ಕಲಬುರಗಿ: ಇನ್ಸುಲಿನ್ ಕಂಡುಹಿಡಿದ ಪ್ರವರ್ತಕ ಸರ್ ಫ್ರೆಡ್ರಿಕ್ ಬ್ಯಾಂಟಿಂಗ್ ಅವರ ಜನ್ಮದಿನದ ನೆನಪಿಗಾಗಿ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಕೆಬಿಎನ್ ವಿವಿಯಲ್ಲಿ ಆಚರಿಸಲಾಯಿತು.
ಖಾಜಾ ಬಂದಾನವಾಜ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಜನರಲ್ ಮೆಡಿಸಿನ್ ವಿಭಾಗವು ಕೆಬಿಎನ್ ಆಸ್ಪತ್ರೆಯಲ್ಲಿ ಮಧುಮೇಹದ ಉಚಿತ ಸ್ಕ್ರೀನಿಂಗ್ ಡ್ರೈವ್ಅನ್ನು ಏರ್ಪಡಿಸಿತ್ತು .ಸ್ಕ್ರೀನಿಂಗ್ FBS, PPBS, ಮತ್ತು HBA1C ಯಂತಹ ಪರೀಕ್ಷೆಗಳನ್ನು ಒಳಗೊಂಡಿತ್ತು.
ಸ್ಕ್ರೀನಿಂಗ್ ಡ್ರೈವ್ ಜೊತೆಗೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜನರಲ್ ಮೆಡಿಸಿನ್ ವಿಭಾಗದಿಂದ ಕಿರುನಾಟಕವನ್ನು ಪ್ರದರ್ಶಿಸಲಾಯಿತು.
ಜೀವನಶೈಲಿ ನಿರ್ವಹಣೆ, ನಿಯಮಿತ ಔಷಧಿ ಸೇವನೆ ಮತ್ತು ವೈದ್ಯರೊಂದಿಗೆ ಅನುಸರಣೆಯ ಮಹತ್ವದ ಕುರಿತು ಸ್ಕಿಟ್ ಪ್ರದರ್ಶಿಸಲಾಯಿತು. ಜನರಲ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕಿ ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಕಲಾ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕೆಬಿಎನ್ ಆಸ್ಪತ್ರೆಯ ಎಸ್ಸಿಇಒ ಡಾ.ಪಿ.ಎಸ್. ಶಂಕರ್, ಡಾ. ಹಿಮಾಯತುಲ್ಲಾ ಖಾನ್ , ಡಾ. ಪ್ರಶಾಂತ್ ಇ.ಡಿ. , ಡಾ.ಆನಂದ್ ಶಂಕರ್, ಡಾ.ಗಿರೀಶ್ ರೋನಾಡ್, ಡಾ.ಶ್ರೀ ಗೌರಿ, ಡಾ.ಸಂಜಯ್, ಡಾ. ಮುದ್ದಸಿರ್, ಡಾ. ಮುಷ್ತಾಕ್, ಡಾ. ಸಾಗರ್ ಬಿರಾದಾರ್, ಡಾ. ಸುಮಂಗಲಾ ಹಾಗೂ ಇತರೆ ವಿಭಾಗದ ಅಧ್ಯಾಪಕರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…