿಗಳು, ನಮ್ಮ ಊರಿನ ಮುಖಂಡರು ಎಲ್ಲರೂ ಶ್ರಮಿಸುತ್ತಿವೆ ನಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುವುದೆ ನಮ್ಮ ಸಂಸ್ಥೆಯ ಉದ್ದೇಶ ಎಂದರು.
ಇದೆ ಸಂದರ್ಭದಲ್ಲಿ ವಕೀಲರು ರಾಜು ಚೌಗಲಾ ಅವರು ಇನ್ನು ಹೆಚ್ಚಿನ ಸಾಮಗ್ರಿಗಳ ಕರಿದಿಸಲು ಧನ ಸಹಾಯ ನೀಡಿದರು. ಅಲಗೌಡ ಪಾಟೀಲ, ಲಖಮಗೌಡ ದೇಸಾಯಿ, ಶ್ರವಣಕುಮಾರ ಬೇವಿನಕಟ್ಟಿ ಅಧ್ಯಕ್ಷರು ಪ್ರ ಗ್ರಾ ಸೇವಾ ಸಂಸ್ಥೆ, ಧರ್ಮೇಂದ್ರ ಘಸ್ತಿ, ಮಹಾದೇವ ಪಂಚಪಗೊಳ, ಕಾಡಪ್ಪಾ ಚೌಗಲಾ, ಶಾಲಾ ಶಿಕ್ಷಕರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಲಖಮಗೌಡ ಅವರು ವಂದನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…