ಬಿಸಿ ಬಿಸಿ ಸುದ್ದಿ

ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಅಧ್ಯಾಯಕ್ಕೆ ಚಾಲನೆ

ಕಲಬುರಗಿ: ವಿದ್ಯಾರ್ಥಿಗಳಲ್ಲಿ ಅತ್ಮ ವಿಶ್ವಾಸ ಹೆಚ್ಚಿಸಿ ಅವರ ತಾಂತ್ರಿಕ ಕೌಶಲ್ಯವನ್ನು ಪ್ರದರ್ಶಿಸಲು ಅನುವು ಮಾಡಿಕೊಡುವುದು, ಅವರಿಗಾಗಿ ಕಾರ್ಯಾಗಾರಗಳನ್ನು ಏರ್ಪಡಿಸುವುದು ಹಾಗೂ ಅವರ ಇತರ ಶೈಕ್ಷಣಿಕ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಿಕೊಡುವುದೇ ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ (ಐಎಸಟಿಇ) ಮೂಲ ಉದ್ದೇಶ, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇಲ್ಲಿನ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಲಯದ ಪ್ರಾಚಾರ್ಯರಾದ ಡಾ.ಎಸ್.ಎಸ್.ಹೆಬ್ಬಾಳ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಇಂದು ಇಲ್ಲಿನ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ದೂರ ಸಂಪರ್ಕ ವಿಭಾಗದಲ್ಲಿ ಏರ್ಪಡಿಸಿದ ಐಎಸಟಿಇ ವಿದ್ಯಾರ್ಥಿ ಅಧ್ಯಾಯವನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದ್ದು ನವದೆಹಲಿಯಲ್ಲಿ ತನ್ನ ಕೇಂದ್ರಸ್ಥಾನವನ್ನು ಹೊಂದಿದೆ. ಈ ಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ತಾಂತ್ರಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದನ್ನು ವಿದ್ಯಾರ್ಥಿ ಅಧ್ಯಾಯದ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದೆ, ವಿದ್ಯಾರ್ಥಿಗಳು ಇದರ ಪೂರ್ಣ ಲಾಭ ಪಡೆಯಬೇಕೆಂದು ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾವಿದ್ಯಾಲಯದ ಡೀನ ಅಕಾಡೆಮಿಕ ಡಾ. ಸಿದ್ಧರಾಮ ಪಾಟೀಲ ನುಡಿದರು.

ಸಮಾರಂಭಕ್ಕೆ ಆಗಮಿಸಿದ ಟೆಕ್ಯೂಪ – ೩ ಸಂಚಾಲಕರಾದ ಪ್ರೊ. ಶರಣ ಪಡಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಸದಸ್ಯರಾಗಿ ವಿದ್ಯಾರ್ಥಿ ಅಧ್ಯಾಯದಡಿಯಲ್ಲಿ ವಿವಿಧ ವಿಚಾರ ಸಂಕಿರಣ ಹಾಗೂ ಸಮಾಜಕ್ಕೆ ನೆರವಾಗುವಂತಹ ವಿದ್ಯಾರ್ಥಿ ಪ್ರಾಜೆಕ್ಟಗಳನ್ನು ಕೂಡ ಮಾಡಬಹುದಾಗಿದೆ ಎಂದು ಕೀವಿ ಮಾತು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಭಾಗದ ಮುಖ್ಯಸ್ಥರಾದ ಡಾ. ರಾಜು ಯಾನಮಶೆಟ್ಟಿ ಮಾತನಾಡಿ ತಮ್ಮ ವಿಭಾದಲ್ಲಿ ಸಾಕಷ್ಟ್ರು ಸಂಶೋಧನಾ ಕಾರ್ಯಗಳು ನಡೆದಿದ್ದು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ತಾಂತ್ರಿಕ ಸೌಲಭ್ಯವನ್ನು ಕಲ್ಪಸಿಕೊಡಲಾಗಿದೆ, ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಸದಸ್ಯರಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಸಂಯೋಜಕರಾಗಿ ವಿಭಾಗದ ಡಾ. ಗೀತಾ ಪಾಟೀಲ ಅವರು ತಮ್ಮ ಕಾರ್ಯವನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕರು, ಉಪ ಪ್ರಾಧ್ಯಾಪಕರು, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

emedialine

Recent Posts

ಕಲಬುರಗಿಯಲ್ಲಿ ಕೆ.ಇ.ಎ ಪರೀಕ್ಷೆ ಸುಸೂತ್ರ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಕಲ್ಯಾಣ ಕರ್ನಾಟಕ ರಸ್ತೆ…

3 hours ago

ತಿಪಟೂರು ಕೃಷ್ಣಗೆ ” ಕಾಯಕ ರತ್ನ ಪ್ರಶಸ್ತಿ ” ಪ್ರದಾನ

ಬೀದರ್: ಮಾಧ್ಯಮ ಮತ್ತು ಸಾಮಾಜಿಕ ಸಂಘಟನೆ ಕ್ಷೇತ್ರದಲ್ಲಿ ದೀರ್ಘ ಸೇವೆಯನ್ನು ಗುರ್ತಿಸಿ ತಿಪಟೂರು ಕೃಷ್ಣ ಅವರಿಗೆ " ಕಾಯಕ ರತ್ನ…

3 hours ago

ಕೃಷಿ ವಿಜ್ಞಾನಿ ಡಾ.ಎಸ್.ಎ.ಪಾಟೀಲ್ ಹೃದಯಾಘಾತದಿಂದ ನಿಧನ

ಕಲಬುರಗಿ: ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಗಳಾಗಿದ್ದ ಡಾ.ಎಸ್.ಎ.ಪಾಟೀಲ್ ಬಿರಾಳ (80) ಅವರು ನಿಧನರಾಗಿದ್ದಾರೆ.…

6 hours ago

ಜಲಮೂಲ, ಪರಿಸರ ಸಂರಕ್ಷಣೆಯತ್ತ ಯುವಜನತೆ ಸಕ್ರಿಯರಾಗಲಿ: ಹುಲಿಕುಂಟೆ ಮೂರ್ತಿ

ಬೆಂಗಳೂರು: ಯುವಜನತೆ ನದಿಮೂಲಗಳು ಹಾಗೂ ಪರಿಸರ ಸಂರಕ್ಷಣೆಯ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕೆಂದು…

6 hours ago

ಕಲಬುರಗಿ ಜಿಲ್ಲಾ ಗಾಣಿಗ ನೌಕರರ ಸಭೆ 17ಕ್ಕೆ: ಸಂಗನಗೌಡ ಪಾಟೀಲ್‌

ಕಲಬುರಗಿ: ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘದ ಸದಸ್ಯರ ಸಭೆ ಜು.17ರಂದು ಬೆಳಗ್ಗೆ 10.30ಕ್ಕೆ ಕನ್ನಡ ಭವನದಲ್ಲಿ ನಡೆಯಲಿದ್ದು, ಸಂಘದ…

8 hours ago

371 (ಜೆ) ಸಮರ್ಪಕ ಅನುಷ್ಠಾನಗೊಳಿಸದಿದ್ದರೆ ಮತ್ತೊಮ್ಮೆ ಉಗ್ರ ಹೋರಾಟದ ಎಚ್ಚರಿಕೆ

ಕಲಬುರಗಿ: 371(ಜೆ) ಕಲಂ ಸಮರ್ಪಕ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಿ ಕಚೇರಿ ಸ್ಥಾಪಿಸಬೇಕು.ಇಲ್ಲದಿದ್ದಲ್ಲಿ ಮತ್ತೊಮ್ಮೆ ಕಲ್ಯಾಣ ಕರ್ನಾಟಕದ ಎಲ್ಲಾ…

8 hours ago