ಕಲಬುರಗಿ: ಮನುಷ್ಯನಿಗೆ ನಾಳೆ ಬರುವ ಬದುಕಿನ ಸವಾಲುಗಳನ್ನು ಅವು ಇಷ್ಟೇ ಅಜ್ಞಾತವಾಗಿದ್ದರು ಹೆದರಿಸುವ ಆತ್ಮವಿಶ್ವಾಸ ಇರಬೇಕು. ಆ ವಿಶ್ವಾಸ ಬರಬೇಕೆಂದರೆ ಜೀವನದಲ್ಲಿ ಸದ್ಗುಣ ಮತ್ತು ಸದ್ದವಿನಯ ಗುಣಗಳನ್ನು ಅಳವಡಿಸಿಕೊಳ್ಳಬೇಕು, ಏಕೆಂದರೆ ಮನುಷ್ಯನ ವ್ಯಕ್ತಿತ್ವ ಆತನಲ್ಲಿರುವ ಸದ್ಗುಣಗಳಿಂದ ಅಳೆಯುತ್ತಾರೆ ಹೊರತು ಆತ ಗಳಿಸಿದ ಭೌದ್ಧಿಕ ಆಸ್ತಿ-ಅಂತಸ್ತಿನಿಂದಲ್ಲ ಎನ್ನುತ್ತಾ ಮನುಷ್ಯನ ಜೀವನದಲ್ಲಿ ಬರುವ ಎಲ್ಲಾ ತಲ್ಲಣಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರವಿದೆ ಎಂದು ಸಮಠ ಹಾಗೂ ಗೋಳಾ (ಬಿ) ಪೂಜ್ಯ ಶ್ರೀ ಚನ್ನಮಲ್ಲಶ್ರೀ ಹೇಳಿದರು.
ಸೇಡಂ ರಸ್ತೆಯ ವಿರೇಂದ್ರ ಪಾಟೀಲ ಬಡಾವಣೆಯ ೩ನೇ ಹಂತದಲ್ಲಿರುವ ಶ್ರೀ ನಂದಿಬಸವೇಶ್ವರ ದೇವಸ್ಥಾನದಲ್ಲಿ 5 ದಿನಗಳ ಕಾಲ ಹಮ್ಮಿಕೊಂಡ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ಪ್ರಾರಂಭಿಸಿ ಮಾತನಾಡಿದರು.
ಕಾಳಗಿ ತಾಲ್ಲೂಕು ಹರಸೂರ ಗ್ರಾಮದ ಪೂಜ್ಯ ಶ್ರೀ ಷ.ಬ್ರ. ಕರಿಸಿದ್ದೇಶ್ವರ ಸ್ವಾಮಿಗಳು ಜೀವನ ದರ್ಶನ ಪ್ರಚನ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಸದರಿ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ ಮಾತನಾಡಿದರು.
ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಜಗದೀಶ ನಗನೂರ ಮತ್ತು ಜಗದೀಶ ಕಲ್ಲೂರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಂದಿ ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಆರ್.ಕಂಬದ, ಕಾರ್ಯದರ್ಶಿ ಭೋಜಪ್ಪ ಗುಡ್ಡಾ ಹಾಗೂ ಹಿರಿಯ ಪದಾಧಿಕಾರಿಗಳಾದ ಶಾಂತಪ್ಪ ಭೋಗಶೆಟ್ಟಿ, ಅಂಬಣ್ಣ ಬೋಳೆವಾಡ, ನಾಗರಾಜ ಮರತೂರಕರ, ಪರಶುರಾಮ ಶೆಳ್ಳಗಿ, ಬಸವಂತರಾವ ದನಶ್ರೀ ಹಾಗೂ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…