ವಾಡಿ; ಪಟ್ಟಣದ ಬಸ್ ನಿಲ್ದಾಣ ಹತ್ತಿರವಿರುವ ಹನುಮಾನ ಮಂದಿರದಲ್ಲಿ ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆಯಾಗಿದ್ದರಿಂದ ಪಕ್ಷದ ವತಿಯಿಂದ ವಿಶೇಷ ಪೊಜೆ ಸಲ್ಲಿಸಿ ವಿಜಯೋತ್ಸವ ಆಚರಿಸಲಾಯಿತು.ಪಟಾಕಿ ಸಿಡಿಸಿ, ಹಣ್ಣು, ಸಿಹಿ ಹಂಚಿ ಸಂಭ್ರಮ ಹಂಚಿಕೊಂಡ ಕೇಂದ್ರ ಮತ್ತು ರಾಜ್ಯ ಬಿಜೆಪಿ ಮುಖಂಡರಿಗೆ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹಾಗು ಪುರಸಭೆ ವಿರೋಧ ಪಕ್ಷದ ಮಾಜಿ ನಾಯಕ ಭೀಮಶಾ ಜೀರೋಳ್ಳಿ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಿ ಬಲಗೊಳ್ಳಲು, ಹಿಂದೆ ಪಕ್ಷ ಅಧಿಕಾರಕ್ಕೆ ಬಂದಿರುವುದಕ್ಕೆ ಅವರು ಶ್ರಮ ಬಹಳಷ್ಟಿದೆ. ಮುಂದೆ ಎಲ್ಲಾ ಸ್ತರಗಳಲ್ಲಿ ಪಕ್ಷ ಅಧಿಕಾರ ಬರುವುದು ಶತ ಸಿದ್ದವಾಗಿದೆ, ಪ್ರಬಲ ಲಿಂಗಾಯತ ಸಮುದಾಯದ ಜೊತೆಗೆ ಎಲ್ಲಾ ಸಮುದಾಯದ ಯುವಕರನ್ನು ಬಿಜೆಪಿಯತ್ತ ಸೆಳೆಯಲು ಇವರ ಆಯ್ಕೆಯ ಅವಶ್ಯಕತೆ ಅರಿತು ಆಯ್ಕೆ ಮಾಡಿದ ನಮ್ಮ ನಾಯಕರುಗಳಿಗೆ ಧನ್ಯವಾದಗಳು ಎಂದರು.
ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಬಿವೈ ವಿಜಯೇಂದ್ರ ಅವರು ಆಯ್ಕೆಯಿಂದ ನಮ್ಮೆಲ್ಲರಿಗೂ ಪಕ್ಷ ಸಂಘನೆಗೆ ಇನ್ನಷ್ಟು ಚೈತನ್ಯ ಸಿಕ್ಕಂತಾಗಿ, ದೊಡ್ಡ ಮಟ್ಟದಲ್ಲಿ ಯುವಕರ ಪಡೆ ಮತ್ತಷ್ಟು ಆ್ಯಕ್ಟಿವ್ ಆಗಿ ಕೆಲಸ ಮಾಡಲಿದೆ.ನಮ್ಮ ನೆಚ್ಚಿನ ಯಡಿಯೂರಪ್ಪರಂತೆ ಬಿ ವೈ ವಿಜಯೇಂದ್ರ ಅವರು ಸಹ ಮುಂದೊಂದಿನ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವುದನ್ನು ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ. ಇವರ ಆಯ್ಕೆ ಪಕ್ಷದಲ್ಲಿ ಸಂತೋಷದ ಜೊತೆಗೆ ಪಕ್ಷದ ಸಂಘಟನೆ ಶಕ್ತಿಯು ಹೆಚ್ಚಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ, ಪ್ರಧಾನ ಕಾರ್ಯದರ್ಶಿ ರವಿ ನಾಯಕ ಮುಖಂಡರಾದ ವಿಠಲ ನಾಯಕ,ರಾಮಚಂದ್ರ ರಡ್ಡಿ,ಭೀಮಶಾ ಜೀರೋಳ್ಳಿ,ಗಿರಿಮಲ್ಲಪ್ಪ ಕಟ್ಟೀಮನಿ,ಅಶೋಕ ಹರನಾಳ, ಹರಿ ಗಲಾಂಡೆ,ಶರಣಗೌಡ ಚಾಮನೂರ,ದೌಲತರಾವ ಚಿತ್ತಾಪುರಕರ,ಶಿವಶಂಕರ ಕಾಶೆಟ್ಟಿ,ಬಸವರಾಜ ಕಿರಣಗಿ,ರಾಜಶೇಖರ ದೊಪದ,ದತ್ತಾತ್ರೇಯ ಗೌಡಗಾಂವ,ಕಿಶನ ಜಾಧವ,ಜಯಂತ ಪವಾರ,ರಿಚರ್ಡ್ ಮಾರೆಡ್ಡಿ, ಪ್ರೇಮ ರಾಠೊಡ,ಹೀರಾ ನಾಯಕ,ಅರ್ಜುನ ದಹಿಯಾಂಡೆ,ಅಯ್ಯಣ್ಣ ದಂಡೋತಿ,ರಾಜು ಕೊಳಿ, ಬಾಬು ಕುಡಿ,ದೇವೇಂದ್ರ ಬಡಿಗೇರ,ಚಂದ್ರಶೇಖರ ಬೆಣ್ಣೂರಕರ,ಅಂಬ್ರೇಷ ರಡ್ಡಿ,ಮಹೇಂದ್ರ ಕುಮಾರ, ಚಂದ್ರಕಾಂತ ಮೇಲಿನಮನಿ, ಕಾಶಿನಾಥ ಚಿನಗುಂಡಿ ಸೇರಿದಂತೆ ಅನೇಕರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…