ಬಿಸಿ ಬಿಸಿ ಸುದ್ದಿ

ವಿಪಕ್ಷ ನಾಯಕ ಆರ್. ಅಶೋಕಗೆ ಸಾಂಪ್ರದಾಯಿಕ ಸ್ವಾಗತ

ಕಲಬುರಗಿ: ಬರದಿಂದಾಗಿ ತತ್ತರಿಸಿದ ರೈತರ ಸಮಸ್ಯೆ ಆಲಿಸಲು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಮಾಜಿ ಶಾಸಕರಾದ ಸುಭಾಷ ಗುತ್ತೇದಾರವರ ಕೋರಿಕೆಯಂತೆ ರಾಜ್ಯದಲ್ಲೇ ಮೊದಲು ಭೇಟಿ ಕಡಗಂಚಿ ಗ್ರಾಮಕ್ಕೆ ನೀಡಿ ಸಮಸ್ಯೆ ಆಲಿಸಿದ್ದು ರೈತ ಸಮುದಾಯಕ್ಕೆ ಕೊಂಚ ನೆಮ್ಮದಿ ತಂದಿದೆ. ನಾಯಕರು ಬೇಡಿಕೆ ಈಡೇರಿಕೆಗೆ ಒತ್ತಡ ಹೇರಬೇಕು ಎಂದು ಕೆಕೆಆರ್‍ಟಿಸಿ ಮಾಜಿ ನಿರ್ದೇಶಕ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಜಿ. ತಡಕಲ್ ಮನವಿ ಮಾಡಿದರು.

ತಾಲೂಕಿನ ಕqಗÀಂಚಿ ಗ್ರಾಮಕ್ಕೆ ಮಂಗಳವಾರ ರಾಜ್ಯದ ವಿರೋಧ ಪಕ್ಷದ ನೂತನ ನಾಯಕ ಆರ್. ಅಶೋಕ ಅವರು ಬರ ಅಧ್ಯಯನಕ್ಕೆ ಆಗಮಿಸಿದ್ದ ವೇಳೆ ಅವರನ್ನು ರೈತರ ಪರ ಸ್ವಾಗತಿಸಿಕೊಂಡು ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿದರು.

ತಾಲ್ಲೂಕಿನ ರೈತರು ಭೀಕರ ಬರಗಾಲದಿಂದ ತತ್ತರಿಸಿ ಹೋಗಿದ್ದು, ಅನೇಕ ಗ್ರಾಮಗಳಲ್ಲಿ ಕುಡಿಯಲು ನೀರು ಸಿಗದೆ ಜನರು ಪರದಾಡುತಿದ್ದು ಜಾನುವಾರುಗಳು ನೀರು, ಆಹಾರ ಸಿಗದೆ ಸಾವನ್ನಪ್ಪುತಿದ್ದು ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಶಾಸಕರು ರೈತರ ಕೈಗೆ ಸಿಗುತ್ತಿಲ್ಲ, ಆದರೆ ಸದಾ ಜನಪರ ಕಾಳಜಿ ಹೊಂದಿರುವ ಮಾಜಿ ಶಾಸಕ ಸುಭಾಷ ಗುತ್ತೇದಾರವರು ನೇತೃತ್ವದಲ್ಲಿ ವಿಪಕ್ಷ ನಾಯಕರಿಂದ ಕಡಗಂಚಿಯಿಂದಲೇ ಮೊದಲು ಬರ ಅಧ್ಯಯನಕ್ಕೆ ಚಾಲನೆ ನೀಡಿದ್ದು ಶೀಘ್ರವೇ ಬರ ಪರಿಹಾರ ಮತ್ತು ಬೆಳೆ ವಿಮೆ ರೈತರಿಗೆ ದೊರೆಯುವಂತಾಗಲು ವಿಪಕ್ಷ ನಾಯಕರು ಆಗಮಿಸಿದ್ದು ಇಲ್ಲಿಯ ಸರ್ವರಲ್ಲಿ ವಿಶ್ವಾಸ ಮೂಡಿಸಿದೆ ಎಂದು ಹೇಳಿದರು.

ಕಡಗಂಚಿಗೆ ಬರುತ್ತಿದ್ದಂತೆ ಗ್ರಾಮದ ದ್ವಾರಬಾಗಿಲಿನಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ, ಕೆಕೆಆರ್‍ಟಿಸಿ ಮಾಜಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ್ ಅವರು ಸನ್ಮಾನಿಸಿ ಹೂಗುಚ್ಛ ನೀಡಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ಗ್ರಾಮೀಣ ಶಾಸಕರಾದ ಬಸವರಾಜ್ ಮತ್ತಿಮುಡ್, ಬಸವಕಲ್ಯಾಣ ಶಾಸಕ ಶರಣು ಸಲಗರ, ಮಾಜಿ ಶಾಸಕ ಸುಭಾμï.ಆರ್ ಗುತ್ತೇದಾರ, ದತ್ತಾತ್ರೇಯ ಪಾಟೀಲ್ ರೆವೂರ, ಅಮರನಾಥ್ ಪಾಟೀಲ್, ಮುಖಂಡರಾದ ಹμರ್Áನಂದ ಗುತ್ತೇದಾರ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ್ ಪಾಟೀಲ್ ರದ್ದೇವಾಡಗಿ, ಸೇರಿದಂತೆ ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ರೈತರು, ಮುಖಂಡರು, ರೈತರು ಮತ್ತಿತರರು ಇದ್ದರು.

ಆರ್.ಅಶೋಕ ಅವರ ಮುಂದೆ ಕಡಗಂಚಿ ಸುತ್ತಮುತ್ತಲಿನ ರೈತರು ಬೆಳೆಗಳ ಕುರಿತು ಅಳಲು ತೊಡಿಕೊಂಡರು. ಸುಂಟನೂರ, ತೆಲ್ಲೂರ ಮತ್ತಿತರರ ಕಡೆಯ ರೈತರು ಕೃಷಿ ಸಂಬಂಧಿತ ಸಮಸ್ಯೆ ಕುರಿತು ಗಮನಕ್ಕೆ ತಂದರು.

emedialine

Recent Posts

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

11 mins ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

18 mins ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

24 mins ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

1 hour ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

2 hours ago

ಖಾಸಗಿ ಶಾಲೆಗಳಲ್ಲಿ ಡೊನೆಷನ್ ಹೆಚ್ಚಳ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೆಚ್ಚಿನ ಶುಲ್ಕ ಪಡೆಯುವ ಖಾಸಗಿ ಶಾಲೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ…

2 hours ago