ಬಿಸಿ ಬಿಸಿ ಸುದ್ದಿ

ಉದ್ಯೋಗ ಅಧಾರಿತ ಕೌಶಲ್ಯ ತರಬೇತಿ: ಹೆಡ್ ಹೆಲ್ಡ್ ಹೈ-ಕಲಬುರಗಿ ಜಿಲ್ಲಾಡಳಿತ ಒಪ್ಪಂದಕ್ಕೆ ಸಹಿ

ಕಲಬುರಗಿ,ನ.1; ಕಲಬುರಗಿ ಸೇರಿದಂತೆ ಈ ಭಾಗದ ಯುವಕ-ಯುವತಿಯರ ಯುವ ಸಾಮಥ್ರ್ಯವನ್ನು ಹೊರಹಾಕಲು ಮತ್ತು ಯುವಜನರ ಉಜ್ವಲ ಭವಿಷ್ಯದ ನಿರ್ಮಾಣಕ್ಕೆ ಕೌಶಲ್ಯಗಳ ರೂಪಾಂತರದ ಮೂಲಕ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶ ಒದಗಿಸುವ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿ ನೀಡಲು ಹೆಡ್ ಹೆಲ್ಡ್ ಹೈ ಟ್ರಸ್ಟ್ ಮತ್ತು ಕಲಬುರಗಿ ಜಿಲ್ಲಾಡಳಿತವು ಬುಧವಾರ ಕಲಬುರಗಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿತು.

ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ. ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಹೆಡ್ ಹೆಲ್ಡ್ ಹೈ ಟ್ರಸ್ಟ್‍ನ ಟ್ರಸ್ಟಿ ಮದನ ಪದಕಿ ಅವರ ಸಮಕ್ಷಮದಲ್ಲಿ ಹೆಡ್ ಹೆಲ್ಡ್ ಹೈ ಟ್ರಸ್ಟ್‍ನ ಸಿ.ಇ.ಓ ಪಂಕಜ್ ಸಿಂಗ್ ಠಾಕೂರ ಮತ್ತು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಒಪ್ಪಂದಕ್ಕೆ ಸಹಿ ಹಾಕಿ ಒಪ್ಪಂದ ಪತ್ರವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

*3 ವರ್ಷದಲ್ಲಿ 25 ಸಾವಿರ ಜನರಿಗೆ ಕೌಶಲ್ಯ:*

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮತ್ತು ನವೋದ್ಯಮ ಸ್ಥಾಪನೆಯಿಂದ ಇಡೀ ವಿಶ್ವದಲ್ಲಿ ಕರ್ನಾಟಕವು ತನ್ನದೆ ಆದ ಸ್ಥಾನ ಹೊಂದಿದೆ. ಪ್ರಸ್ತುತ ದೇಶ ಮತ್ತು ಕರ್ನಾಟಕದಲ್ಲಿ ಇಲ್ಲಿನ ಉದ್ಯೋಗಕ್ಕೆ ತಕ್ಕಂತೆ ಕೌಶಲ್ಯ ನೀಡಲಾಗುತ್ತಿದೆ. ಇದನ್ನು ವಿಶ್ವಕ್ಕೆ ವಿಸ್ತರಿಸಬೇಕೆಂಬ ಚಿಂತನೆ ಇಟ್ಟುಕೊಂಡು ಕಲಬುರಗಿ ಸೇರಿದಂತೆ ಪ್ರದೇಶದ ಯುವ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಳ, ಉದ್ಯೋಗ ಆಧಾರಿತ ಕೌಶಲ್ಯ, ಸಂವಹನ ಕೌಶಲ್ಯ, ಪರೀಕ್ಷೆ ಮತ್ತು ಸಂರ್ದಶನ ಎದುರಿಸುವ ಸಾಮಥ್ರ್ಯ ಹೀಗೆ ಕೌಶಲ್ಯ ಕೊರತೆಯನು ನೀಗಿಸುವುದರ ಜೊತೆಗೆ ಯುವ ಜನರ ಬೇಡಿಕೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಪಡೆಯಲು ಎಲ್ಲಾ ರೀತಿಯ ಸಜ್ಜುಗೊಳಿಸಲು ಇಂದಿಲ್ಲಿ ಹೆಡ್ ಹೆಲ್ಡ್ ಹೈ ಟ್ರಸ್ಟ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ. ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಹೆಡ್ ಹೆಲ್ಡ್ ಹೈ ಟ್ರಸ್ಟ್ ಮೊದಲು 30 ದಿನದಲ್ಲಿ ಇಲ್ಲಿನ ನಿರುದ್ಯೋಗಿ ಯುವಕರು, ಪದವೀಧರರು, ಡ್ರಾಪ್ ಔಟ್ ಯುವ ಜನರನ್ನು ಗುರುತಿಸಿ ಅವರ ವಿದ್ಯಾರ್ಹತೆ ಅನುಗುಣವಾಗಿ ಏನು ತರಬೇತಿ ನೀಡಬಹುದೆಂದು ತಿಳಿದು ವಿಸ್ತøತ ಕೌಶಲ್ಯ ಮ್ಯಾಪ್ ಮಾಡಿ ಅದರ ಮುಖೇನ ಕ್ರಿಯಾ ಯೋಜನೆ ಹಾಕಿಕೊಂಡು ಮುಂದಿನ 3 ವರ್ಷದಲ್ಲಿ 25 ಸಾವಿರ ಜನರಿಗೆ ತರಬೇತಿ ನೀಡಲಿದೆ. ಇದರಿಂದ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ತುಂಬಾ ನೆರವಾಗಲಿದೆ ಎಂದರು.

ಇದಲ್ಲದೆ ಕಲಬುರಗಿ ನಗರದ ವಾಜಪೇಯಿ ಬಡಾವಣೆಯಲ್ಲಿ ನೈಸ್ ಅಕಾಡೆಮಿ-ಸೆಂಟರ್ ಫಾರ್ ಎಕ್ಸಿಲೆನ್ಸ್ ಫಾರ್ ಕ್ಯಾರಿಯರ್ ಡೆವಲೆಪಮೆಂಟ್ ಸಂಸ್ಥೆ ಮುಂದಿನ ಆರ್ಥಿಕ ವರ್ಷದಿಂದ ಪ್ರಾರಂಭಿಸಲಾಗುತ್ತಿದೆ. ಈ ಸಂಸ್ಥೆಗೆ ಪ್ರತಿ ವರ್ಷ 10 ಕೋಟಿ ರೂ. ಕೆ.ಕೆ.ಆರ್.ಡಿ.ಬಿ. ಯಿಂದ ನೀಡುವ ಮೂಲಕ ಪ್ರತಿ ವರ್ಷ ಈ ಭಾಗದ ಸುಮಾರು 2,000 ಅಭ್ಯರ್ಥಿಗಳಿಗೆ ಐ.ಎ.ಎಸ್, ಕೆ.ಎ.ಎಸ್., ಬ್ಯಾಂಕಿಂಗ್ ಹಾಗೂ ರಾಜ್ಯ ಸರ್ಕಾರದ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಗೆ ದೂರದ ಬೆಂಗಳೂರು, ಮೈಸೂರು, ಧಾರವಾದ ಹೋಗುವುದು ತಪ್ಪಲಿದೆ. ಇಲ್ಲಿಯೆ ಗುಣಮಟ್ಟ ತರಬೇತಿ ಯುವಕರಿಗೆ ಸಿಗಲಿದೆ ಎಂದರು.

ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಕರೆ: ಪರಿಸರ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ನಿಟ್ಟಿನಿಂದ ಕಲಬುರಗಿ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದೆ. ಜಿಲ್ಲೆಯ ಜನತೆ ಏಕ ಬಳಕೆಯ ಪ್ಲಾಸ್ಟಿಕ್ ಕವರ್ ಬಳಕೆ ತ್ಯಜಿಸಬೇಕು. ಇಂದು ಸಾಂಕೇತಿಕವಾಗಿ 5000 ಬಟ್ಟೆ ಬ್ಯಾಗ್‍ಗಳನ್ನು ವಿತರಿಸಲಾಗಿದೆ. ಮುಂದಿನ ದಿನದಲ್ಲಿ 25 ಸಾವಿರ ಬ್ಯಾಗ್ ವಿತರಿಸಲಾಗುವುದು. ಏಕ ಬಳಕೆ ಪ್ಲಾಸ್ಟಿಕ್ ನಿಷೇಧವಿದ್ದರು ಸಹ ಜನ ಅದನ್ನು ಬಳಸುತ್ತಿದ್ದು, ನೋವಿನ ಸಂಗತಿ ಎಂದ ಅವರು, ಜನರ ಸಹಭಾಗಿತ್ವ ಇದರಲ್ಲಿ ತುಂಬಾ ಮುಖ್ಯವಾಗಿದೆ. ಜನರಲ್ಲಿ ಸಾಂಸ್ಕøತಿಕ ಬದಲಾವಣೆ ಬರಬೇಕಿದೆ ಎಂದು ಹೇಳುತ್ತಾ ಪ್ಲಾಸ್ಟಿಕ್ ಮುಕ್ತ ಕಲಬುರಗಿ ಅಭಿಯಾನಕ್ಕೆ ಕೈಜೋಡಿಸುವಂತೆ ಮನವಿ ಮಾಡಿಕೊಂಡರು.

ಇದಕ್ಕು ಮುನ್ನ ಹೆಡ್ ಹೆಲ್ಡ್ ಹೈ ಟ್ರಸ್ಟ್‍ನ ಟ್ರಸ್ಟಿ ಮದನ ಪದಕಿ ಮತ್ತು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ ಅವರು ಒಪ್ಪಂದ ಕುರಿತಂತೆ ವಿವರ ನೀಡಿದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಮತ್ತು ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಅವರು ಕ್ರಮವಾಗಿ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಪ್ಲಾಸ್ಟಿಕ್ ಮುಕ್ತ ಕಲಬುರಗಿ ಮತ್ತು ಸ್ವಚ್ಚ ಭಾರತ ಯೋಜನೆಯಡಿ ಹಾಕಿಕೊಂಡಿರುವ ಯೋಜನೆಗಳು ಕುರಿತು ಮಾಹಿತಿ ನೀಡಿದರು.

ಕೀನ್ಯಾಕ್ಕೆ ಕಲಬುರಗಿ ಕುವರಿ,ಶುಭ ಕೋರಿದ ಪ್ರಿಯಾಂಕ್ ಖರ್ಗೆ: ಹೆಡ್ ಹೆಲ್ಡ್ ಹೈ ಟ್ರಸ್ಟ್ ಸಂಸ್ಥೆಯಿಂದ ಕೌಶಲ್ಯ ತರಬೇತಿ ಪಡೆದುಕೊಂಡಿರುವ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕು. ಕಾವೇರಿ ಅವರು ಇದೇ ನವೆಂಬರ್ 6-9ರ ವರೆಗೆ ಕೀನ್ಯಾದ ಮೊಂಬಾಸಾದಲ್ಲಿ ನಡೆಯಲಿರುವ ಗ್ಲೋಬಲ್ ಅಪೋರ್ಚುನಿಟಿ ಯುಥ್ ನೆಟವರ್ಕ್ ಸಂಸ್ಥೆಯಿಂದ ಆಯೋಜಿಸಿರುವ ಗ್ಲೋಬಲ್ ಸಮ್ಮೇಳನದಲ್ಲಿ ಭಾಗಿಯಾಗಿ ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಕೌಶಲ್ಯ ತರಬೇತಿ ಕುರಿತು ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾವೇರಿಗೆ ಹೆಡ್ ಹೆಲ್ಡ್ ಹೈ ಟ್ರಸ್ಟ್ ಸಂಸ್ಥೆಯು ಕಲ್ಪಿಸಿದ ಉಚಿತ ವೀಸಾವನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾವೇರಿಗೆ ನೀಡಿ ಶುಭ ಕೋರಿದರು. ರಾಜ್ಯದಿಂದ ಇನ್ನೋರ್ವ ಅಭ್ಯರ್ಥಿ ಕೊಪ್ಪಳದಿಂದ ಚಂದನಾ ಸಹ ಇದರಲ್ಲಿ ಭಾಗಿಯಾಗಲಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago