ಬಿಸಿ ಬಿಸಿ ಸುದ್ದಿ

ಮಿಶ್ರ ಬೆಳೆಯಿಂದ ಕೃಷಿಯಲ್ಲಿ ಯಶಸ್ಸು: ಮಿಶ್ರಾ

ಕಲಬುರಗಿ: ಇತ್ತೀಚಿನ ದಿನಗಳಲ್ಲಿ ರೈತನ ಪರಿಸ್ಥಿತಿ ಚಿಂತಾಜನಕವಾಗಿದೆ ಸರಿಯಾದ ಮಳೆಯಿಲ್ಲದೆ, ಬೆಳೆಯಿಲ್ಲ. ಅಲ್ಪ ಸ್ವಲ್ಪ ಬೆಳೆದ ಬೆಳೆಗೂ ಸೂಕ್ತ ಬೆಲೆಯಿಲ್ಲ ಸದ್ಯ ರೈತಕುಲ ಸಾಲದ ಸಂಕಷ್ಟದಲ್ಲಿದೆ ಆದರೆ ಆ ಸಂಕಷ್ಟದಿಂದ ಹೊರ ಬರಬೇಕಾದರೆ ಒಂದೇ ಬೆಳೆಯಿಂದ ಸಾಧ್ಯವಿಲ್ಲ, ಮಿಶ್ರ ಬೆಳೆಯಿಂದಲೇ ರೈತ ಸುಖವಾಗಿ ಬಾಳಲು ಸಾಧ್ಯ ಎಂದು ಖ್ಯಾತ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು.

ನಗರದ ಡಾ.ಎಸ್.ಎಂ.ಪಂಡಿತ್ ರಂಗ ಮಂದಿರದಲ್ಲಿ ಎಂ.ಎನ್.ದೇಸಾಯಿ ಪದವಿ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಬಿಎ, ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಬಿಎ, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ನೇತ್ರದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ರೈತರ ಮನೆಯಲ್ಲಿ ಹಸುಗಳೆ ಇಲ್ಲದಂತಾಗಿದೆ ರೈತರು ಹಸುಗಳನ್ನು ಸಾಕಲು ಮುಂದಾಗಬೇಕು. ಸ್ವತಃ ತಾವೇ ಕೃಷಿಯಲ್ಲಿ ವಿವಿಧ ಕ್ರಮಗಳನ್ನು ಅಳವಡಿಸಿಕೊಂಡಾಗ ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ನನ್ನ 8 ಎಕರೆ ಜಮೀನಿನಲ್ಲಿ ಮೊದಲು ಸೀತಾಫಲ ಬೆಳೆದೆ ಒಳ್ಳೇಯ ಬೆಲೆ ದೊರೆತು ಆದಾಯವು ಹೆಚ್ಚಿತು ಒಮ್ಮೆ ಮಾರಾಟವಾಗದೆ ನಷ್ಟವಾಯಿತು. ಪಾಠ ಕಲಿತ ನಾನು ಒಂದೆ ಬೆಳೆಯಿಂದ ಬದಕಲು ಸಾದ್ಯವಿಲ್ಲ, ಮಿಶ್ರ ಬೆಳೆ ಬೆಳೆದರೆ ಆರ್ಥಿಕವಾಗಿ ಸದೃಡನಾಗಬಲ್ಲೆ ಎಂದು ಅರಿತು ಸಾಗಲು ಹೇಳಿದರು.

ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಡಬಲ್ ಡಿಗ್ರಿ ಪಡೆದರೂ ಸಹ ಕೃಷಿ ಕ್ಷೇತ್ರವನ್ನು ನೆಚ್ಚಿಕೊಂಡು ಆ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದು ನನಗೆ ತೃಪ್ತಿ ತಂದಿದೆ. ಭೂಮಿತಾಯಿಯ ಸೇವೆ ಮಾಡು ಅವಕಾಶ ದೊರಕಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು.

ಇಂಜಿನಿಯರಿಂಗ್ ನಲ್ಲಿ ಡಬಲ್ ಡಿಗ್ರಿ ಪಡೆದಿದ್ದೇ, ಪ್ರತಿಷ್ಠಿತ ಸಾಫ್ಟವೇರ್ ಕಂಪನಿಯ ಸಂದರ್ಶನವೂ ಸಹ ಹುಡುಕಿಕೊಂಡು ಬಂದಿತ್ತು. ಆದರೆ ಕಾರಣಗಳಿಂದ ಸಂದರ್ಶನಕ್ಕೆ ಹೋಗಲಿಲ್ಲ. ಆಗ ನನ್ನ ಒಲವು ಸಾಂಪ್ರದಾಯಿಕ ಕೃಷಿಯತ್ತವಾಲಿತು. ಬರಡು ಭೂಮಿಯಲ್ಲಿ ಶ್ರೀಗಂಧ ಬೆಳೆಯಬಹುದು ಎಂಬ ಸಂಕಲ್ಪ ಮಾಡಿದೆ. ಈ ಸಂಕಲ್ಪಕ್ಕೆ ಯಶಸ್ಸೂ ಸಹ ದೊರಕಿತು. ಅಂತರಾಜ್ಯದಲ್ಲಿಯೂ ಬರಡು ಭೂಮಿಯಲ್ಲಿ ಬೆಳೆದು ಸೌಗಂಧ ಬೀರುವ ಶ್ರೀಗಂಧ ಸಸಿಗಳನ್ನು ಒಯ್ಯಲಾಗಿದೆ, ಇದು ಒಂದು ಹೆಗ್ಗಳಿಕೆಯ ವಿಷಯ. ಕೃಷಿ ಕ್ಷೇತ್ರದಲ್ಲಿಯೂ ಸಾಕಷ್ಟು ಸಾಧನೆ ಮಾಡುವ ಅವಕಾಶಗಳಿವೆ, ಈ ಕ್ಷೇತ್ರದತ್ತ ಮಹಿಳೆಯರು ಆಸಕ್ತಿ ತೋರಬೇಕು ಎಂದು ಕರೆ ನೀಡಿದರು.

ನಗರ ಪೋಲಿಸ್ ಆಯುಕ್ತ ಚೇತನ್.ಆರ್ ಮಾತನಾಡಿ, ವಿದ್ಯಾರ್ಥಿಗಳು ಸದಾ ಗುರಿಯತ್ತ ತಮ್ಮ ಚಿತ್ತವನ್ನು ನೀಡಬೇಕು. ಬುದ್ದಿವಂತಿಕೆ ಹಾಗೂ ಕೌಶಲವನ್ನು ಹೆಚ್ಚಿಸಿ ಜೀವನದ ಹಾದಿಯಲ್ಲಿ ಸಾಗಬೇಕು. ಇದರೊಂದಿಗೆ ಪೋಷಕರು ಹಾಗೂ ಗುರು ಹಿರಿಯರಿಗೆ ಗೌರವವನ್ನು ನೀಡಬೇಕೆಂದು ಎಂದು ಕಿವಿ ಮಾತು ಹೇಳಿದರು.

ಶಿಕ್ಷಣವೆಂದರೆ ಕೇವಲ ಓದು ಬರೆಯುವುದನ್ನು ಕಲಿಯುವುದಲ್ಲ ಅದು ವ್ಯಕ್ತಿಯಲ್ಲಿ ವಿಷಯ ಜ್ಞಾನವನ್ನು ಒಡಮೂಡಿಸುವದರೊಂದಿಗೆ ವರ್ತನೆ, ನಡುವಳಿಕೆ, ಬದುಕುವ ಕಲೆ, ಕೌಶಲ್ಯ, ಮೌಲ್ಯಗಳು, ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ ಮತ್ತು ಜೀವನ ನಿರ್ವಹಣೆಯ ಮೌಲ್ಯಗಳನ್ನು ಮನದಲ್ಲಿ ಬಿತ್ತಿ ಪರಿಪೂರ್ಣ ಮಾನವನ್ನಾಗಿ ನಿಜವಾದ ಶಿಕ್ಷಣದ ಗುರಿಯಾಗಬೇಕು. ಹೀಗಾಗಿ ವಿದ್ಯಾರ್ಥಿಗಳು ಕೇವಲ ಪದವಿ, ಅಂಕ ಮತ್ತು ಯಾವುದೇ ಶಿಕ್ಷಣ ಪಡೆದರೂ ಸಾಲದು. ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ಜೀವನದಲ್ಲಿ ಯಶಸ್ಸು ಪಡೆಯಲು ಬೇಕಾದ ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಮುಗಳನಾಗಾವಿ ಕಟ್ಟಿಮನಿ ಸಂಸ್ಥಾನ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಶಿಕ್ಷಣ ಸಂಸ್ಥೆಗಳು ಶಾಲೆಯಲ್ಲಿನ ಮಕ್ಕಳಿಗೆ ಸಂಸ್ಕತಿ, ಸಂಸ್ಕಾರ, ಪ್ರಾಪಂಚಿಕ ಜ್ಞಾನ ಹಾಗೂ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ದೇಶವನ್ನು ಕಟ್ಟುವ ಕೆಲಸದಲ್ಲಿ ಸಹಕಾರಿಯಾದಲ್ಲಿ ಮಾತ್ರ ವಿದ್ಯಾರ್ಥಿಗಳು ಪಡೆದಂತಹ ಪದವಿಗಳಿಗೆ ಇನ್ನೂ ಹೆಚ್ಚಿನ ಮೆರಗು ಸಿಗಲಿದೆ, ಈ ನಿಟ್ಟಿನಲ್ಲಿ ಶಿಕ್ಷಣದ ನಂತರ ಒಳ್ಳೆಯ ಅವಕಾಶಗಳಿದ್ದು ಅವುಗಳನ್ನು ಪಡೆದುಕೊಂಡು ಸುಂದರ ಬದುಕು ಕಟ್ಟಿಕೊಳ್ಳುವಂತೆ ಹೇಳಿದರು.

ಇದೇ ಸಂದರ್ಭದಲ್ಲಿ ಬೆಂಗಳೂರು ಜಗದ್ಗುರು ಜಯದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಗನಗೌಡ ಎಚ್.ಪೋಲಿಸ್ ಪಾಟೀಲ್ ಇವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ಜ್ಯೋತಿ ಧಮ್ಮಪ್ರಕಾಶ್, ಅಭಿಷೇಕ್ ಪಾಟೀಲ್, ಚಂದ್ರಕಾಂತ್ ಸಿರಗಾಪೂರ, ಬಸವರಾಜ್ ಚಿನಿವಾರ್, ರಾಘವೇಂದ್ರ ಬಿ.ಪಾಟೀಲ್, ಅಫಜಲ್ ಅಲಿ, ಎಂ.ಎ.ಮಠಪತಿ, ಶರಣು ಎಸ್.ಮೈನಾಳ್, ಚಂದ್ರಕಾಂತ್ ಎನ್.ದೇಸಾಯಿ, ಡಾ.ಕರಿಗೋಳೇಶ್ವರ ಎಸ್.ಫರಹತಾಬಾದ್, ಶ್ರೀನಿವಾಸ್ ಕುಲಕರ್ಣಿ, ಸ್ವಪ್ನಿಲ್ ಡಿ.ಸಿ, ಜಗನ್ನಾಥ್ ಎಸ್.ಚವ್ಹಾಣ್, ಪ್ರೊ.ವಿ.ಎಂ.ಹಿರೇಮಠ, ಸಂದೀಪ್ ಎಸ್.ದೇಸಾಯಿ, ಜಗನ್ನಾಥ್ ಎಸ್.ನಾಗೂರ್ ಸೇರಿದಂತೆ ಇತರರು ಇದ್ದರು.

emedialine

Recent Posts

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

4 mins ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

3 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

4 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

18 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

18 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

20 hours ago