ಬಿಸಿ ಬಿಸಿ ಸುದ್ದಿ

ವಾಡಿ SSLVD ಶಾಲೆಯಲ್ಲಿ ಕನಕದಾಸರ, ರಾಜೀವ್ ದೀಕ್ಷಿತರ ಜಯಂತಿ ಆಚರಣೆ

ವಾಡಿ; ಆಧ್ಯಾತ್ಮದ ಉನ್ನತಿಗಾಗಿ ಕನಕದಾಸರು ಹಾಗೂ ಸ್ವಾವಲಂಬನೆ ಜೀವನಕ್ಕಾಗಿ ರಾಜೀವ್ ದೀಕ್ಷಿತ ಅವರ ಶ್ರಮ ಎಂದು ಮರೆಯಲಾರದು ಎಂದು ಪತಂಜಲಿ ಯೋಗ ಶಿಕ್ಷಕ ಹಾಗೂ ರಾಜೀವ್ ದೀಕ್ಷಿತರ ಅನುಯಾಯಿ ವೀರಣ್ಣ ಯಾರಿ ಹೇಳಿದರು.

ಪಟ್ಟಣದ ಎಸ್ ಎಸ್ ಎಲ್ ವಿ ಡಿ ಶಾಲೆಯಲ್ಲಿ ಭಕ್ತ ಕನಕದಾಸರ ಜಯಂತಿ ಹಾಗೂ ಸ್ವದೇಶೀ ಹರಿಕಾರ ರಾಜೀವ್ ದೀಕ್ಷಿತರ ಜನ್ಮದಿನ ಮತ್ತು ಪುಣ್ಯ ಸ್ಮರಣೆ ಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಕನಕದಾಸರು ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿಯಲ್ಲಿ ಬೆರೆತು ಹೋಗಿರುವ ಶ್ರೇಷ್ಠ ಸಂತರು. ದಾಸ ಸಾಹಿತ್ಯಕ್ಕೆ ವೈಶಿಷ್ಟಪೂರ್ಣವಾದ ಮೆರುಗನ್ನು ತಂದಿತ್ತ ಪಾಂಡಿತ್ಯಪೂರ್ಣ ಕವಿ. ಸಹಜ ಬದುಕಿನಿಂದ ಕೀರ್ತನಕಾರರಾಗಿ, ಸಂತರಾಗಿ, ದಾರ್ಶನಿಕರಾಗಿ, ತತ್ವಜ್ಞಾನಿಯಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅವರು ಅನನ್ಯ ಕೊಡುಗೆ ನೀಡಿದ್ದಾರೆ. ತಮ್ಮ ಕೀರ್ತನೆಗಳಲ್ಲಿ ಭಕ್ತಿ, ವೈರಾಗ್ಯ, ಭಜನೆಗಳಷ್ಟೇ ಅಲ್ಲದೆ ಹದಿನಾರನೆಯ ಶತಮಾನದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸಾತ್ವಿಕ ಸಮರ ಸಾರಿದ್ದಾರೆ. ಸಾಮಾಜಿಕ ಮಡಿವಂತಿಕೆಯನ್ನು ಕನಕದಾಸರು ಕೀರ್ತನೆಗಳಲ್ಲಿ ವಿಡಂಬಿಸಿದ್ದಾರೆ. ಅಂದಿನ ಸಮಾಜದ ಓರೆ ಕೋರೆಗಳನ್ನು ತಿದ್ದಿ ಸಮಸಮಾಜಕ್ಕೆ ನಾಂದಿ ಆಡಿದ್ದಾರೆ ಎಂದರು.

ರಾಜೀವ್ ದೀಕ್ಷಿತರೊಂದಿಗೆ ನನ್ನ ಒಡನಾಟದ ನೆನಪು ಸದಾ ನನ್ನ ಕಣ್ಣೆದುರು ಬರುತ್ತದೆ, ಅವರು ಎರಡು ಸಲ ನಮ್ಮ ವಾಡಿ ಪಟ್ಟಣಕ್ಕೆ ಬಂದು ನಮ್ಮ ಮನೆಯಲ್ಲಿ ಊಟ ಮಾಡಿದ್ದು, ಮಲ್ಲಿಕಾರ್ಜುನ ದೇವಾಲಯದಲ್ಲಿನ ಭಾಷಣ ರಾವೂರಿನ ಸಿದ್ಧಲಿಂಗ ಮಹಾಸ್ವಾಮಿಗಳೊಂದಿಗೆ ಸ್ವದೇಶೀ ವಿಚಾರಗ ಚರ್ಚೆ ಇನ್ನೂ ನನ್ನ ಕಣ್ಣುಕಟ್ಟಿದಂತಿದೆ.

ಶರಣರ ಹಿರಿಮೆಯನ್ನು ಮರಣದಲ್ಲಿ ನೋಡು ಅನ್ನುವಂತೆ ರಾಜೀವ್ ದೀಕ್ಷಿತ್ ಬರೀ ಮಾತಿನಲ್ಲಿ, ಬದುಕಿನಲ್ಲಿ ಮಾತ್ರ ಸ್ವದೇಶಿ ಚಿಂತಕನಾಗಿರಲಿಲ್ಲ. ಸಾವಿನ ಮನೆಗೂ ಅದನ್ನು ಜತೆಯಲ್ಲೇ ಕೊಂಡೊಯ್ದಿದ್ದರು 2010ರ ನವೆಂಬರ್ 30ರಂದು ರಾತ್ರಿ ಛತ್ತೀಸ್‌ಗಢದಲ್ಲಿ ಬಾಬಾ ರಾಮ್‌ದೇವ್ ಜತೆ ಸಭೆಯಲ್ಲಿದ್ದಾಗಲೇ ಅವರಿಗೆ ತೀವ್ರ ಹೃದಯಾಘಾತವಾಗಿತ್ತು.

ಜೀವಕ್ಕೇ ಅಪಾಯ ಇದೇ ಅನ್ನೋದು ತಕ್ಷಣ ಗೊತ್ತಾಗಿದ್ದರೂ ವೈದ್ಯರು ಎಮರ್ಜೆನ್ಸಿ ಇಂಜೆಕ್ಷನ್ ಕೊಡಲು ಬಂದಾಗ ಮಾತ್ರ ದೀಕ್ಷಿತರು ಅದನ್ನು ತೆಗೆದುಕೊಳ್ಳಲು ಬಿಲ್‌ಕುಲ್ ಒಪ್ಪಲಿಲ್ಲ ಇಂಗ್ಲಿಷ್ ಔಷಧಿ ನನಗೆ ಬೇಡ ಎಂದು ಸಾವಿಗೆ ಶರಣಾದರು. ಇಂದು ಅವರ 56ನೇ ಜನ್ಮದಿದೊಂದಿಗೆ ಅವರ 13 ಪಣ್ಯಸ್ಮರಣೆ ನಾವು ಆಚರಿಸುತ್ತಿದ್ದೇವೆ,ಅವರು ಬದುಕಿದ್ದ 43 ವರ್ಷಗಳಲ್ಲಿ ನಮ್ಮ ದೇಶದ ಅಭಿವೃದ್ಧಿಗಾಗಿ ನಮ್ಮ ದೇಹದ ಆರೋಗ್ಯ ಕ್ಕಾಗಿ ಸುಮಾರು ಅಂಶಗಳನ್ನು ನಮಗೆ ಬಿಟ್ಟಹೋಗಿದ್ದಾರೆ ಅವರ ಆಶದಂತೆ ಸ್ವದೇಶೀತನದ ಸ್ವಾವಲಂಬಿ ಬದುಕಿಗೆ ನಾಂದಿ ಆಡಬೇಕಿದೆ ಎಂದರು.

ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಚ್ಚಿದಾನಂದ ಆಂಜನೇಯ ರಾಜೀವ್ ದೀಕ್ಷಿತರ ಬದುಕು ಅವರ ಆಶಯ ಭಾರತದ ಬಗ್ಗೆ ವಿವರಿಸಿದರು.
ಈ ಸಂಧರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಜಮುನಾ ಭಾಗೋಡಿಕರ್, ಶಿಕ್ಷಕಿಯರಾದ ಲಕ್ಷ್ಮೀ ಕಂಠಪ್ಪ,ದ್ರೌಪದಿ ಸಾಬಣ್ಣ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago