ಯಾದಗಿರಿ: ಐತಿಹಾಸಿಕ ಜಿಲ್ಲೆ ತನ್ನದೇ ಆದ ಮಹತ್ವಹೊಂದಿದೆ, ಜಿಲ್ಲೆಯ ಹೊಸ ತಾಲೂಕು ಹುಣಸಗಿ ಯಲ್ಲಿ ಮತ್ತು ಕೆಂಭಾವಿ ಹತ್ತಿರ ವಿರುವ ಪವಿತ್ರ ಯಾತ್ರಾ ಕೇಂದ್ರವೇ ಮುದನೂರ, ಬಾಗೇವಾಡಿ ಯನ್ನು ಬಸವನ ಎಂಭ ಶಬ್ದ ಸೇರಿಸಿ, ಬಸವನ ಬಾಗೇವಾಡಿ ಎಂದು ನಾಮಕರಣ ಮಾಡಿದಂತೆ ಆಗಿನ ಕಾಲದ ಅಗ್ರಹಾರ ಕೇಂದ್ರ ಸ್ಥಳ ಮತ್ತು ಕನ್ನಡದ ವಚನ ಸಾಹಿತ್ಯ ಹುಟ್ಟಿಸಿದ ಮಹಾನ ವ್ಯಕ್ತಿ, ದಾಸಿಮಯ್ಯ ನವರ ಜನ್ಮ ಭೂಮಿಯಾಗಿದೆ ಎಂದು ನ್ಯಾಯವಾದಿ, ಜೇ. ವಿನೋದ ಕುಮಾರ ತಿಳಿಸಿದ್ದಾರೆ.
ಸಪ್ತ ತೀರ್ಥ ಉಳ್ಳ ಪುಣ್ಯ ಕ್ಷೇತ್ರ, 108 ಶೈವ ದೇವಾಲಯದ ಯಾತ್ರಾ ಸ್ಥಳ, ಶರಣ ಪೀಠ ಸ್ಥಾಪಿಸಿ, ವಚನ ಸಾಹಿತ್ಯ ಅಧ್ಯಯನ ಕೇಂದ್ರ ರೂಪಿಸಿ, ಅದನ್ನು ಕೇಂದ್ರ ಸರ್ಕಾರದ ಶಾಸ್ತ್ರೀಯ ಭಾಷೆಯ ಅಡಿಯಲ್ಲಿ ಒಂದು ಸ್ವಾಯತ ಸಂಸ್ಥೆ ರಚನೆಗೊಳಿಸಿ, ಬೆಳಸಲಿ ಎಂದು ದಾಸಿಮಯ್ಯ ನವರ ಸಪ್ತ ಸಾಲಿಗಳು ಹಾಗೂ ವಚನ ಸಾಹಿತ್ಯ ಆಭಿಮಾನಿಗಳು ಮತ್ತು ನೇಕಾರ ಅನುಯಾಯಿಗಳು ಸರ್ಕಾರವನ್ನು ದಾಸಿಮಯ್ಯ ಮುದನೂರ ಎಂದು ಮರುನಾಮಕರಣ ಮಾಡಲು ಒತ್ತಾಯಸಬೇಕೆಂದು ಕರೆ ನೀಡಿದ್ದಾರೆ.
ವಿಶ್ವಕ್ಕೆ ನೇಕಾರ ಕೊಟ್ಟ ಕೊಡಿಗೆ ಮರೆಯುವಂತಿಲ್ಲ, ಕರ್ನಾಟಕದ ವಿವಿಧ ವಿಶ್ವವಿದ್ಯಾಲಯದಗಳಲ್ಲಿ ಶರಣರ ಬಗ್ಗೆ ಇರುವ ಪೀಠಗಳನ್ನು ರದ್ದು ಪಡಿಸಿ ,ಅವುಗಳಿಗೆ ನೀಡುತ್ತಿರುವ ಅನುದಾನವನ್ನು ದ್ವಿಗುಣ ಗೊಳಿಸಿ, ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುಧಾನ ಪಡೆದು, ಶರಣ ಧರ್ಮ ಪೀಠ ಮತ್ತು ವಚನ ಸಾಹಿತ್ಯಕ್ಕೆ ನೀಡಲಿ, ಒಬ್ಬ ಸಮರ್ಥ ಕನ್ನಡ ವಚನ ಸಾಹಿತ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವವರನ್ನು ಇದರ ಮುಖ್ಯಸ್ಥರನ್ನಾಗಿ ಮಾಡಿ , 11ನೇ ಶತಮಾನದ ವಚನ ಸಾಹಿತ್ಯದ ಬಗ್ಗೆ ಸಮಗ್ರ ಚಿಂತನೆ ಮಾಡುವ ಪ್ರಮುಖ ಕೇಂದ್ರವಾಗಿ ಬೆಳೆಯುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಶರಣ ಧರ್ಮ ಪೀಠ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು, 11 ನೇ ಮತ್ತು 12 ನೇ ಶತಮಾನದ ಶರಣರ ಚಿಂತನೆ ಜಗತ್ತಿನಾದ್ಯಂತ ಪ್ರಚಾರ ಮಾಡಿದರೆ ಅದೇ ಅತಿ ದೊಡ್ಡ ಧರ್ಮ ಸೇವೆ, ಅದೇ ದೊಡ್ಡ ಗೌರವ, ಈಗ ಅಲ್ಲಿ ನೀರಿನ ಮೂಲ ಸೌಕರ್ಯ ವಿದೆ, ಇದರ ಬಗ್ಗೆ ಪ್ರಜ್ಞಾವಂತರು, ಚಿಂತಕರು ಮತ್ತು ಶರಣರ ಬಗ್ಗೆ ಗೌರವ ಇರುವವರೆಲ್ಲರು ಒಗ್ಗೂಡಿ ಸರ್ಕಾರದ ಮನವೊಲಿಸಬೇಕೆಂದು ಮನವಿ ಮಾಡಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…