ಬಿಸಿ ಬಿಸಿ ಸುದ್ದಿ

ಸೇಡಂ; ಮಾಡಬೋಳ ಪೊಲೀಸ್ ವಿರುದ್ಧ ದಲಿತ ಪ್ಯಾಂಥರ ಪ್ರತಿಭಟನೆ

ಕಲಬುರಗಿ: ಸೇಡಂ ತಾಲ್ಲೂಕಿನ ಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯ ಕೋರವಾರ ಗ್ರಾಮದಲ್ಲಿ ಮೂರ್ತಿ ಕಳವು ಮತ್ತು ಅಕ್ರಮ ಮಧ್ಯ ಮಾರಾಟ, ಜೂಜಾಟ, ಅನೈತಿಕ ಚಟುವಟಿಕೆಳಿಗೆ ಕಡಿವಾಣ ಹಾಕುವಂತೆ ಆಕ್ರಮಗಳಲ್ಲಿ ಶಾಮಿಲಾಗಿರುವ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶನಿವಾರ ಭಾರತಿಯ ದಲಿತ ಪ್ಯಾಂಥರ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.

ಸೇಡಂ ರಸ್ತೆಯ ಸಣ್ಣೂರ ಟೋಲ್ ನಾಕಾದಿಂದ ಮಾಡಬೋಳ ಪೋಲಿಸ್ ಠಾಣೆಯ ವರೆಗೆ ಬ್ರಹತ್ ಪ್ರತಿಭಟನಾ ಮೇರೆವಣಿಗೆ ನಡೆಸಿ  ಅಕ್ರಮ ಚಟುವಟಿಕೆ ನಡೆಸುತ್ತಿರುವವರ ಮೇಲೆ ಕೇಸ್ ದಾಖಲಿಸದೆ ಅವರ ಹತ್ತಿರ ಸದರಿ ಪೆÇಲೀಸ್ ಠಾಣೆಯ ಪಿ.ಎಸ್.ಐಗಳು ಹಣ ತೆಗೆದುಕೊಂಡು ಅಮಾಯಕ ಹೆಣ್ಣು ಮಗಳಿಗೆ ಕಾನೂನಿನ ಸಹಾಯ ಮಾಡಲು ಬಂದಿರುವ ಸಂಘಟನೆ ಮುಖಂಡರಿಗೆ ದರ್ಪದವರ್ತನೆ ಮಾಡಿ ಸಂಘಟನೆ ಮುಖಂಡರ ಮೇಲೆ ಕೆಸ್ ದಾಖಲಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಕಾಂಗ್ರೆಸ್ ಪಕ್ಷದ ಮುಖಂಡರ ಬಗ್ಗೆ ಅವಹೇಳನಕಾರಿ ಮಾತನಾಡಿ, ದಲಿತ ಹೊರಾಟಗಾರರಿಗೆ ಕೀಳಾಗಿ ಮಾತನಾಡಿರುವ ಎ.ಎಸ್.ಐ. ಬಿಟ್, ಕ್ರೈಮ್ ಪೊಲೀಸ್ ಸೇರಿ ಅಕ್ರಮ ಚಟುವಟಿಕೆ ನಡೆಸುತ್ತಿರುವವರ ಹತ್ತಿರ (ಹಾಪ್ತಾ) ಹಣ ವಸುಲಿ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕಾನೂನಿನ ಸೂಕ್ತ ಕ್ರಮ ಕೈಗೊಳ್ಳಬೇಕು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಬಡ ಕುಟುಂಬಗಳಿಗೆ ನೆಮ್ಮದಿಯಿಂದ ಜೀವಿಸಲು ಅನುಕೂಲಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಘಟಕದ ಅಧ್ಯಕ್ಷ ರಮೇಶ್ ಡಿ, ಚಿಮಾಯಿ ಇದ್ದಾಯಿ, ಉಪಾಧ್ಯಕ್ಷ ಕಾಶಿನಾಥ ದಿವಂಟಗಿ, ಪ್ರ.ಕಾರ್ಯದರ್ಶಿ ಭಾರತ ಬುಳ್ಳಾ, ಶರಣು ಉಡಗಿ, ದಿನೇಶ ಮೋಘಾ, ಗಂಗಾಧರ ಮಾಡಬೂಳ, ಗೌತಮ್ ಪಾಳ, ಗುರುನಾಥ ದೊಡ್ಡಮನಿ, ಶರಣು ದೇಗಾಂವ, ಸೋಮು ಸಣ್ಣೂರ, ಶ್ರೀನಾಥ ತಳಕೇರಿ, ಆನಂದ ಕೆಕೆ ಸೇರಿದಂತೆ ಇತರರು ಇದ್ದರು.

emedialine

Recent Posts

ಕಲಬುರಗಿಯಲ್ಲಿ ಕೆ.ಇ.ಎ ಪರೀಕ್ಷೆ ಸುಸೂತ್ರ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಕಲ್ಯಾಣ ಕರ್ನಾಟಕ ರಸ್ತೆ…

2 hours ago

ತಿಪಟೂರು ಕೃಷ್ಣಗೆ ” ಕಾಯಕ ರತ್ನ ಪ್ರಶಸ್ತಿ ” ಪ್ರದಾನ

ಬೀದರ್: ಮಾಧ್ಯಮ ಮತ್ತು ಸಾಮಾಜಿಕ ಸಂಘಟನೆ ಕ್ಷೇತ್ರದಲ್ಲಿ ದೀರ್ಘ ಸೇವೆಯನ್ನು ಗುರ್ತಿಸಿ ತಿಪಟೂರು ಕೃಷ್ಣ ಅವರಿಗೆ " ಕಾಯಕ ರತ್ನ…

2 hours ago

ಕೃಷಿ ವಿಜ್ಞಾನಿ ಡಾ.ಎಸ್.ಎ.ಪಾಟೀಲ್ ಹೃದಯಾಘಾತದಿಂದ ನಿಧನ

ಕಲಬುರಗಿ: ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಗಳಾಗಿದ್ದ ಡಾ.ಎಸ್.ಎ.ಪಾಟೀಲ್ ಬಿರಾಳ (80) ಅವರು ನಿಧನರಾಗಿದ್ದಾರೆ.…

5 hours ago

ಜಲಮೂಲ, ಪರಿಸರ ಸಂರಕ್ಷಣೆಯತ್ತ ಯುವಜನತೆ ಸಕ್ರಿಯರಾಗಲಿ: ಹುಲಿಕುಂಟೆ ಮೂರ್ತಿ

ಬೆಂಗಳೂರು: ಯುವಜನತೆ ನದಿಮೂಲಗಳು ಹಾಗೂ ಪರಿಸರ ಸಂರಕ್ಷಣೆಯ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕೆಂದು…

5 hours ago

ಕಲಬುರಗಿ ಜಿಲ್ಲಾ ಗಾಣಿಗ ನೌಕರರ ಸಭೆ 17ಕ್ಕೆ: ಸಂಗನಗೌಡ ಪಾಟೀಲ್‌

ಕಲಬುರಗಿ: ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘದ ಸದಸ್ಯರ ಸಭೆ ಜು.17ರಂದು ಬೆಳಗ್ಗೆ 10.30ಕ್ಕೆ ಕನ್ನಡ ಭವನದಲ್ಲಿ ನಡೆಯಲಿದ್ದು, ಸಂಘದ…

7 hours ago

371 (ಜೆ) ಸಮರ್ಪಕ ಅನುಷ್ಠಾನಗೊಳಿಸದಿದ್ದರೆ ಮತ್ತೊಮ್ಮೆ ಉಗ್ರ ಹೋರಾಟದ ಎಚ್ಚರಿಕೆ

ಕಲಬುರಗಿ: 371(ಜೆ) ಕಲಂ ಸಮರ್ಪಕ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಿ ಕಚೇರಿ ಸ್ಥಾಪಿಸಬೇಕು.ಇಲ್ಲದಿದ್ದಲ್ಲಿ ಮತ್ತೊಮ್ಮೆ ಕಲ್ಯಾಣ ಕರ್ನಾಟಕದ ಎಲ್ಲಾ…

7 hours ago