ಕಲಬುರಗಿ: ಮಾಜಿ ಸಚಿವ ದಿವಂಗತ ಜಿ ರಾಮಕೃಷ್ಣ ಅವರ 87ನೇ ಜನ್ಮದಿನವನ್ನು ಮಾದಿಗ ಸಮುದಾಯದ ಮುಖಂಡರು ಹಾಗೂ ರಾಮಕೃಷ್ಣ ಅವರ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು.
ನಗರದ ಡಾ. ಜಗಜೀವನ ರಾಮ್ ಅವರ ಪುತ್ಥಳಿ ಆವರಣದಲ್ಲಿ ಜಿಲ್ಲಾ ಮಾದಿಗ ಸಮುದಾಯ ಹಾಗೂ ಜಿ ರಾಮಕೃಷ್ಣ ಅಭಿಮಾನಿ ಬಳಗದಿಂದ ಆಯೋಜನೆ ಮಾಡಲಾಗಿದ್ದ ದಿವಂಗತ ಜಿ ರಾಮಕೃಷ್ಣ ಅವರ 87ನೇ ವರ್ಷದ ಜನ್ಮದಿನ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯಾ ಗುತ್ತೆದಾರ್ ಅವರು ಕೆಕ್ ಕತ್ತರಿಸಿದರು, ದಿ. ಜಿ ರಾಮಕೃಷ್ಣ ಅವರ ಭಾವಚಿತ್ರಕ್ಕೆ ಕೆಕೆ ಆರ್ ಡಿ ಬಿ ಅಧ್ಯಕ್ಷ ಅಜಯ ಸಿಂಗ್ ಹಾಗೂ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಅರುಣಕುಮಾರ್ ಪಾಟೀಲ್ ಅವರು ಪುಷ್ಪ ನಮನ ಸಲ್ಲಿಸುವ ಸಲ್ಲಿಸಿದರು.
ಸಮಾರಂಭದಲ್ಲಿ ಅಭಿಮಾನಿಗಳಿಂದ ಅನ್ನ ಸಂತರ್ಪಣೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರು ಜಿ ರಾಮಕೃಷ್ಣ ಅವರ ಸೇವೆ ಹಾಗೂ ಸಾಧನೆಯನ್ನು ಸ್ಮರಿಸಿದರು.
ಕಾಂಗ್ರೆಸ್ ಯುವ ಮುಖಂಡರಾದ ವಿಜಯಕುಮಾರ್ ಜಿ ರಾಮಕೃಷ್ಣ, ಪರಮೇಶ್ವರ ಖಾನಾಪುರ, ಶ್ಯಾಮ ನಾಟೇಕರ್, ರಾಜು ವಾಡೆಕರ್, ಮಾಣಿಕ್ ಕಟ್ಟಿಮನಿ, ದಶರಥ ಕಲಗುರ್ತಿ, ರಾಜು ಕಟ್ಟಿಮನಿ, ಶ್ರೀನಿವಾಸ ರಾಮನಾಳಕರ್, ಮಲ್ಲಿಕಾರ್ಜುನ ದೊಡ್ಡಮನಿ, ಮಂಜುನಾಥ ನಾಲವಾರಕರ್, ಮಲ್ಲಪ್ಪ ಚಿಗನೂರ, ಶರಣು ಸಗರಕರ್, ಪ್ರಕಾಶ ಮಾಳಗೆ, ಮನೋಹರ ಬೀರನೂರ, ರಮೇಶ ವಾಡೇಕಾರ, ವೇಕಂಟೇಶ ನಾಟೇಕಾರ, ಅಂಬಾರಾಯ ಚಲಗೇರಾ, ಮಾರುತಿ ಚಿತ್ತಾಪುರ, ಮಲ್ಲು ಜೀನಕೇರಿ, ಬಂಡೇಶ ರತ್ನಡಗಿ, ವಂದನಾ ದಂಡೋತಿ, ಹಣಮಂತ ಅಂಗಲಗಿಕರ್, ಪ್ರಹ್ಲಾದ್ ಹಡಗಿಲ್, ಗೋಪಾಲ ನಾಟೇಕಾರ, ಸಂಚೀನ ಕಟ್ಟಿಮನಿ, ಸಂಜು ಕಟ್ಟಿಮನಿ, ಚಂದಪ್ಪ ಕಟ್ಟಿಮನಿ, ಸುರೇಶ ಇಟಗಿ, ದತ್ತು ಹೈಯಾಳಕರ್, ವಿಠ್ಠಲ ವಾಲಿಕಾರ, ಶ್ರೀಮಂತ ಭಂಡಾರಿ, ಗುರುರಾಜ್ ಭಂಡಾರಿ, ಚಂದ್ರಕಾಂತ ನಾಟೀಕಾರ, ಬಸವರಾಜ ಕಟ್ಟಿಮನಿ, ರಂಜೀತ್ ಮೂಲಿಮನಿ, ರವಿ ಸಿಂಗೆ, ಶರಣಪ್ಪ ಯಳಸಂಗಿ, ಶರಣು ಪಗಲಾಪೂರ, ಹರಿಶ್ಚಂದ್ರ ದೊಡ್ಡಮನಿ, ವಿನೋದ ಇಟಗಿ, ಪ್ರದೀಪ ಬಾಚನಳಕರ್, ಸಚಿನ ಕೊಲ್ಲೂರ, ವಿಶಾಲ ಕೋರಳ್ಳಿ, ಬಸವರಾಜ ಜವಳಿ, ಅನೀಲ ಡೋಂಗುರಗಾವ, ರಾಹುಲ ಮೇತ್ರೆ, ರಾಜು ಮದ್ರಾಬಿ ಸೇರಿದಂತೆ ಅನೇಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…
ಕಲಬುರಗಿ: ನಗರದ ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ-ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನ…
ಶಹಾಬಾದ: ಮಾನವೀಯ ಮೌಲ್ಯಗಳು ವಿದ್ಯಾರ್ಥಿ ಯುವಜನರ ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕೆಂದು ಎಸ್ಎಸ್ ಮರುಗೋಳ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ.ಬಿ. ಬಿಲ್ಲವ…
ಶಹಾಪುರ : 26 : ಚಿಕ್ಕ ವಯಸ್ಸಿನಲ್ಲಿಯೆ ಹಿರಿದಾದ ಜ್ಞಾನವನ್ನು ಹೊಂದಿದ್ದ ಚೆನ್ನಬಸವಣ್ಣ ಷಟಸ್ಥಲ ಜ್ಞಾನಿ ಎಂದು ಕರೆಯಿಸಿಕೊಂಡರು. ಬಸವಣ್ಣನವರ…
ಶಹಾಬಾದ: ನಗರಸಭೆಯ ವಾರ್ಡ ನಂ.3 ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಜೀದ್ ಖಾನ್ ಜಮಾದಾರ ಅವರು ಗೆಲುವು ಸಾಧಿಸಿದ್ದಾರೆ. ನಗರದ…
ಶಹಾಬಾದ: ಜಾತಿ-ಬೇಧ ಎನ್ನದೇ ಸರ್ವರಿಗೂ ಮೂಲಭೂತ ಹಕ್ಕನ್ನು ಒದಗಿಸಿ, ಬದುಕುವ ವಾತಾವರಣ ಸೃಷ್ಠಿಸಿದ್ದೇ ಡಾ. ಬಿ .ಆರ್. ಅಂಬೇಡ್ಕರ್ ಬರೆದ…