ಬಿಸಿ ಬಿಸಿ ಸುದ್ದಿ

ಕರವೇ ರಾಜ್ಯೋತ್ಸವ ಸಂಭ್ರಮ: ಸಾಧಕರಿಗೆ ಪ್ರಶಸ್ತಿ ಪ್ರದಾನ

ಸುರಪುರ: ಕನ್ನಡ ನಾಡು ನುಡಿ ನೆಲ ಜಲದ ಸೇವೆಯಲ್ಲಿ ನಾಡಿನಲ್ಲಿ ಮುಂಚುಣಿಯಲ್ಲಿರುವ ಸಂಘಟನೆ ಎಂದರೆ ಅದು ಕರ್ನಾಟಕ ರಕ್ಷಣಾ ವೇದಿಕೆ ಎನ್ನುವುದು ತುಂಬಾ ಸಂತೋಷದ ಸಂಗತಿಯಾಗಿದೆ,ಅದರಂತೆ ತಾಲೂಕಿನಲ್ಲಿ ವೆಂಕಟೇಶ ನಾಯಕ ಬೈರಿಮಡ್ಡಿ ಅವರ ನೇತೃತ್ವದಲ್ಲಿ ಇಂತಹ ಕಾರ್ಯಕ್ರಮ ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ದೇವಾಪುರ ಜಡಿ ಶಾಂತಲಿಂಗೇಶ್ವರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ಸುರಪುರ ವತಿಯಿಂದ ರಂಗಂಪೇಟ ದೊಡ್ಡ ಬಜಾರ್ ದಲ್ಲಿ ಹಮ್ಮಿಕೊಂಡಿದ್ದ 19 ನೇ ವರ್ಷದ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮನದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.

ಕಾರ್ಯಕ್ರಮದ ಸಾನಿಧ್ಯ ವನ್ನು, ಮರಡಿ ಮಲ್ಲಿಕಾರ್ಜುನ ದೇವಸ್ಥಾನ ದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಮಹಲ್ ರೋಜಾ ದ ಯಮನೂರಪ್ಪ ಮಠದ ಮಲ್ಲಿಕಾರ್ಜುನ ಮುತ್ಯಾ ರವರು ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟನೆ ಯನ್ನು ರಾಜಾ ಹನುಮಪ್ಪ ನಾಯಕ ನೆರವೇರಿಸಿದರು. ಅಧ್ಯಕ್ಷತೆಯನ್ನು ಕ ರ ವೇ ಜಿಲ್ಲಾ ಅಧ್ಯಕ್ಷ ರಾದ ಟಿ ಎನ್ ಭೀಮು ನಾಯಕ ರವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶಂಕರನಾಯಕ ಬಿಜೆಪಿ ಮುಖಂಡ ರು, ವೆಂಕೋಬ ದೊರೆ ರಾಜ್ಯಾಧ್ಯಕ್ಷ ರು ಶೋಷಿತರ ಪರ ಹೋರಾಟ ಸಮಿತಿ, ಬಲಭೀಮನಾಯಕ ಭೈರಿಮಡ್ಡಿ ಬಿಜೆಪಿ ಮುಖಂಡರು, ಮಹೇಶ ಪಾಟೀಲ ನಗರಸಭೆ ಸದಸ್ಯರು,ರಾಜಾ ರಂಗಪ್ಪ ನಾಯಕ ಅಧ್ಯಕ್ಷರು ಅರ್ಬನ್ ಬ್ಯಾಂಕ್ ಸುರಪುರ, ಹೊನ್ನಪ್ಪ ತಳವಾರ ನಗರಸಭೆ ಬಗ್ಗೆಮಾಜಿ ನಾಮ ನಿರ್ದೇಶಿತ ಸದಸ್ಯರು, ಭೀಮರಾಯ ಹವಾಲ್ದಾರ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಸುರಪುರ, ಶರಣು ನಾಯಕ ಭೈರಿಮಡ್ಡಿ, ನಗರಸಭೆ ಸದಸ್ಯ ರಾದ. ಲಕ್ಷ್ಮೀ ಮಲ್ಲು ಬಿಲ್ಲವ, ಸುವರ್ಣ ಸಿದ್ರಾಮ ಎಲಿಗಾರ, ಸರೋಜಾ ಬಸವರಾಜ ಕೊಡೇಕಲ್, ಪಾರ್ವತಿ ಘಾಳೇಪ್ಪ, ಇಸ್ಮಾಯಿಲ್ ಬಳಿಚಕ್ರ,ಆಗಮಿಸಿದ್ದರು.

19 ಜನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ, ಮಿಂಚು, ಗಿಲ್ಲಿ ನಟ ಹಾಗೂ ಸರಿಗಮಪ ಖ್ಯಾತಿಯ ಆಶಾ ಭಟ್ ಮತ್ತು ಸ್ಥಳೀಯ ಸಗರನಾಡು ಸಂಗೀತ ಕಲಾವಿದರಿಂದ ವಿಶೇಷ ಗಾಯನ ವೈಭವ ಹಾಗೂ ಮಂಜುಳಾ ಮೆಲೋಡೀಸ್ ಸಂಗೀತ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.ವೇದಿಕೆಯ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಸಂಘಟನೆ ಬೆಳೆದು ಬಂದ ಹಾದಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕ ರ ವೇ ಜಿಲ್ಲಾ ನಗರ ಘಟಕದ ಅಧ್ಯಕ್ಷ ಅಂಬ್ರೇಷ ಹತ್ತಿಮನಿ, ಹುಣಸಗಿ ತಾಲೂಕ ಅಧ್ಯಕ್ಷ ಶಿವಲಿಂಗ ಪಟ್ಟಣಶೆಟ್ಟಿ, ಗೌರವಾಧ್ಯಕ್ಷ ಬೀಮನಗೌಡ ಬೈಲಾಪೂರ, ಸುರಪುರ ತಾಲೂಕ ಪದಾಧಿಕಾರಿಗಳಾದ ಭೀಮು ನಾಯಕ ಮಲ್ಲಿಭಾವಿ ಜಿಲ್ಲಾ ಸಂ ಕಾರ್ಯದರ್ಶಿ ಗೌರವಾಧ್ಯಕ್ಷ ರಾದ ಶ್ರೀನಿವಾಸ ಭೈರಿಮಡ್ಡಿ, ಉಪಾಧ್ಯಕ್ಷರುಗಳಾದ ಆನಂದ ಮಾಚಗುಂಡಾಳ, ಹಣಮಂತ ದೇವಿಕೇರಿ, ಪ್ರಧಾನ ಸಂಚಾಲಕ ಶ್ರೀನಿವಾಸ ಲಕ್ಷ್ಮೀ ಪೂರ, ಸಂಚಾಲಕ ಹಣಮಂತ ಹಾಲಗೇರಿ, ಸಂಘಟನಾ ಕಾರ್ಯದರ್ಶಿ ಸೋಮಯ್ಯ ಹಾಲಗೇರಿ, ಸಹಕಾರ್ಯದರ್ಶಿ ಕೃಷ್ಣ ಮಂಗಿಹಾಳ, ಸಾಮಾಜಿಕ ಜಾಲ ತಾಣ ಸಂಚಾಲಕ ರಂಗನಾಥ ಬಿರಾದಾರ, ವಕ್ತಾರರಾದ ಶ್ರೀಶೈಲ ಕಾಚಾಪೂರ,ಸಹ ಸಂ ಕಾರ್ಯದರ್ಶಿ ಪ್ರಕಾಶ ಹೆಗ್ಗಣ ದೊಡ್ಡಿ, ಕಾರ್ಮಿಕ ಘಟಕದ ಅಧ್ಯಕ್ಷ ಅಯ್ಯಪ್ಪ ವಗ್ಗಾಲಿ, ವಿಧ್ಯಾರ್ಥಿ ಘಟಕದ ಅಧ್ಯಕ್ಷ ಆಂಜನೇಯ ದೇವರಗೋನಾಲ, ಯುವ ಘಟಕದ ನಾಗರಾಜ ಡೊಣ್ಣಿಗೇರಿ,ಸಾಯಬಣ್ಣ ಬೆಂಕಿ ದೊರಿ, ಮಲ್ಲಿಕಾರ್ಜುನ ರಸ್ತಾಪೂರ, ಪರಶುರಾಮ ಬೋವಿ,ರವಿ ನಾಟೇಕಾರ, ನಗರಘಟಕದ ಮಲ್ಲು ವಿಷ್ಣು ಸೇನೆ, ರಮೇಶ ಯಾದವ, ನಿಂಗಪ್ಪ ಯಾದವ, ವೀರೇಶ ಯಾದವ, ಮಹೇಶ ಯಾದವ, ಇಸ್ಮಾಯಿಲ್ ಕೆಮ್ಮನಗಡ್ಡಿ ಮುರುಳಿ ಅಂಬುರೆ, ಆಟೋ ಘಟಕದ ರಾಮಕೃಷ್ಣ ಡೊಣ್ಣಿಗೇರಿ, ಹೊನ್ನಪ್ಪ ಗೌಡ . ಕೆಂಭಾವಿ ವಲಯದ ಕುಮಾರ ಮೋಪಗಾರ, ಶಿವು ಮಲ್ಲಿಭಾವಿ,ಬಾಷಾ ಪರಸನಳ್ಳಿ, ಕೊಡೇಕಲ್ ವಲಯದ ಹಣಮಂತ ಬರದೇವನಾಳ,
ವಿವಿಧ ಗ್ರಾಮಗಳ ಗ್ರಾಮಶಾಖೆಯ ಬಲಭೀಮ ಬೊಮ್ಮನಹಳ್ಳಿ, ಅರ್ಜುನ ಯಕ್ಷಿಂತಿ, ಮಲ್ಲು ಯಾದವ, ರಾಮನಗೌಡ ಶಖಾಪೂರ,ಪರಶು ಮಲ್ಲಾ’ಬಿ’, ಬಸವರಾಜ ಕಾಚಾಪೂರ,ಭಾಗಣ್ಣ ಗೌಡಗೇರಿ, ರಾಜು ತಳ್ಳಳ್ಳಿ, ರಮೇಶ ಹೆಗ್ಗಣದೊಡ್ಡಿ, ರಾಮಯ್ಯ ದೇವಿಕೇರಿ, ಷಣ್ಮುಖ ಅಡ್ಡೊಡಗಿ, ಶೇಖರ ಚೌಡೇಶ್ವರಿ ಹಾಳ, ಆಂಜನೇಯ ಅಡ್ಡೊಡಗಿ, ರಾಮನಗೌಡ ಶಖಾಪೂರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅಮರಯ್ಯ ಸ್ವಾಮಿ ಜಾಲಿಬೆಂಚಿ,ಮಲ್ಲು ಪರಸನಳ್ಳಿ,ಖಾನಬಾಯಿ ಹೊಸ ಗೌಡರು ನಿರೂಪಿಸಿದರು, ಹಣಮಂತ ದೇವಿಕೇರಿ ಸ್ವಾಗತಿಸಿದರು, ಶ್ರೀಶೈಲ ಕಾಚಾಪೂರ ವಂದಿಸಿದರು.

 

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago