ಕಲಬುರಗಿ,ನ.24; ಭಾರತ ಚುನಾವಣಾ ಆಯೋಗದ ನಿರ್ದೇಶನುಸಾರ ದಿ.01-01-2024 ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಬರುವ ಡಿಸೆಂಬರ್ 2 (ಶನಿವಾರ) ಮತ್ತು 3 (ಬುಧವಾರ) ದಂದು ಜಿಲ್ಲೆಯ ಎಲ್ಲಾ 2,378 ಮತಗಟ್ಟೆಗಳಲ್ಲಿ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೋಷಮುಕ್ತ, ಸ್ವಚ್ಛ ಮತ್ತು ಆರೋಗ್ಯ ಸ್ನೇಹಿ ಮತದಾರರ ಪಟ್ಟಿ ಸಿದ್ದಪಡಿಸುವುದು ನಮ್ಮ ಆದ್ಯತೆಯಾಗಿದೆ. ಕಳೆದ ಅಕ್ಟೋಬರ್ 27 ರಂದು ಪ್ರಕಟಿಸಿದ ಕರಡು ಪಟ್ಟಿಯಲ್ಲಿ ಹೆಸರಿಲ್ಲದವರು, ತಿದ್ದುಪಡಿ, ವರ್ಗಾವಣೆ ಬಯಸುವವರು ವಿಶೇಷ ಅಭಿಯಾನದ ಸದುಪಯೋಗಪಡಿಸಿಕೊಂಡು ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು. ಇದಲ್ಲದೆ ವೋಟರ್ ಹೆಲ್ಪಲೈನ್ ಆ್ಯಪ್, ಅಂತರ್ಜಾಲದ ಮೂಲಕವು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಮನವಿ ಮಾಡಿದರು.
ಅಕ್ಟೋಬರ್ 27 ರಂದು ಪ್ರಕಟಿಸಲಾದ ಕರಡು ಪಟ್ಟಿಯಂತೆ ಕಲಬುರಗಿ ಜಿಲ್ಲೆಯಲ್ಲಿ 11,29,472 ಪುರುಷರು, 11,04,808 ಮಹಿಳೆಯರು ಹಾಗೂ ಇತರೆ 329 ಸೇರಿ ಒಟ್ಟಾರೆ 22,34,609 ಜನ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಪ್ರಕಟಿತ ಕರಡು ಪಟ್ಟಿಗೆ ಅಕ್ಷೇಪಣೆ ಸಲ್ಲಿಸಲು ಡಿಸೆಂಬರ್ 9ರ ವರೆಗೆ ಅವಕಾಶ ನೀಡಲಾಗಿದೆ. ಸ್ವೀಕೃತ ಅಕ್ಷೇಪಣೆಯನ್ನು ಡಿಸೆಂಬರ್ 26 ರೊಳಗೆ ವಿಲೇವಾರಿ ಮಾಡಿ ಮತದಾರರ ಅಂತಿಮ ಪಟ್ಟಿಯನ್ನು 2024ರ ಜನವರಿ 5 ರಂದು ಪ್ರಕಟಿಸಲಾಗುವುದು ಎಂದು ಬಿ.ಫೌಜಿಯಾ ತರನ್ನುಮ್ ಅವರು ಮತದಾರರ ಪಟ್ಟಿ ಪರಿಷ್ಕರಣೆಯ ವೇಳಾಪಟ್ಟಿಯನ್ನು ಕುರಿತು ವಿವರಿಸಿದರು.
ಕರಡು ಪಟ್ಟಿ ಪ್ರಕಾರ ವಿಧಾನಸಭಾ ಕ್ಷೇತ್ರವಾರು ನೋಡಿದಾಗ ಅಫಜಲಪೂರನಲ್ಲಿ 1,18,183 ಪುರುಷ, 1,12,005 ಮಹಿಳೆ, ಇತರೆ 21 ಸೇರಿ 2,30,209, ಜೇವರ್ಗಿಯಲ್ಲಿ 1,22,535 ಪುರುಷ, 1,18,910 ಮಹಿಳೆ, ಇತರೆ 28 ಸೇರಿ 2,41,473, ಚಿತ್ತಾಪೂರದಲ್ಲಿ 1,18,944 ಪುರುಷ, 1,18,592 ಮಹಿಳೆ, ಇತರೆ 11 ಸೇರಿ 2,37,547, ಸೇಡಂನಲ್ಲಿ 1,11,993 ಪುರುಷ, 1,14,674 ಮಹಿಳೆ, ಇತರೆ 30 ಸೇರಿ 2,26,697, ಚಿಂಚೋಳಿಯಲ್ಲಿ 1,04,284 ಪುರುಷ, 1,00,483 ಮಹಿಳೆ, ಇತರೆ 15 ಸೇರಿ 2,04,782, ಗುಲಬರ್ಗಾ ಗ್ರಾಮೀಣದಲ್ಲಿ 1,32,925 ಪುರುಷ, 1,26,189 ಮಹಿಳೆ, ಇತರೆ 36 ಸೇರಿ 2,59,150, ಗುಲಬರ್ಗಾ ದಕ್ಷಿಣದಲ್ಲಿ 1,39,454 ಪುರುಷ, 1,41,996 ಮಹಿಳೆ, ಇತರೆ 56 ಸೇರಿ 2,81,506, ಗುಲಬರ್ಗಾ ಉತ್ತರದಲ್ಲಿ 1,53,959 ಪುರುಷ, 1,55,332 ಮಹಿಳೆ, ಇತರೆ 98 ಸೇರಿ 3,09,389 ಹಾಗೂ ಆಳಂದನಲ್ಲಿ 1,27,195 ಪುರುಷ, 1,16,627 ಮಹಿಳೆ, ಇತರೆ 34 ಸೇರಿ 2,43,856 ಜನ ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.
2,378 ಮತಗಟ್ಟೆಗಳು: ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ನಗರ ಪ್ರದೇಶದಲ್ಲಿ 705 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 1,673 ಸೇರಿ ಒಟ್ಟು 2,378 ಮತಗಟ್ಟೆ ಗುರುತಿಸಲಾಗಿದೆ ಎಂದು ಡಿ.ಸಿ. ತಿಳಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…