ಕಲಬುರಗಿ: ಬುದ್ಧಿಗಿಂತ ವಿವೇಕ ಮುಖ್ಯ. ದೇಹದ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ, ಬೌದ್ಧಿಕ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬೇಕು ಎಂದು ಸಾಣೇಹಳ್ಳಿ ಡಾ.ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಹಮತ ವೇದಿಕೆ ವತಿಯಿಂದ ಇಂದು ನಡೆದ ‘ಮತ್ತೆ ಕಲ್ಯಾಣ’ ಅಭಿಯಾನದ ಅಂಗವಾಗಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬುದ್ದಿಗೆ ಸರಿಯಾದ ದಾರಿ, ನೈತಿಕ ನೆಲೆಗಟ್ಟು, ಸುಬುದ್ಧಿ, ಸುಜ್ಞಾನ ದೊರೆಯಬೇಕಾದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ದೇಹ, ಮನಸ್ಸು, ಬುದ್ಧಿ ಗಟ್ಟಿಯಾಗಿದ್ದಾಗ ಮಾತ್ರ ಆಧ್ಯಾತ್ಮದ ಅರಿವು ಉಂಟಾಗಲಿದೆ ಎಂದು ಹೇಳಿದರು.
ಬಸವಾದಿ ಶರಣರು ಓದಿಗಿಂತ ಅನುಭವ ಶ್ರೀಮಂತಿಕೆ ಬೆಳೆಸಿಕೊಂಡಿದ್ದರು. ವಚನ ವಿಚಾರಗಳು ಪಠ್ಯಕ್ಕೆ ಪೂರಕ. ಬದುಕಿಗೆ ಲೇಸು ನೀಡುವ ವಿಚಾರಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ. ಈ ಸಮಾಜದಲ್ಲಿ ನರಿ ಬುದ್ದಿಯವರಿಂದ ಘಾತುಕಕಾರ್ಯಗಳು ನಡೆಯುತ್ತಿದ್ದು, ಅವುಗಳನ್ನು ತಪ್ಪಿಸಿ ಸಮಾಜದಲ್ಲಿ ಶಾಂತಿ, ಸಮಾಧಾನ, ಸಹಬಾಳ್ವೆ ನಡೆಸುವ ಪರಿಶುದ್ಧ ವಾತಾವರಣ ಶರಣರ ವಚನಗಳ ಬೆಳಕಿನಲ್ಲಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಶರಣ ಸಾಹಿತಿ-ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟೆ, ಪ್ರಗತಿಪರ ಚಿಂತಕ ಪ್ರೊ.ಆರ್.ಕೆ.ಹುಡಗಿ, ಮನೋವಿಜ್ಞಾನ ಪ್ರಾಧ್ಯಾಪಕ ಡಾ.ವೆಂಕಟರೆಡ್ಡಿ ರುದ್ರವಾರ ಸಂವಾದ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಪ್ರಚಲಿತ ಸಮಸ್ಯೆಗಳಿಗೆ ವಚನಗಳ ಉಧಾಹರಣೆಗಳೊಂದಿಗೆ ಉತ್ತಿರಿಸಿದರು.
ಮತ್ತೆ ಕಲ್ಯಾಣ ಅಭಿಯಾನದ ಸ್ವಾಗತ ಸಮಿತಿ ಅಧ್ಯಕ್ಷ ಶರಣು ಪಪ್ಪಾ, ಸಂಚಾಲಕ ಸುನೀಲ ಹುಡಗಿ, ಪ್ರಮುಖರಾದ ವಿಜಯಕುಮಾರ ತೇಗಲತಿಪ್ಪಿ, ರಾಜಶೇಖರ ಯಂಕಂಚಿ, ಶಿವರಂಜನ್ ಸತ್ಯಂಪೇಟೆ, ರವೀಂದ್ರ ಶಾಬಾದಿ, ಆರ್.ಜಿ.ಶಟಗಾರ, ಬಸವರಾಜ ಮೊರಬದ, ಮಾಲತಿ ರೇಷ್ಮಿ, ಶಿವಲೀಲಾ ಕಲಗುರ್ಕಿ, ಬಿ.ಎಂ.ಪಾಟೀಲ ಕಲ್ಲೂರ, ಸತೀಶ ಸಜ್ಜನ್, ಮಹಾಂತೇಶ ಕಲಬುರಗಿ, ಅಯ್ಯಣ್ಞನಗೌಡ ಪಾಟೀಲ, ಮಾರುತಿ ಗೋಖಲೆ, ದತ್ತಾತ್ರೇಯ ಇಕ್ಕಳಕಿ, ಪ್ರಭುಲಿಂಗ ಮಹಾಗಾಂವಕರ್, ನಳಿನಿ ಮಹಾಗಾಂವಕರ್, ಸಂಗೀತಾ ಕಾಡಾದಿ, ವಿಲಾಸವತಿ ಖೂಬಾ, ರೇಣುಕಾ ಡಾಂಗೆ, ಪ್ರಸನ್ನ ವಾಂಜರಖೇಡೆ, ಬಸವರಾಜ ಕಟ್ಟಿ, ಡಾ.ಸಂದೀಪ ಬಿ., ಶಿವಶರಣ ದೇಗಾಂವ, ಸಿದ್ಧರಾಮ ಹೊನ್ಕಲ್, ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಪ್ರೊ.ಕುಪೇಂದ್ರ ಪಾಟೀಲ ಸೇರಿದಂತೆ ಜಿಲ್ಲೆಯ ಸುತ್ತಮುತ್ತಲಿನ್ ತಾಲೂಕುಗಳಿಂದ ಆಗಮಿಸಿದ ಬಸವಾನುಯಾಯಿಗಳು ಭಾಗವಹಿಸಿದ್ದರು.
ಸಂವಾದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳ ಸುರಿಮಳೆ: ಕಾರ್ಯಕ್ರಮದ ಉದ್ಘಾಟನಾ ನಂತರ ವಿದ್ಯಾರ್ಥಿಗಳು ತಮ್ಮೊಳಗಿನ ಅನೇಕ ಪ್ರಶ್ನೆಗಳಿಗೆ ವೇದಿಕೆ ಮೇಲಿದ್ದವರಿಂದ ಉತ್ತರ ಪಡೆದ ಅಪರೂಪದ ಪ್ರಸಂಗ ಜರುಗಿತು. ಹೆಣ್ಣು ಮಾಯೆಯೆಂಬರು, ಹೊನ್ನು-ಮಣ್ಣು ಮಾಯೆಯಂಬರು ಇದು ನಿಜವೇ…! ಆಧ್ಯಾತ್ಮ ಎಂದರೇನು? ಗುರು ಮತ್ತು ಭಕ್ತ ಇವರಲ್ಲಿ ಯಾರು ಶ್ರೇಷ್ಠರು? ದೇವರಿಗೆ ಹಾಲೆರೆಯುವುದು, ಅಭಿಷೇಕ ಮಾಡುವುದು ತರವೇ? ಮಾಟ-ಮಂತ್ರಗಳನ್ನು ನಂಬಬೇಕೇ? ಯಜ್ಞ-ಯಾಗ-ಬಲಿ ಕೊಡುವ ಪದ್ಧತಿ ಸರಿಯೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವ ಮೂಲಕ ವೇದಿಕೆ ಮೇಲಿದ್ದವರನ್ನು ಅಚ್ಚರಿಗೊಳಿಸಿದರು.
ಹೆಣ್ಣು, ಹೊನ್ನು, ಮಣ್ಣು ಮಾಯೆ ಅಲ್ಲ, ಮನದ ಮುಂದಣ ಆಸೆಯೇ ಮಾಯೆ, ಜಂಗಮ ಜಾತಿ ಅಲ್ಲ, ಅದೊಂದು ತತ್ವ, ಲಿಂಗಾಯತ ಎಂಬುದು ಜಾತಿ ಅಲ್ಲ, ಅದೊಂದು ಸ್ವತಂತ್ರ ಧರ್ಮ, ಗುರು ಮತ್ತು ಭಕ್ತರು ಆಯಾ ಹಂತದಲ್ಲಿ ಶ್ರೇಷ್ಠರಾಗುತ್ತಾರೆ. ಕಲ್ಲು, ಮಣ್ಣು, ಕಟ್ಟಗೆಗಳಲ್ಲಿ ದೇವರಿಲ್ಲ. ಹೀಗಾಗಿ ಅಭಿಷೇಕ, ಹಾಲೆರೆಯುವುದು ತಪ್ಪು. ಮಾತ-ಮಂತ್ರಗಳನ್ನು ಯಾರೂ ನಂಬಬಾರದು ಎಂದು ವೇದಿಕೆ ಮೇಲಿದ್ದ ಗಣ್ಯರು ಅಭಿಪ್ರಾಯಪಟ್ಟರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…