ಕಲಬುರಗಿ: ಹನ್ನೆರಡನೆಯ ಶತಮಾನದಲ್ಲಿ ಶರಣರು ಬದುಕಿನಲ್ಲಿ ನುಡಿದಂತೆ ನಡೆದು ಅದರಂತೆ ಬದುಕಿ ಬರೆದಿಟ್ಟ ಸಾಹಿತ್ಯವೇ ವಚನ ಸಾಹಿತ್ಯ ಜೀವನದ ಮೌಲ್ಯವನ್ನು ಅರಿತುಕೊಳ್ಳುವ ಸಲುವಾಗಿ ಶರಣರ ವಚನಗಳು ಇಂದಿಗು ಉತ್ತಮ ಸಂದೇಶಗಳು ಹೊಂದಿವೆ. ಹಾಗಾಗಿ ಮೌಢ್ಯ ತುಂಬಿದ ಈ ಸಮಾಜಕ್ಕೆ ವಚನಗಳ ಹಾಡುವ ಮೂಲಕ ಜನಸಾಮಾನ್ಯರಿಗೆ ಜೀವನದ ಮೌಲ್ಯಗಳು ಮುಟ್ಟಿಸಬೇಕಾಗಿದೆ ಎಂದು ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿ ಕರೆ ನೀಡಿದರು.
ನಗರದ ಮಲ್ಲಯ ಜೇವೂರ ಗೃಹ ವಾಸ್ತುಶಾಂತಿ ನಿಮಿತ್ಯ ಹಮ್ಮಿಕೊಂಡ “ವಚನಗಳಿಂದ ಭಜನೆ” ಕಾರ್ಯಕ್ರಮದಲ್ಲಿ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿವಶರಣ ವಚನಗಳಲ್ಲಿ ಇಂದಿಗೂ ಪ್ರಸ್ತುತವಾಗಿವೆ. ತತ್ವ, ಭಕ್ತಿ, ಭಾವ, ಶ್ರದ್ಧೆ, ಅವರ ಸಿದ್ಧಾಂತಗಳು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿ ಅನುಸರಿಸಿಕೊಂಡರೆ ನಮ್ಮ ಜೀವನ ಸಾರ್ಥಕಗೊಳ್ಳುತ್ತದೆಂದು ಜಿಲ್ಲಾ ಹಟಗಾರ ಸಮಾಜದ ಅಧ್ಯಕ್ಷರು ಹಾಗು ನ್ಯಾಯವಾದಿಗಳಾದ ಶಿವಲಿಂಗಪ್ಪ ಅಷ್ಠಗಿ ಕಾರ್ಯ್‍ಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಲ್ಲಿನಾಥ ಬಿ.ಜೇವೂರ ಶಿವಲಿಂಗೇಶ್ವರ ಭಜನಾ ಮಂಡಳಿ ಮುಖಂಡರಾದ ಗೌರಿಶಂಕರ ರೂಗಿ, ಜಿಲ್ಲಾ ಹಟಗಾರ ಸಮಾಜದ ಕಾರ್ಯದರ್ಶಿ ಹಾಗು ನ್ಯಾಯವಾದಿ ವಿನೋದಕುಮಾರ ಜೆನೇವರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗೌರಿಶಂಕರ ರೂಗಿ, ಧಾನಪ್ಪ ಜಳಕೋಟಿ, ಸಂಗ¥ ನಿಂಬಾಳ, ಮಲಕಪ್ಪ ಸಿಂಗಶೆಟ್ಟಿ, ಸುರೇಶ ರೂಗಿ, ವಿಜಯಕುಮಾರ ಗಡ್ಡದ, ಶಿವಶರಣಪ್ಪ ಮಾಸನಳ್ಳಿ, ಶರಣಬಸಪ್ಪ ಗುಳಗಿ, ಸಿದ್ಧಲಿಂಗ ಸಕ್ಕರಗಿ, ಸೋಮನಾಥ ಜಳಕೋಟಿ, ಶಂಭು ಬಸ್ತೆ, ಶೃತಿ, ಅನೀತಾ, ಭಾಗಮ್ಮ ವಿದ್ಯಾಶ್ರೀ, ಹಾಗು ಇತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…