ಬಿಸಿ ಬಿಸಿ ಸುದ್ದಿ

ಕಲಬುರಗಿ-ಬೆಂಗಳೂರಿಗೆ ಹೊಸ 2 ರೈಲು ಪ್ರಾರಂಭಿಸುವಂತೆ ಕರವೇ ಪ್ರತಿಭಟನೆ

ಕಲಬುರಗಿ; ನಗರದಿಂದ ಬೆಂಗಳೂರಿಗೆ ನೂತನ ಹೊಸ 2 ರೈಲು (ಬೆಳಿಗ್ಗೆ ಹಾಗೂ ಸಾಯಂಕಾಲ) ಪ್ರಾರಂಭಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪುನಿತರಾಜ ಸಿ, ಕವಡೆ ನೇತೃತ್ವದಲ್ಲಿ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ರೇಲ್ವೆ ಮುಖ್ಯ ಪ್ರಬಂಧಕರ ಮುಖಾಂತರ ರೇಲ್ವೆ ಮಂತ್ರಿಗಳಾದ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕಲಬುರಗಿ ಜಿಲ್ಲೆ ಹಾಗೂ ನಗರವು ತುಂಬಾ ಬೃಹದಾಕಾರವಾಗಿ ಬೆಳೆದಿದ್ದು, ಜನಸಂಖ್ಯೆಯಲ್ಲಿಯೂ ಕೂಡಾ ಏರಿಕೆಯಾಗಿದ್ದು, ಸದ್ಯ ಚಲಿಸುವ ರೈಲುಗಳಲ್ಲಿ ಸ್ಥಳಾವಕಾಶ ವಿಲ್ಲದೇ ಬೆಂಗಳೂರಿಗೆ ಹೋಗಲು ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಅದರಂತೆ ಬೆಂಗಳೂರಿಗೆ ಹೋಗಲು ಕಲಬುರಗಿಯಿಂದ ಸಾಕಷ್ಟು ಜನ ವ್ಯಾಪಾರಿಗಳೂ, ರಾಯಕೀಯ ವ್ಯಕ್ತಿಗಳು, ಐಟಿ ಬಿಟಿ ಉದ್ಯೋಗಿಗಳು ಹಾಗೂ ಇನ್ನಿತರರು ಗಣನೀಯವಾಗಿ ಹೋಗುತ್ತಿದ್ದಾರೆ. ಇದರಿಂದಾಗಿ ಸಕಾಲದಲ್ಲಿ ಪ್ರಯಾಣಿಸಲು ತುಂಬಾ ತೊಂದರೆಯಾಗುತ್ತಿದೆ.

ಅದರಂತೆ ಹಗಲು ಹೊತ್ತಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಲು ಕೇವಲ ಒಂದು ರೈಲು ಇದ್ದು, ಅದು ಕೂಡಾ ತುಂಬಾ ಜನದಟ್ಟಣೆಯಿಂದ ಕೂಡಿರುತ್ತದೆ.

ಆದ್ದರಿಂದ ತಾವುಗಳು ನಮ್ಮ ಮನವಿ ಪತ್ರವನ್ನು ಸಹಾನುಭೂತಿಯಿಂದ ಹಾಗೂ ಮಾನವೀಯತೆಯಿಂದ ಪರಿಗಣಿಸಿ, ಕೂಡಲೇ ಕಲಬುರಿಗಿಯಿಂದ ಬೆಂಗಳೂರಿಗೆ ನೂತನವಾಗಿ 2 ಹೊಸ ರೈಲು (1-ಬೆಳಿಗ್ಗೆ) ಹಾಗೂ (1 ರಾತ್ರಿ) ಕೂಡಲೇ ಪ್ರಾರಂಭಿಸಲು ಕ್ರಮ ಕೈಕೊಳ್ಳಬೇಕು. ಒಂದು ವೇಳೆ ನಮ್ಮ ಮನವಿಯನ್ನು 10 ದಿನಗಳ ಒಳಗಾಗಿ ಪರಿಗಣಿಸದೇ ಇದ್ದರೆ ನಮ್ಮ ಸಂಘಟನೆವತಿಯಿಂದ ತಮ್ಮ ರೈಲು ನಿಲ್ದಾಣದಲ್ಲಿ ರೈಲು ರೋಕೊ: ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂಬ `ವಿಷಯವನ್ನು ತಮ್ಮ ಆದ್ಯ ಗಮನಕ್ಕೆ ತರಬಯಸುತ್ತೇವೆ. ಮುಂದಿನ ಆಗು ಹೋಗುಗಳಿಗೆ ತಾವೇ ನೇರ ಹಾಗೂ ಸಂಪೂರ್ಣ ಜವಾಬ್ದಾರರಾಗಿರುತ್ತೀರಿ ಎಂದು ಮನವಿಯಲ್ಲಿ ತಿಳಿದಿದ್ದಾರೆ.

ಈ ಸಂದರ್ಭದಲ್ಲಿ ದೇವಿಂದ್ರ ಮಯೂರ, ಈರಣ್ಣ ಆಳಂದ, ಯಲ್ಲಾಲಿಂಗ ಶಹಾಬಾದ, ದೇವಿಂದ್ರ ಪಾಟೀಲ ಯಡ್ರಾಮಿ, ನಿರ್ಮಲಾ ಜಮಾದಾರ, ವೇಂಕಟೇಶ ಗುತ್ತೇದಾರ, ವಿಠ್ಠಲ ಪೂಜಾರಿ, ಚಂದರ ಚವ್ಹಾಣ, ಕಲ್ಯಾಣಿ ತಳವಾರ, ನಿಸಾರ ಅಹಮ್ಮದ್, ಶಿವಲಿಂಗ ಗುತ್ತೇದಾರ ಇದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

7 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

7 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

9 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

9 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

9 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

10 hours ago