ಕಲಬುರಗಿ: ರಾಯಚೂರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯ ಕೃಷಿ ಮಹಾವಿದ್ಯಾಲಯ ಕಲಬುರಗಿಯ ಅಂತಿ ಕೃಷಿ ಪದವಿ ವಿದ್ಯಾರ್ಥಿಗಳು ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಸುತ್ತಲಿನ ಹೊಲಗಳಿಗೆ ಭೇಟಿ ನೀಡಿ ಕೃಷಿ ಸಮಸ್ಯೆ ಬೆಳೆಗಳಲ್ಲಿ, ಕೀಟ, ರೋಗ, ಹತೋಟಿ ಕ್ರಮಗಳ ಕುರಿತು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ತಜ್ಞರಾದ ಡಾ. ಜಹೀರ್ ಅಹೆಮದ್, ಕೃಷಿ ಮಹಾವಿದ್ಯಾಲಯದ ತೋಟಗಾರಿಕೆ ಉಪನ್ಯಾಸಕರಾದ ಡಾ. ಮಹಾಂತೇಶ ಜೋಗಿ ಉಪಸ್ಥಿತರಿದ್ದರು. ಸೂರ್ಯಕಾಂತಿ, ಹತ್ತಿ, ಮೆಣಸಿನಕಾಯಿ, ಬದನೆ, ಟಮೋಟೋ, ದ್ರಾಕ್ಷಿ ಬೆಳೆಯಲ್ಲಿ ಕಂಡು ಬಂದ ರೋಗಗಳ ನಿರ್ವಹಣೆ ಮಾಹಿತಿ ನೀಡಿದರು.
ತೊಗರಿ ಹೂ ಕಟ್ಟುವಿಕೆ ಸಂದಿಗ್ದತೆಯಲ್ಲಿ ಭೂಮಿಯಲ್ಲಿ ಹಸಿ ಅಂಶ ಕಡಿಮೆಯಿದ್ದು. ರೈತರು ಚಂಡಮಾರುತ ಪ್ರಭಾವದಿಂದ ಮಳೆಯಾಗುವ ನೀರಿಕ್ಷಯಲ್ಲಿ ಕಾಯುತ್ತಿದ್ದಾರೆ. ಆದರೆ ಬಂಗಾಳಕೊಲ್ಲಿ, ಅರಬ್ಬಿಸಮುದ್ರದಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತ, ಮಳೆ ಉತ್ತರ ಕರ್ನಾಟಕ ಭಾಗಕ್ಕೆ ಮಳೆಯ ಪರಿಣಾಮ ಬೀರುವುದಿಲ್ಲ ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.
ಜಿಲ್ಲೆಯು ಬಹುತೇಕ ಮಳೆಯಾಶ್ರಿತ ಪ್ರದೇಶದಲ್ಲಿ ತೊಗರಿ 30% ಹೂ ಹಂತ ಹೊಂದಿದ್ದು, ತೇವಾಂಶ ಕೊರತೆಯಿಂದ ಎಲೆಗಳು ಹಳದಿಯಾಗಿ ನಂತರ ಒಣಗಿ ಉದುರುತ್ತಿವೆ ಹಾಗೂ ಭೂಮಿಯ ಮೇಲ್ಪದರು ಅಲ್ಲಲ್ಲಿ ಬಿರುಕು ಬಿಡುತ್ತಿದೆ. ರೈತರಿಗೆ ಹವಾಮಾನ ವೈಪರೀತ್ಯ ಮತ್ತು ಕೃಷಿ ಸಲಹೆಗಳ ಮಾಹಿತಿ ನೀಡಲಾಯಿತು.
ಎಲೆ ಸುರಳಿ ಪುಚಿ ಮತ್ತು ಸಣ್ಣ ಕೀಡೆಗಳು ಕಂಡು ಬಂದರೆ ತತ್ತಿನಾಶಕ ಪ್ರಪೋನಾಫಾಸ್ 2 ಮಿ.ಲೀ. ಪ್ರತಿ ಲೀಟರ್ ನೀರಿಗಗೆ ಬೆರೆಸಿ ಸಿಂಪಡಿಸುವಂತೆ ತಿಳಿಸಿದರು. ತೊಗರಿ ಸಾಲುಗಳ ನಡುವೆ ಎಡೆ-ಕುಂಟೆ ಮಾಡುವುದರಿಂದ ಬೆಳೆ ನಿರ್ವಹಣೆ ಮಾಡುವುದು ಸೂಕ್ತ. ಗ್ರಾಮೀಣ ಕೃಷಿ ತರಬೇತಿ ಕಾರ್ಯಕ್ರಮ 2 ತಿಂಗಳುಗಳ ಕಾಲ ನಡೆಯಲಿದೆ. ಸೂರ್ಯಕಾಂತಿ, ಕಲ್ಲಂಗಡಿ, ನೆಕ್ರಾಸಿಸ್ ನಂಜಾಣುರೋಗ, ಬದನೆ ಪೈಟೋಪ್ಲಾಸ್ಮ ಸಣ್ಣ ಎಲೆ, ಟಮಾಟೋ ಅಂಗಮಾರಿ ರೋಗ, ಉಳಾಗಡ್ಡಿ, ನೇರಳೆ ಮಚ್ಚೆರೋಗ ಹಾಗೂ ವಕ್ರಕಾಂಡ ನ್ಯೂನತೆ ನಿರ್ವಹಣಾ ಕ್ರಮಗಳನ್ನು ಕೃಷಿ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ವಿವರಿಸಲಾಯಿತು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…