ಕಲಬುರಗಿ: ನಗರದ ಕನ್ನಡ ಭವನದ ಪ್ರಾಂಗಣದಲ್ಲಿ ಲಿಂ.ಲಕ್ಷ್ಮೀಬಾಯಿ ಗೌಡತಿ ಹೆಚ್. ಪೊ.ಪಾಟೀಲ ಹಾಗೂ ಲಿಂ. ಮಲ್ಕಣ್ಣಗೌಡ ಪೊ.ಪಾಟೀಲ ಕಲ್ಲೂರ ಅವರ ಸ್ಮರಣಾರ್ಥವಾಗಿ ಬಿ.ಎಂ.ಪಾಟೀಲ ಕಲ್ಲೂರ ಅವರು ಒಂದು ಸಭಾ ಕೊಠಡಿಯನ್ನು ನಿರ್ಮಿಸಿಕೊಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅದರ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೆ.ಕೆ.ಆರ್.ಡಿ.ಬಿ.ಅಧ್ಯಕ್ಷ ಡಾ. ಅಜಯಸಿಂಗ್, ಭಾಷೆ ಎಂಬುದು ನಮ್ಮ ಸಂಸ್ಕøತಿಯ ಪ್ರತಿಬಿಂಬವಾಗಿದೆ. ಮನುಷ್ಯ ತಲೆಮಾರಿನಿಂದ ಬಳಸಿಕೊಂಡು ಬಂದಿರುವ ಭಾಷೆಗೆ ಒಂದು ಸಾಂಸ್ಕøತಿಕ ಆವರಣ ಬಂದಿರುತ್ತದೆ. ಅದಕ್ಕೆ ನಾವು ಮಾತೃಭಾಷೆ ಎಂದು ಕರೆಯುತ್ತೇವೆ. ಮಾತೃಭಾಷೆಯ ಮೂಲಕವೇ ನಮ್ಮ ಜೀವನವಾಗಲೀ ಅಥವಾ ಬದುಕು ಆರಂಭವಾಗಿರುತ್ತದೆ. ಆದ್ದರಿಂದ ಭಾಷೆ ಮತ್ತು ಬದುಕು ಬೇರೆಯಲ್ಲ. ಅವೆರಡೂ ಒಂದು ನಾಣ್ಯದ ಎರಡು ಮುಖಗಳಾಗಿವೆ ಎಂದ ಅವರು, ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ನಾಡಿನ ಅತ್ಯಂತ ಶ್ರೇಷ್ಠ ಸಾಹಿತ್ಯ, ಸಾಂಸ್ಕøತಿಕ ಸಂಘಟನೆಯಾಗಿದ್ದು, ಇದರಿಂದ ಕನ್ನಡ ಸಾಹಿತ್ಯ ಮತ್ತು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ವಿಜಯಕುಮಾರ ತೇಗಲತಿಪ್ಪಿ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿತ್ಯ ನೂತನ ಹೊಸ ಆಲೋಚನೆಗಳಿಂದ ಕೂಡಿದ, ವಿಭಿನ್ನ ಪ್ರಯೋಗದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಿ ಅತ್ಯಂತ ಪ್ರಾಮಾಣಿಕತೆಯ ಮೂಲಕ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಕನ್ನಡ ಭವನದ ಅಭಿವೃದ್ಧಿಗಾಗಿ ಬಾಕಿ ಉಳಿದ ಕಾಮಗಾರಿಗಳಿಗಾಗಿ ಮಂಡಳಿಯ ವತಿಯಿಂದ ಸೂಕ್ತ ಅನುದಾನ ಒದಗಿಸಿಕೊಡುತ್ತೇನೆ ಎಂಬ ಭರವಸೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸರಕಾರದ ಸಹಾಯ ಪಡೆಯುವದರ ಜತೆಗೆ ಸಾಹುಕಾರರ ಸಹಾಯ ಪಡೆದು ಕನ್ನಡ ಭವನದ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ. ಪರಿಷತ್ತಿನ ನಿರಂತರವಾದ ಸಾಂಸ್ಕøತಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ಭವನದ ಭೌತಿಕ ಕಟ್ಟಡಗಳ ಅಭಿವೃದ್ಧಿಗಾಗಿಯೂ ಕೂಡ ಪದಾಧಿಕಾರಿಗಳೆಲ್ಲರೂ ಸೇರಿ ಶ್ರಮಿಸುತ್ತಿದ್ದೇವೆ. ಸಾಂದರ್ಭಿಕ ಸಂದರ್ಭಗಳನ್ನು ಬಳಸಿಕೊಂಡು ಆಯಾ ವರ್ಗಕ್ಕೆ ಸಂಬಂಧಿಸಿದ ಸಮ್ಮೇಳನಗಳನ್ನು ಏರ್ಪಡಿಸಿ ಎಲ್ಲಾ ಕನ್ನಡದ ಮನಸ್ಸುಗಳನ್ನು ಒಂದುಗೂಡಿಸಿ, ಕನ್ನಡದ ಸಂಸ್ಕøತಿಯ ಚಿಂತನೆಯನ್ನು ಸದಾ ಕಾಲ ನೆನಪಿಸುತ್ತ ಕನ್ನಡ ಕಟ್ಟುವ ಕಾರ್ಯವನ್ನು ಮಾಡಲಾಗುತ್ತಿದೆ. ಆ ಮೂಲಕ ಕನ್ನಡ ಭಾಷೆಯನ್ನು ನಿತ್ಯ ಬಳಸುವ ಮೂಲಕ ಕನ್ನಡತನವನ್ನು ನಾವೆಲ್ಲರೂ ಸದಾ ಕಾಲ ಉಳಿಸಿಕೊಳ್ಳಬೇಕಾಗಿದೆ ಎಂದರು. ಕನ್ನಡ ಕಟ್ಟುವ ಕಾರ್ಯಕ್ಕೆ ಸರ್ವರೂ ಕೈಜೋಡಿಸಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಸಾರಂಗಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ವiಹಾಸ್ವಾಮಿಗಳು, ಸೊನ್ನ ವಿರಕ್ತ ಮಠದ ಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಜರುಗಿದ ಸಮಾರಂಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ನೆಲೋಗಿ, ಹೆಚ್.ಕೆ.ಇ. ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ, ಪ್ರಮುಖರಾದ ರುದ್ರಗೌಡ ಪಾಟೀಲ ಕಲ್ಲೂರ, ಸಂಗಣ್ಣಗೌಡ ಪಾಟೀಲ ಕಲ್ಲೂರ, ಬಿ.ಎಂ.ಪಾಟೀಲ ಕಲ್ಲೂರ, ರಾಜಶೇಖರ ಸಿರಿ ಮಾತನಾಡಿದರು.
ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಠಗಿ, ಶರಣರಾಜ್ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ಬಸ್ವಂತರಾಯ ಕೋಳಕೂರ, ಬಾಬುರಾವ ಪಾಟೀಲ, ಶ್ರೀಕಾಂತ ಪಾಟೀಲ ತಿಳಗೂಳ, ದೌಲತರಾವ ಮಾಲಿ ಪಾಟೀಲ, ಶರಣಕುಮಾರ ಬಿಲ್ಲಾಡ, ವಿಶ್ವನಾಥ ಪಾಟೀಲ ಗೌನಳ್ಳಿ, ಮಂಜುನಾಥ ಕಂಬಾಳಿಮಠ, ಗುರುಬಸಪ್ಪ ಸಜ್ಜನಶೆಟ್ಟಿ, ಚಂದ್ರಶೇಖರ ಪಾಟೀಲ ಯಳಸಂಗಿ, ಸಂಗಣ್ಣಗೌಡ ಪಾಟೀಲ ಗುಲ್ಯಾಳÉ, ರಾಜಶೇಖರ ಯಂಕಂಚಿ, ಸಿದ್ಧಣ್ಣಗೌಡ ಪಾಟೀಲ ಕಲ್ಲೂರ, ಜಗದೇವಪ್ಪ ಅಂಜುಟಗಿ, ಶಂಕರ ಹಾದಿಮನಿ, ಮಲ್ಲೇಶಿ ಯಲಗೋಡ, ಪ್ರಭವ ಪಟ್ಟಣಕರ್, ವಿಜಯಕುಮಾರ ಸಾತನೂರ, ರಜಾಕ್ ಮನಿಯಾರ್, ಚಂದು ಹೊಸಮನಿ, ಶಿವಾನಂದ ದ್ಯಾಮಗೊಂಡ, ಶರಣು ಹೊಸಮನಿ, ಚಂದ್ರು ಗೌಡರ್, ಸಂಗನಬಸವ ಹಿರೇಮಠ, ರೇವಪ್ಪ ಕೌಲಗಿ, ಭೀಮರಾಯ ಸಂದಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…