ಕಲಬುರಗಿ, ನ.11; ಸುಪ್ರೀಂ ಕೋರ್ಟ್ ಲಿಂಗಾಂತರಿ (ಟ್ರಾನ್ಸ್ ಜೆಂಡರ್) ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದ ನಂತರ ದೇಶದಲ್ಲಿ ಕೆಲವರಾದರೂ ಲಿಂಗಾಂತರಿ ಮಹಿಳೆಯರು (ಟ್ರಾನ್ಸ್ ಜೆಂಡರ್) ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ.
ಕಲಬುರಗಿಯ ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಲಿಂಗಾಂತರಿ ಮಹಿಳೆ ದಿವ್ಯ ಅವರು ಎಂ.ಎ ರಾಜ್ಯಶಾಸ್ತ್ರದ ಅಂತಿಮ ಪರೀಕ್ಷೆ ಬರೆದು ಎಲ್ಲರನ್ನು ಬೆರಗುಗೊಳಿಸಿದ್ದಾಳೆ.
ಕಾಲೇಜಿನ ದಾಖಲೆಗಳಲ್ಲಿ ರಾಜಶೇಖರ್ ಎಂದಿರುವುದರಿಂದ ಕಾಲೇಜಿನಲ್ಲಿ ರಾಜಶೇಖರ ಎಂದೇ ಗುರುತಿಸುತ್ತಾರೆ.
ಚಿಂಚೊಳಿ ತಾಲೂಕಿನ ಧುತ್ತರಗ ಗ್ರಾಮದ ಲಿಂಗಾಯತ ಸಮುದಾಯದ ರಾಜಶೇಖರ ದೇಹದಲ್ಲಿ ಹಾರ್ಮೋನ್ಸ್ ಬದಲಾವಣೆಯಿಂದಾಗಿ ಮಹಿಳೆಯಾಗಿ ಬದಲಾಗಿದ್ದಾರೆ.
ಎಂ.ಎ ಮೊದಲ ವರ್ಷ ಪ್ಯಾಂಟು ಶರ್ಟು ಹಾಕಿಕೊಂಡು ತರಗತಿಗೆ ಹಾಜರಾದ ರಾಜಶೇಖರ ಎಂ.ಎ ಎರಡನೆ ವರ್ಷಕ್ಕೆ ದಿವ್ಯ ಎಂಬ ಸುಂದರ ಹುಡುಗಿಯಾಗಿ ಬಂದು ಎಲ್ಲರನ್ನು ಅಚ್ಚರಿಗೊಳಿಸಿದ್ದಾಳೆ.
ಈ ಬಗ್ಗೆ ದಿವ್ಯ ಮಾತನಾಡುತ್ತಾ `ನಮ್ಮ ಮನೆಯಲ್ಲಿ ನಾನು ಹೆಣ್ಣಾಗುವುದನ್ನು ಬಹಳ ವಿರೋಧಿಸಿದರು. ಹಾಗಾಗಿ ನಾನು ನನ್ನಂತೆಯೇ ಇರುವ ಸಮುದಾಯದ ಜತೆ ಸೇರಿಕೊಂಡೆ. ನಮ್ಮ ಸಮುದಾಯ ಓದಿ ಮುಂದೆ ಬರಬೇಕು. ನನಗೆ ಎಂ.ಎ ಮುಗಿಸಿ ಪಿಹೆಚ್.ಡಿ ಮಾಡಬೇಕೆಂದು ಕನಸಿದೆ ಎನ್ನುತ್ತಾರೆ.
ದಿವ್ಯ ಅವರು ಕಲಬುರಗಿಯ ದುಬೈ ಕಾಲನಿಯ ಗುರುವಿನ ಮನೆಯಲ್ಲಿದ್ದು ಕಾಲೇಜಿಗೆ ಬರುತ್ತಿದ್ದರು. ಪರೀಕ್ಷೆ ಮುಗಿದ ನಂತರ ಮಂಬೈಗೆ ತೆರಳಲಿದ್ದಾರೆ.
ಪೀಪಲ್ಸ್ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿಗಳಾದ ಶಾಂತಪ್ಪ ಸೂರನ್ ಅವರು `ಇಂತಹ ಬದಲಾವಣೆಗೆ ನಮ್ಮ ಕಾಲೇಜು ಸಾಕ್ಷಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಜಯಕುಮಾರ ಅವರು ಈ ಬಗ್ಗೆ ಇತರೆ ಲಿಂಗಾಂತರಿ ಸಮುದಾಯಕ್ಕೆ ದಿವ್ಯ ಮಾದರಿಯಾಗಿದ್ದಾಳೆ, ಅಂಬೇಡ್ಕರ್ ಅವರ ಹೆಸರಿನ ಈ ಕಾಲೇಜಿನಲ್ಲಿ ಈ ಬದಲಾವಣೆ ಖುಷಿ ಕೊಟ್ಟಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…