ಕಲಬುರಗಿ; ಇಲ್ಲಿನ ರಾಮ ಮಂದಿರ ರಿಂಗ್ ರಸ್ತೆಯ ರವೀಂದ್ರನಾಥ ಟ್ಯಾಗೋರ್ ನಗರದಲ್ಲಿರುವ ಉತ್ತರಾದಿ ಮಠದ ನಿವೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀಕರ ನಾರಾಯಣ ಮಂದಿರ ಸನ್ನಿಧಾನದಲ್ಲಿ ಭಾನುವಾರ ನಗರದ ಎಲ್ಲಾ ಪಾರಾಯಣ ಸಂಘಗಳ ಸದಸ್ಯರು ಸೇರಿಕೊಂಡು ಶ್ರೀ ಸತ್ಯಾತ್ಮತೀರ್ಥ ಶ್ರೀಗಳ ಆಜ್ಞೆಯಂತೆ ವಿಷ್ಣುಸಹಸ್ರನಾಮಾದಿ ಸ್ತ್ರೋತ್ರಗಳ ಪಾರಾಯಣ ವೈಭವದಿಂದ ನಡೆಸಿಕೊಟ್ಟರು.
ವಿಶ್ವ ಮಧ್ವ ಮಹಾ ಪರಿತಷತ್ ಅಡಿಯಲ್ಲಿರುವ ನಗರದ ವಿವಿಧ ಬಡಾವಣೆಗಳಲ್ಲಿರುವ 10 ಕ್ಕೂ ಹೆಚ್ಚು ಪಾರಾಯಣ ಸಂಘಗಳ ನೂರಾರು ಸದಸ್ಯರು ಹಾಜರಿದ್ದು ಸಾಮೂಹಿಕ ಪಾರಾಯಣ ಯಶಸ್ವಿಗೊಳಿಸಿದರು.
ನಂತರ ನಡೆದ ಸಮಾರಂಭದಲ್ಲಿ ಆರ್‌ಟಿ ನಗರದಲ್ಲಿ ಒಂದೂವರೆ ದಶಕದ ಹಿಂದೆ ಉತ್ತರಾದಿ ಮಠಕ್ಕ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿ ಎಂದು ಭೂದಾನ ಮಾಡಿದ್ದ ದಿ. ರಂಗರಾವ ರಾಯಚೂರಕರ್ ಅವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಲಾಯ್ತು.
ಇದೇ ಸ್ಥಳಧಲ್ಲಿ ತಮ್ಮ ತಂದೆಯವರ ಸ್ಮರಣಾರ್ಥವಾಗಿ ಶ್ರೀಕರ ತೀರ್ಥ (ತೆರೆದ ಬಾವಿ) ಸೇವೆ ನೆರವೇರಿಸಿರುವ ಸಿವಿಲ್ ಇಂಜಿನಿಯರ್ ನರೇಂದ್ರಾಚಾರ್ಯ ಫಿರೋಜಾಬಾದ್ ಅವರ ಸೇವೆಯನ್ನು ಸಭೆಯಲ್ಲಿ ಕೊಂಡಾಡಲಾಯ್ತು.
ಸಭೆಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತರು, ಶ್ರೀಕರ ನಾರಾಯಣ ಸನ್ನಿಧಾನ ಸೇವಾ ಸಮೀತಿಯ ಗೌರವಾಧ್ಯಕ್ಷರಾದ ಡಾ. ಶ್ರೀನಿವಾಸ ಸಿರನೂರಕರ್ ಅವರು, ಕಲಬುರಗಿ ಮಟ್ಟಿಗೆ ಇದೊಂದು ಐತಿಹಾಸಿಕ ಸಂದರ್ಭ ಕೂಡಿ ಬಂದಿದೆ. ಉತ್ತರಾದಿ ಶ್ರೀಗಳ ಆಜ್ಞೆಯಂತೆ ಶ್ರೀಕರ ನಾರಾಯಣ ಮಂದಿರ ತಲೆ ಎತ್ತಲಿದೆ. ಅದಕ್ಕೆ ಎಲ್ಲರೂ ತನು, ಮನ, ಧನದಿಂದ ಸಹಾಯ, ಸಹಕಾರ ನೀಡಬೇಕೆಂದರು. ಅಧ್ಯಕ್ಷರಾದ ನರೇಂದ್ರಾಚಾರ್ ಮಾತನಾಡುತ್ತ ಮಂದಿರದ ವಾಸ್ತು ವಿನ್ಯಾಸ ಕುರಿತು ಮಾಹಿತಿ ನೀಡಿ ಸಹಕಾರ ಕೋರಿದರು.
ಉತ್ತರಾದಿ ಮಠಾಧಿಕಾರಿ ರಾಮಾಚಾರ್ಯ ಘಂಟಿ, ಪಂಡಿತರಾದ ವಿಷ್ಣುದಾಸಾಚಾರ್ಯ ಖಜೂರಿ, ವಿನೋದಾಚಾರ್ಯ ಗಲಗಲಿ, ಪ್ರಸನ್ನಾಚಾರ್ಯ ಜೋಶಿ, ಗೋಪಾಲಾಚಾರ್ಯ ಅಕಮಂಚಿ, ಗಿರೀಶಾಚಾರ್ಯ ಅವಧಾನಿ, ಶ್ರೀನಿವಾಸಾಚರ್ಯ ಪದಕಿ ಸಭೆಯಲ್ಲಿದ್ದು ಸೇರಿದ್ದ ಭಕ್ತರಿಗೆ ಸಂದೇಶ ನೀಡುತ್ತ ಶ್ರೀಕರ ನಾರಾಯಣ ಸನ್ನಿಧಾನದ ಮಹತ್ವ ವಿವರಿಸಿದರು.
ಉತ್ತರಾದಿ ಮಠಾಧೀಶರ ಪರಮಾನುಗ್ರಹದಂತೆಯೇ ಇಲ್ಲಿನ ಕಾರ್ಯಗಳು ನೆರವೇರಲಿ, ಆದಷ್ಟು ಬೇಗನೆ ಶ್ರೀಕರ ನಾರಾಯಣ ಇಲ್ಲಿ ಬಂದು ನೆಲೆಸಲಿ, ಭವ್ಯ ಮಂದಿರ ತಲೆ ಎತ್ತಲಿ, ಭಗವಂತನ ಅನುಗ್ರಹ ನಮಗೆಲ್ಲರಿಗೂ ಆಗಲಿ ಎಂದು ಹಾರೈಸಿದರು.
ಶ್ರೀಕರ ನಾರಾಯಣ ಮಂದಿರ ಸೇವಾ ಸಮೀತಿಯ ಮಹಿಳಾ, ಪುರುಷ ಸರ್ವ ಸದಸ್ಯರು, ಆರ್‌ಟಿ ನಗರ, ದೇವ ನಗರ, ವಿವೇಕಾನಂದ ನಗರ, ಜಿಡಿಎ ಬಡಾವಣೆ, ಸಾಯಿ ನಗರ, ಜಯತೀರ್ಥ ನಗರ ಸೇರಿದಂತೆ ವಿವಿಧ ಬಡಾವಣೆಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಪಾರಾಯಣ ಸಂಘಗಳ ಅಧ್ಯಕ್ಷರಿಗೆ ಸತ್ಕರಿಸಲಾಯ್ತು. ಶ್ರೀಕರ ನಾರಾಯಣ ಸನ್ನಿಧಾನ ಸೇವಾ ಸಮೀತಿಯ ಸಂಚಾಲಕರಾದ ಪದ್ಮನಾಭಾಚಾರ್ಯ ಜೋಷಿಯವರು ನಿರೂಪಿಸಿ ವಂದಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…