ಬಿಸಿ ಬಿಸಿ ಸುದ್ದಿ

ಶರಣಬಸವ ವಿವಿಯಲ್ಲಿ ಅಂತರಾಷ್ಟ್ರೀಯ ಸಮ್ಮೇಳನ ನಾಳೆಯಿಂದ

ಕಲಬುರಗಿ: ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಾಲ್ಕು ವಿಶ್ವವಿದ್ಯಾಲಯಗಳು ಇವೆ. ಆದರೆ ಯಾವ ವಿಶ್ವವಿದ್ಯಾಲಯವೂ ಅಂತರಾಷ್ಟ್ರೀಯ ಸಮ್ಮೇಳನ ನಡೆಸಿಲ್ಲ. ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ಶರಣಬಸವ ವಿಶ್ವವಿದ್ಯಾಲಯದಿಂದ ಈ ಸಮ್ಮೇಳನ ಆಯೋಜಿಸಿದ್ದು ಹೆಮ್ಮಯ ಸಂಗತಿಯಾಗಿದೆ ಎಂದು ವಿವಿ ಕುಲಾಧಿಪತಿ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾರವರು ಹೇಳಿದರು.

ಇಲ್ಲಿನ ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮಹಾಮನೆಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಹು ವಿಭಾಗ ಹಾಗೂ ಹೊಸ ಶಿಕ್ಷಣ ನೀತಿ ಅನುಸಾರ ಆಯೋಜಿಸಿದ್ದ ಸಮ್ಮೇಳನ ಇದಾಗಿದೆ. ’ವಿಜ್ಞಾನ, ಎಂಜಿನೀಯರಿಂಗ್, ಮಾನವೀಯ ಮತ್ತು ಸಾಮಾಜಿಕ ವಿಜ್ಞಾನದಲ್ಲಿನ ಇತ್ತೀಚಿನ ಪ್ರವೃತ್ತಿಗಳು’ ಎಂಬ ವಿಷಯಗಳ ಬಗ್ಗೆ ಅ.೩೦ರಿಂದ ಸೆ.೧ರವರೆಗೆ ಬಹು ಶಿಸ್ತಿನ ಮೂರು ದಿನಗಳ ಕಾಲ ಅಂತರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅ.೩೦ರಂದು ಶರಣಬಸವ ಶತಮಾನೋತ್ಸವ ಸಭಾಂಗಣದಲ್ಲಿ ಬೆಳಗ್ಗೆ ೧೦.೩೦ಕ್ಕೆ ವಿಶ್ವವಿದ್ಯಾಲಯದ ಕುಲಾಧಿಪತಿ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾರವರು ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ ದಾಕ್ಷಾಯಿಣಿ ಅವ್ವಾರವರು ಕಾರ್ಯಕ್ರಮ ಉದ್ಘಾಟಿಸುವರು. ಶರಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಸಮ ಕುಲಪತಿ ಡಾ. ವಿ.ಡಿ. ಮೈತ್ರಿ ಮತ್ತು ಎನ್.ಎಸ್.ದೇವರಕಲ್, ವಿವಿ. ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ಕ್ಯಾಲಿರ್ಫೊನಿಯದ ಸೊನಮ್ ರಾಜ್ಯ ವಿಶ್ವವಿದ್ಯಾಲಯದ ಎಲೆಟ್ರಿಕಲ್ ಸೈನ್ಸ್‌ಸದ ಅಧ್ಯಕ್ಷ ಡಾ. ಫರಿದ್ ಫಾರಹ್ಮದ್, ಐರಲ್ಯಾಂಡ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಡಾ. ಮಾರಟೀನ್ ಸೆರಾನೊ, ಅಮೇರಿಕಾದ ಬಸವ ಡಿವೈನ್ ಕೇಂದ್ರದ ರೂಪಕಾ ಅಕ್ಕಾ ಉಪಸ್ಥಿತಲಿರುವರು. ವಿವಿ ಕುಲಪತಿ ಡಾ. ನಿರಂಜನ್ ನಿಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಕೇಂದ್ರಗಳ ಪ್ರಾಕೃತಿಕ ಅಂಶಗಳನ್ನು ಒಳಗೊಂಡಿರುವುದು ಸಮ್ಮೇಳನದ ವೈಶಿಷ್ಟ್ಯವಾಗಿದೆ. ಬಹು ಶಿಸ್ತಿನ ಸ್ವರೂಪದ ಮೂರು ದಿನದ ಈ ಸಮ್ಮೇಳನದಲ್ಲಿ ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳು ಒಳಗೊಂಡಿದ್ದು, ಸಮ್ಮೇಳನದ ವಿಷಯಗಳ ಕುರಿತು ಗುಣಾತ್ಮಕ ಚರ್ಚೆ ನಡೆಸಲಾಗುವುದು. ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಆಯಾ ಕ್ಷೇತ್ರದ ವಿದ್ವಾಂಸರು ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಲು ಈ ಸಮ್ಮೇಳನ ವೇದಿಕೆ ಕಲ್ಪಿಸಿಕೊಟ್ಟಿದೆ. ಈಗಾಗಲೇ ಇನ್ನೂರಕ್ಕೂ (೨೦೦) ಹೆಚ್ಚು ಸಂಶೋಧನಾ ಲೇಖನಗಳು ಬಂದಿವೆ. ಆಯ್ದ ಲೇಖನಗಳನ್ನು ಅಂತರಾಷ್ಟ್ರೀಯ ಜರ್ನಲಸ್‌ಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಆರ‍್ಟಿಫೀಸಿಯಲ್ ಇಂಟೆಲಿಜೇನ್ಸಿ ಆಂಡ ಮಶೀನ್ ಲರ್ನಿಂಗ್, ಐಓಟಿ ಆಂಡ ಬ್ಲೊಕ್ ಚೈನ್, ೩-ಡಿ ಪ್ರೀಟಿಂಗ್, ರೊಬೊಟಿಕ್ಸ್, ನ್ಯಾನೋಟೆಕ್ನೊಲೊಜಿ, ಬೈಟೆಕ್ನೊಲ್ನೊಜಿ, ಅಟೊನೊಮಸ್ ವೆಹಿಕಲ್ಸ್, ಗ್ರೀನ್ ಎನೆರಜಿ, ಗ್ರೀನ್ ಬಿಲ್ಡಿಂಗ್ಸ್/ಸ್ಟ್ರಚರ‍್ಸ್, ೫ಜಿ ಟೆಕ್ನೊಲೊಜಿ, ಲೇಸರ್ ಫಿಸಿಕ್ಸ್ ಆಂಡ ಟೆಕ್ನೊಲೊಜಿ, ಸ್ಪೆಸ್ ಸೈನ್ಸ್ ಆಂಡ ಟೆಕ್ನೊಲೊಜಿ, ಅಡ್ವಾನ್ಸ್ ಮಟೆರಿಯಲ್ಸ್, ಫ್ಲಡ್ ಡೈನಾಮಿಕ್ಸ್, ಅಡವಾನ್ಸ್‌ಡ್ ಗ್ರಾಫ್ ಥೇರಿ, ಜೇನೆಮೈಕ್ಸ್ ಆಂಡ ಪ್ರೊಟೊಮೈಕ್ಸ್, ಪ್ಲಾಂಟ್ ಪಾಥೋಲೊಜಿ, ಸೀಡ್ ಟೆಕ್ನೊಲೊಜಿ ಅಡವಾನ್ಸ್ ಇನ್ ಮ್ಯಾನೆಂಜಮೆಂಟ್, ನ್ಯೂ ಟ್ರೆಂಡ್ಸ್ ಬ್ಯುಸಿನೆಸ್ ಯಥೀಕ್ಸ್, ರಿಸೆಂಟ್ ಟ್ರೆಂಡ್ಸ್ ಆಫ್ ಜರ್ನಲಿಸಂ ಆಂಡ ಮಾಸ್ ಕಮ್ಯುನಿಕೇಶನ್, ಆಂಡ ದಿ ಯಮರಜಿಂಗ್ ಚಾಲೆಂಜೆಸ್, ಇನ್ ದಿ ಚೆಂಜಿಂಗ್ ಸಿಚ್ಯುವೇಶನ್ಸ್ ಫೇಸ್ಡ್ ಬೈ ದಿ ಜರ್ನಲಿಸ್ಟ್ ಆರ್ಫ ದಿ ಪ್ರಿಂಟ್ ಆಂಡ ಎಲೆಕ್ಟ್ರಾನಿಕ್ ಮಿಡಿಯಾ, ರಿಸೆಂಟ್ ಟ್ರೆಂಡ್ಸ್ ಇನ್ ಕನ್ನಡ ಲಿಟ್ರೆಚರ್, ಅಡ್ವಾನ್ಸ್ ಇನ್ ಇಂಡಿಯನ್ ಮ್ಯುಸಿಕ್, ಅಡ್ವಾನ್ಸ್ ಇನ್ ಇಂಗ್ಲೀಷ್ ಲಿಟ್ರೆಚರ್, ಆರ್ಯುವೇದಾ ಆಸ್ ಎ ವೇ ಆಫ್ ಲೈಫ್ ಆಂಡ ಅದರ‍್ಸ್ ಸಮ್ಮೇಳನದಲ್ಲಿ ಈ ಎಲ್ಲಾ ಆಯ್ದ ವಿಷಯಗಳ ಬಗ್ಗೆ ವಿಚಾರ ಮಂಡಿಸಲಾಗುವುದು.

ಕ್ಯಾಲಿರ್ಫೊನಿಯದ ಸೊನಮ್ ರಾಜ್ಯ ವಿಶ್ವವಿದ್ಯಾಲಯದ ಎಲೆಟ್ರಿಕಲ್ ಸೈನ್ಸ್‌ಸದ ಅಧ್ಯಕ್ಷ ಡಾ. ಫರಿದ್ ಫಾರಹ್ಮದ್, ಸಮ್ಮೇಳನದ ಪ್ರಮುಖ ಭಾಷಣಕಾರರಾಗಿದ್ದಾರೆ. ಡಾ. ಶಿವಕುಮಾರ ಮಠಪತಿ ಸಿಟಿಓ, ಡಿಇಡಬ್ಲು ಮೊಬಿಲಿಟಿ, ಫ್ರೇಮೊಂಟ್ ಕ್ಯಾಲಿರ್ಫೊನಿಯಾ, ಐರಲ್ಯಾಂಡ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಡಾ. ಮಾರಟೀನ್ ಸೆರಾನೊ, ಮಹಾರಾಷ್ಟ್ರದ ಎಸ್‌ಜಿಜಿಎಸ್ ಐಇಟಿ ನಾಂದೇಡ್‌ದ ಇನ್‌ಸ್ಟ್ರುಮೆಂಟೆನ್ ವಿಭಾಗದ ಪ್ರಾಧ್ಯಾಪಕರಾದ ಡಾ. ಬಾಳಾಸಾಹೇಬ್ ಎಂ ಪತ್ರೆ, ಪುಣೆಯ ವೆಕ್ಟೊರ್ ಇನ್‌ಫಾರ್‌ಮೇಟಿಕ್ ವ್ಯವಸ್ಥಾಪಕ ನಿರ್ದೇಶಕರು ಪ್ರಹ್ಮಾನಂದ ರೆಡ್ಡಿ, ಬೆಂಗಳೂರಿನ್ ಎನ್‌ಎಕ್ಸ್‌ಪಿ ಇಂಡಿಯನ್ ಪ್ರಾವೈಟ್ ಲಿಮಿಟೆಡ್ ಸಿನೀಯರ್ ಪ್ರಿನ್ಸಿಪಾಲ್ ಎಂಜಿನೀಯರಾದ ಶ್ರೀಧರ ಕಮಲಾಪೂರ, ಬೆಂಗಳೂರಿನ್ ಸಫೋಸ್‌ದ ನಿರ್ದೇಶಕರಾದ ಡಾ. ಗಿರಿಧರ ಕಟ್ಟಿ, ಬೆಂಗಳೂರಿನ್ ಓರ‍್ಯಾಕಲ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕರಾದ ಪ್ರಸನ್ ಕೋಠಾರಿ, ನಾಂದೆಡ್‌ದ ಎಸ್‌ಆರ್‌ಟಿಎಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಮಹಾದೇವ ಪಾಟೀಲ, ಅಮೇರಿಕಾದ ಬಸವ ಡಿವೈನ್ ಕೇಂದ್ರದ ರೂಪಕಾ ಅಕ್ಕಾ, ಬೆಂಗಳೂರಿನ್ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ, ಗೋದುತಾಯಿ ಪದವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ನೀಲಾಂಬಿಕಾ ಶೇರಿಕಾರ, ಇಸ್ಮಾರಾ ಇರಿಟ್ರೆಯಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಡಾ. ಅಬ್ದುಲ ಸಲಿಂ, ಬೆಂಗಳೂರಿನ ದಿ ಹಿಂದೂ ಇಂಗ್ಲಿಷ್ ದಿನ ಪತ್ರಿಕೆಯ ಸಂಪಾದಕರಾದ ಭಾಗ್ಯೇಶ್ರಿ ಇತರೆ ವಿಷಯಗಳ ಬಗ್ಗೆ ವಿದ್ಯಾರ್ಥಿಗಳನ್ನುದೇಶಿಸಿ ಭಾಷಣ ಮಾಡಲಿದ್ದಾರೆ. ದೇಶದಾದ್ಯಂತ ಇತರ ವಿಶ್ವವಿದ್ಯಾಲಯದ ಹಾಗೂ ಉನ್ನತ ಶಿಕ್ಷಣ ಕೇಂದ್ರದ ೧೦೦೦ ಸಾವಿರಕ್ಕೂ ಹೆಚ್ಚುಪ್ರತಿನಿಧಿಗಳು ಸಮ್ಮೆಳನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪ್ರೊ. ಶಾಂತಲಾ ನಿಷ್ಠಿ, ವಿವಿ ಕುಲಪತಿ ಡಾ. ನಿರಂಜನ್ ನಿಷ್ಠಿ, ವಿವಿ ಸಮ ಕುಲಪತಿ ಡಾ. ವಿ.ಡಿ. ಮೈತ್ರಿ, ವಿವಿ ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ಡೀನ್ ಲಕ್ಷ್ಮಿ ಮಾಕಾ ಮತ್ತು ಡಾ. ಬಸವರಾಜ ಮಠಪತಿ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

emedialine

Recent Posts

ದೇಶದಲ್ಲಿ ತಂತ್ರಜ್ಞಾನ ಕ್ರಾಂತಿ ಮಾಡಿದ್ದೇ ರಾಜೀವ್ ಗಾಂಧಿ; ಡಿಸಿಎಂ ಡಿ.ಕೆ.ಶಿವಕುಮಾರ.

ಕಲಬುರಗಿ; ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಈ ದೇಶದಲ್ಲಿ ತಂತ್ರಜ್ಞಾನ ದಲ್ಲಿ ಕ್ರಾಂತಿ ಮಾಡಿದ ಮಹಾನ್ ನಾಯಕರಾಗಿದ್ದಾರೆ. ಅವರ…

1 hour ago

ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ

ಕಲಬುರಗಿ; ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ,ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಸಿದ ಸಾಮಾಜಿಕ ಹರಿಕಾರರು ದಿವಂಗತ ಡಿ…

1 hour ago

ಚಿತ್ತಾಪುರ; ಕಚೇರಿಯಲ್ಲಿ ನಾರಾಯಣಗುರು ಡಿ.ದೇವರಾಜ ಅರಸು ಜಯಂತಿ ಆಚರಣೆ

ಚಿತ್ತಾಪುರ; ಪಟ್ಟಣದ ತಹಶೀಲ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ…

1 hour ago

ಗೃಹಲಕ್ಷ್ಮೀ ಯೋಜನೆ ಮತ್ತು ಗ್ಯಾರಂಟಿ ಯೋಜನೆಯ ಪೂರ್ಣ ಮಾಹಿತಿ ಪಡೆಯಿರಿ; ಪಾಶಾ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಗೃಹಲಕ್ಷ್ಮಿ ಯೋಜನೆ ಮತ್ತು ಗ್ಯಾರಂಟಿ ಯೋಜನೆ ಕುರಿತು ಪೂರ್ಣ ಮಾಹಿತಿ ಪಡೆಯಬೇಕು ಎಂದು ತಾಪಂ…

1 hour ago

ಸಮಾಜ ಸುಧಾರಣೆಗೆ ಬದುಕು ಸಮರ್ಪಿಸಿದ ನಾರಾಯಣ ಗುರೂಜಿ : ಸಿದ್ದಲಿಂಗ ಶ್ರೀ

ರಾವೂರ: ಕೇರಳ ರಾಜ್ಯದಲ್ಲಿ ತಲೆತ್ತಿದ್ದ ಜಾತೀಯತೆ, ಅಸ್ಪೃಶ್ಯತೆ, ಸ್ತ್ರೀ ಅಸಮಾನತೆ, ತಾರತಮ್ಯಗಳ ವಿರುದ್ಧ ಹಿಂದುಳಿದ ಕುಲದಲ್ಲಿ ಜನಿಸಿದ ನಾರಾಯಣ ಗುರುಗಳು…

1 hour ago

ದಸ್ತಿ ಅವರಿಗೆ ದಶಕಗಳ ಹೋರಾಟಕ್ಕೆ ಸಂದ ಡಾಕ್ಟರೇಟ್ ಗೌರವ

ಕಲಬುರಗಿ: ಕಲ್ಯಾಣ ನಾಡಿನ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಅವರ ದಶಕಗಳ ಹೋರಾಟವನ್ನು ಗುರುತಿಸಿ ಗುಲ್ಬರ್ಗ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420