ಕಲಬುರಗಿ: ವೃತ್ತಿಯಲ್ಲಿ ನಿವೃತ್ತಿ ಆದರೂ ಸಮಾಜ ಸೇವೆ ಮಾಡಲು ನಿವೃತ್ತಿ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಭೀಮರಾವ ಟಿ. ಟಿ ಹೇಳಿದರು.
ನಗರದ ಮಾನ್ಯವಾರ್ ದಾದಾ ಸಾಹೇಬ್ ಕಾನ್ಛೀರಾಮ ಪದವಿ ಕಾಲೇಜಿನಲ್ಲಿ ಪದವಿ ಕಾಲೇಜು ಛಲವಾದಿ ಪ್ರಾಧ್ಯಾಪಕರ ಸಂಘ ಆಯೋಜಿಸಿದ್ದ ನಿವೃತ್ತ ಪ್ರಾಧ್ಯಾಪಕರ ಸನ್ಮಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ದಲಿತ ಪ್ರಾಧ್ಯಾಪಕರು ನಿವೃತ್ತಿ ಆದ ಮೇಲೆ ಮನೆಯಲ್ಲಿ ಕೂಡದ ಹಳ್ಳಿಗಳಿಗೆ ತೆರಳಿ ದಲಿತ ಸಮುದಾಯದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು ಅವರಲ್ಲಿ ಸ್ವಾಭಿಮಾನ ಬದುಕಿನ ಉದ್ದಕ್ಕೂ ಬೆಳಿಯುವ ಹಾಗೆ ಮಾಡಬೇಕು. ಬಹಳಷ್ಟು ಕಡೆ ಪ್ರಾಧ್ಯಾಪಕರಾದವರು ತಮ್ಮ ಸ್ವಾರ್ಥಕ್ಕಾಗಿ ಮುಗ್ದ ವಿದ್ಯಾರ್ಥಿಗಳನ್ನು ಬಳಿಸಿಕೊಂಡು ತಮ್ಮ ಬೇಳೆ ಬೇಯಿಸಿ ಕೊಳ್ಳಬಾರದು. ಸಮಾಜದ ಗೋಸ್ಕರ ಎಲ್ಲರೂ ಶ್ರಮಿಸಬೇಕು ಎಂದು ಅವರು ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ. ಟಿ ಕಾಂಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮಂತೆಯೇ ಒಬ್ಬ ಮನುಷ್ಯನಾದ ಬುದ್ಧನು, ನಮ್ಮ ಅಸ್ತಿತ್ವದ ವಾಸ್ತವತೆಯ ನೈಜಗುಣವನ್ನು ಅರಿತು, ತಮ್ಮ ಎಲ್ಲಾ ನ್ಯೂನತೆಗಳನ್ನು ನಿವಾರಿಸಿದರು ಮತ್ತು ಅವರ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಂಡರು. ಬೌದ್ಧಧರ್ಮದಲ್ಲಿ ಇದನ್ನು ನಾವು “ಜ್ಞಾನೋದಯ” ಎಂದು ಕರೆಯುತ್ತೇವೆ. ಸುಮ್ಮನೆ ಕೈ ಬೀಸಿ ಬುದ್ಧನಿಗೆ ನಮ್ಮ ಸಮಸ್ಯೆಗಳನ್ನೆಲ್ಲಾ ದೂರ ಮಾಡಲಾಗಲಿಲ್ಲ. ಬದಲಾಗಿ, ಜೀವನದ ಸಮಸ್ಯೆಗಳಿಂದ ನಮ್ಮನ್ನು ಮುಕ್ತಗೊಳಿಸಲು ಮತ್ತು ನಮ್ಮ ಮನಸ್ಸಿನ ಉತ್ತಮ ಗುಣಗಳಾದ ಪ್ರೀತಿ, ಸಹಾನುಭೂತಿ, ಔದಾರ್ಯ, ಬುದ್ಧಿವಂತಿಕೆ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲು ಅನುಸರಿಸಬಹುದಾದ ಮಾರ್ಗವನ್ನು ಅವರು ನಮಗೆ ತೋರಿಸಿದರು ಎಂದು ಅವರು ಹೇಳಿದರು.
ನಿವೃತ್ತ ಪ್ರಾಧ್ಯಾಪಕರಾದ ಡಾ. ಅರುಣ್ ಕುಮಾರ್ ನರೋಣಕರ್ ಮತ್ತು ಡಾ. ದಯಾನಂದ ಸೂರವಸ್ಸೇ ಅವರನ್ನು ಸನ್ಮಾನಿಸಲಾಯಿತು. ಡಾ. ವಿಜಯಕುಮಾರ ಸಾಲಿಮನಿ, ಡಾ. ಪಂಡಿತ ಬಿ ಕೆ, ರಾಜಕುಮಾರ ಕುರನೆ, ಡಾ. ರವಿ ಭಂಡಾರಿ, ಡಾ. ವಿಜಯಕುಮಾರ ಗೋಪಾಳೆ, ವಿಠ್ಠಲ ಹಾದಿಮನಿ, ಡಾ. ಜಗನ್ನಾಥ ಪಟ್ಟಣಕರ್, ಡಾ. ಶಾಮರಾವ್, ಬಿ. ಎಂ. ಶಿವಕೇರಿ, ಮರೆಪ ಮೇತ್ರಿ, ಹಲವು ಪದವಿ ಕಾಲೇಜು ಛಲವಾದಿ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…