ಕಲಬುರಗಿ: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸರಕಾರಿ ವಸ್ತು ಸಂಗ್ರಹಾಲಯ, ಕಲಬುರಗಿ ಹಾಗೂ ಇನ್‍ಟ್ಯಾಕ್ ಅಧ್ಯಾಯ ಕಲಬುರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವಪರಂಪರೆ ಸಪ್ತಾಹ 2023 ರ ಅಂಗವಾಗಿ ನಗರದ ಶಹಬಜಾರ ಪ್ರದೇಶದಲ್ಲಿ ಪಾರಂಪರಿಕ ನಡಿಗೆಯನ್ನು ಹಮ್ಮಿಕೊಳ್ಳಲಾಯಿತು.
ಡಾ.ಎಸ್.ಎಸ್.ವಾಣಿ ಮುಖ್ಯಸ್ಥರು, ಇತಿಹಾಸ ವಿಭಾಗ, ಸರಕಾರಿ (ಸ್ವಾ) ಕಾಲೇಜು ಕಲಬುರಗಿ ಇವರು ನಗರದಲ್ಲಿ ಸುಮಾರು 200ಕ್ಕಿಂತಲೂ ಹೆಚ್ಚಿನ ಸ್ಮಾರಕಗಳಿವೆ. ಅವುಗಳನ್ನು ಸಂರಕ್ಷಿಸಲು ಸರಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಮುಂದಾಗಬೇಕೆಂದು ಹೇಳಿದರು.
ನಗರದ ಎಸ್.ಎಸ್.ಎಂ.ಕೆ. ಶಿಕ್ಷಣ ಸಂಸ್ಥೆಯ ಕೈಲಾಸ ನಗರ, ಕಲಬುರಗಿಯಲ್ಲಿ ಆಯೋಜಿಸಿರುವ ವಿಶ್ವ ಪರಂಪರೆ ಸಪ್ತಾಹ-2023 ರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.
“ಕಲಬುರಗಿ ನಗರ ಸ್ಮರಕಗಳ ತವರುಮನೆ” ಇದ್ದಹಾಗೆ ಇಲ್ಲಿ ಪ್ರತಿ ಒಂದು ಕಿ.ಮಿ. ಒಳಗಡೆ ನಮಗೆ ಸ್ಮಾರಕಗಳು ಕಂಡು ಬರುತ್ತವೆ. ಅಂತಹ ಸ್ಮಾರಕಗಳು ಇಂದು ಅವನತಿಯ ಹಂತದಲ್ಲಿವೆ. ಅವುಗಳ ರಕ್ಷಣೆಗೆ ಸರಕಾರ ಮುಂದಾಗಬೇಕು, ಸರಕಾರದೊಂದಿಗೆ ಸ್ಥಳಿಯರು ಕೈಜೋಡಿಸಬೇಕೆಂದು ಡಾ. ಎಸ್.ಎಸ್. ವಾಣಿಯವರು ಹೇಳಿದರು.
ಪರಂಪರೆ ನಡಿಗೆಯಲ್ಲಿ ಅಲ್ಲಾವುದ್ದೀನ್ ಬಹಮನ್ ಶಹಾ, ಒಂದನೇಯ ಮಹಮ್ಮದ ಶಹಾ, ಎರಡನೇಯ ಮಹಮ್ಮದ ಶಹಾ, ಇಸ್ಮಾಯಿಲ ಶಹಾ ರ ಸಮಾಧಿ ಕಟ್ಟಡಗಳು ಹಾಗೂ ಗದ್ಲೇಗಾಂವ ಬಡಾವಣೆಯಲ್ಲಿರುವ ಕಲ್ಯಾಣಿ ಚಾಲುಕ್ಯರ ಕಾಲದ ದೇವಾಲಯದ ಅವಶೇಷಗಳು ಇರುವ ಸ್ಥಳ ಹಾಗೂ ಪುಷ್ಕರಣಿ ಸ್ಥಳಗಳಿಗೆ ಭೇಟಿ ಕೊಟ್ಟು ಅವುಗಳ ಮಾಹಿತಿ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪರಂಪರೆ, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಇನ್‍ಟ್ಯಾಕ್‍ನ ಎಲ್ಲಾ ಪದಾಧಿಕಾರಿಗಳು, ಶಾಂತೇಶ್ವರ ಪ್ರೌಢ ಶಾಲೆ ಹಾಗೂ ಉಷಾದೇವಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಕೈಲಾಸ ನಗರ, ಜಿ.ಆರ್. ನಗರ ಮತ್ತು ಗದ್ಲೇಗಾಂವ ಬಡಾವಣೆಯ ಆಸಕ್ತರು ಭಾಗವಹಿಸಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…