ಬಿಸಿ ಬಿಸಿ ಸುದ್ದಿ

ಪಶು ಸಂಗೋಪನೆ, ಹಾಲು ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ ಭಾರತ ಪ್ರಥಮ ಸ್ಥಾನ

ಬೆಂಗಳೂರು, ಡಿಸೆಂಬರ್ 02; ಪಶು ಸಂಗೋಪನೆ ಹಾಗೂ ಹಾಲು ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ ಭಾರತ ಪ್ರಥಮ ಸ್ಥಾನದಲ್ಲಿದೆ. ಆದರೆ, ಉತ್ಕøಷ್ಟ ಮೇವು, ರಸಮೇವು, ಪಶು ಆಹಾರ ಹಾಗೂ ಆಧುನಿಕ ತಾಂತ್ರಿಕತೆಗಳ ಕೊರತೆಯಿಂದಾಗಿ ವಿಶ್ವದ ಸರಾಸರಿ ಹಾಲು ಉತ್ಪಾದಕತೆಗೆ ಹೋಲಿಸಿದರೆ ಭಾರತದ ಸರಾಸರಿ ಹಾಲಿನ ಉತ್ಪಾದಕತೆಯಲ್ಲಿ ಕಡಿಮೆಯಿದೆ, ಇದು ಕಳವಳಕಾರಿಯಾಗಿದೆ ಎಂದು ಜಾನ್ಸಿ, ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಡಾ. ಅಮರೇಶಚಂದ್ರ ಅವರು ತಿಳಿಸಿದರು.

ಇಂದು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಹಾಗೂ ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆ, ಜಾನ್ಸಿ, ಉತ್ತರ ಪ್ರದೇಶ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ “ಸುಸ್ಥಿರ ಪರಿಸರ ಸ್ನೇಹಿ ಹುಲ್ಲುಗಾವಲು, ಮೇವು ಮತ್ತು ಪ್ರಾಣಿ ವಿಜ್ಞಾನ ನಾವೀನ್ಯತೆಯಿಂದ ಭವಿಷ್ಯದ ಪೋಷಣೆ” ಕುರಿತ ಅಂತರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಸಿ ಮಾತನಾಡಿದ ಅವರು, ಪ್ರಸ್ತುತ, ದೇಶದ್ಯಾಂತ 20 ಮಿಲಿಯನ್ ಹೆಕ್ಟರ್ ಹುಲ್ಲುಗಾವಲು ಇದ್ದರೂ ಸಹ ಶೇಕಡ 12 ರಷ್ಟು ಹಸಿಮೇವು, ಶೇಕಡ 23 ರಷ್ಟು ಒಣ ಮೇವು ಹಾಗೂ ಶೇಕಡ 24 ರಷ್ಟು ಪಶು ಆಹಾರದ ಕೊರತೆ ಇದೆ ಎಂದರು.

ಸರಾಸರಿ ಹಾಲಿನ ಉತ್ಪಾದಕತೆಯನ್ನು ಹೆಚ್ಚಿಸಲು ಉತ್ತಮ ತಳಿಗಳ ಆಯ್ಕೆ, ಆಧುನಿಕ ತಾಂತ್ರಿಕತೆಗಳ ಅಳವಡಿಕೆ ಹಾಗೂ ಪ್ರತಿಯೊಬ್ಬ ರೈತತಮ್ಮ ಹೊಲದಲ್ಲಿ ಶೇಕಡ 10ರಷ್ಟು ಜಾಗವನ್ನು ಹುಲ್ಲುಗಾವಲಿಗೆ ಮೀಸಲಿಡುವುದರಿಂದ ಮೇವಿನ ಕೊರತೆಯನ್ನು ನೀಗಿಸಬಹುದು ಎಂದು ತಿಳಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ವಿ. ಸುರೇಶ ಮಾತನಾಡಿ, ದೇಶದಲ್ಲೇ ಹೈನೋದ್ಯಮ ಒಂದು ಪ್ರಮುಖ ಉದ್ಯಮವಾಗಿದೆ. ಹೈನೋದ್ಯಮ, ಹುಲ್ಲುಗಾವಲು, ಬೇಸಾಯದ ಮೇವಿನ ಬೆಳೆಗಳು ಮತ್ತು ಬೆಳೆ ಉಳಿಕೆಗಳ ಮೇಲೆ ಅವಲಂಬಿತವಾಗಿದೆ. ಹೆಚ್ಚು ಹೆಚ್ಚು ಸಾಂದ್ರಿಕರಿಸಿದ ಪಶು ಆಹಾರದ ಮೇಲೆ ರೈತರು ಅವಲಂಬಿಸಿರುವುದರಿಂದ ಇಂದು ಹೈನೋದ್ಯಮ ಲಾಭದಾಯಕವಾಗಿರುವುದಿಲ್ಲ. ಹೈನೋದ್ಯಮದಲ್ಲಿ ಖರ್ಚು/ವೆಚ್ಚ ಕಡಿಮೆ ಮಾಡಬೇಕಾದರೆ ಪೌಷ್ಠಿಕವಾದ ಮೇವನ್ನು ಪಶುಗಳಿಗೆ ಕೊಡುವುದು ಅವಶ್ಯಕ ಎಂದರು.

ರಾಜ್ಯವು ಬರದ ಪರಿಸ್ಥಿಯನ್ನು ಎದುರಿಸುತ್ತಿದ್ದು ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಎದುರಾಗಬಹುದು. ಇಂತಹ ಕೊರತೆಯನ್ನು ಸಮರ್ಪಕವಾಗಿ ಎದುರಿಸಲು ಮೇವಿನ ಬೆಳೆಗಳ ಸಂಶೋಧನೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ದೇಶ ಅನುಭವಿಸುತ್ತಿರುವ ಮೇವಿನ ಬೆಳೆಗಳ ಕೊರತೆಯನ್ನು ನೀಗಿಸಲು ಮತ್ತು ಸಂಶೋಧನಾ ದಿಶೆಯನ್ನು ನಿರ್ಧರಿಸಲು 3 ದಿನಗಳ ಈ ಸಮ್ಮೇಳನ ಸಹಕಾರಿಯಾಗಲಿದೆ. ನೀರಾವರಿ, ಒಣಬೇಸಾಯ, ಏಕವಾರ್ಷಿಕ, ಬಹುವಾರ್ಷಿಕ, ಏಕದಳ ಮತ್ತು ದ್ವಿ-ದಳ ಮೇವಿನ ಬೆಳಗಳ ಅಭಿವೃದ್ಧಿ, ಬೇಸಾಯ, ಬೀಜೋತ್ಪಾದನೆ, ಸಂಸ್ಕರಣೆ, ವಿಸ್ತರಣೆ ಹೀಗೆ ವಿವಿಧ ಆಯಾಮಗಳ ಕುರಿತು ಚರ್ಚಿಸಲು ಈ ಸಮಾವೇಶ ಉತ್ತಮ ವೇದಿಕೆಯನ್ನು ಕಲ್ಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಬೀದರ್‍ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೆ.ಸಿ. ವೀರಣ್ಣ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಹೈನುಗಾರಿಕೆಯಲ್ಲಿ ಪಶುಗಳ ಆರೋಗ್ಯ ಪ್ರಮುಖವಾಗಿ ಮೇವಿನ ಗುಣಮಟ್ಟ ಹಾಗೂ ಪಶು ಆಹಾರದ ಮೇಲೆ ಅವಲಂಬಿತವಾಗಿದೆ. ಇತ್ತೀಚಿನ ದಿನಗಳಲ್ಲಿ, ನಗರ ಪ್ರದೇಶ ಹಾಗೂ ಹಳ್ಳಿಗಳಲ್ಲಿ ಪಶುಗಳು ಸೇವಿಸುವ ಮೇವಿನಲ್ಲಿ ಭಾರ ಲೋಹಗಳು ಕಂಡು ಬರುತ್ತಿವೆÉ. ಇದು ಮನುಷ್ಯನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಲಿದೆ. ಆದುದರಿಂದ, ಅರಣ್ಯ ಕೃಷಿಯಿಂದ ಮೇವನ್ನು ಉತ್ಪಾದಿಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.

ಅರಣ್ಯ ಪ್ರದೇಶದಲ್ಲಿ ಹುಲ್ಲುಗಾವಲಿಗಾಗಿ ಗೋಮಾಳಗಳನ್ನು ಸಂರಕ್ಷಿಸುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಅತ್ಯವಶ್ಯಕ. 2026 ನ್ನು ಅಂತರಾಷ್ಟ್ರೀಯ ಹುಲ್ಲುಗಾವಲು ಮತ್ತು ಪಶು ಮೇಯಿಸುವ ಸಮುದಾಯದ ವರ್ಷವೆಂದು ಮಾರ್ಚ್ 15, 2022 ರಂದು ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಘೋಷಿಸಲಾಗಿದೆ. ಭಾರತದ ಶೇ.17ರಷ್ಟು ಭೌಗೋಳಿಕ ಪ್ರದೇಶವು ಹುಲ್ಲುಗಾವಲಿನಿಂದ ಆವೃತ್ತವಾಗಿದೆ. ಸುಮಾರು 130 ಲಕ್ಷ ಪಶು ಪಾಲಕರು ಹುಲ್ಲುಗಾವಲಿನ ಮೇಲೆ ಅವಲಂಬಿತರಾಗಿದ್ದಾರೆ. ಅಲ್ಲದೇ, ಒಟ್ಟು ದೇಶಿಯ ಉತ್ಪಾದನೆಯಲ್ಲಿ ಶೇ.3ರಷ್ಟು ಕೊಡುಗೆ ಹುಲ್ಲುಗಾವಲಿನದ್ದಾಗಿರುತ್ತದೆ. ಆದುದರಿಂದ ಹುಲ್ಲುಗಾವಲನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಮಾವೇಶದಲ್ಲಿ ಸುಮಾರು 52 ಸಂಸ್ಥೆಗಳಿಂದ, 5 ದೇಶಗಳಿಂದ ಮತ್ತು 3 ಅಂತರಾಷ್ಟ್ರೀಯ ಸಂಸ್ಥೆಗಳಿಂದ 300ಕ್ಕಿಂತ ಹೆಚ್ಚು ಸಂಶೋಧನಾ ವಿಜ್ಞಾನಿಗಳು, ಅಭಿವೃದ್ಧಿ ವೃತ್ತಿಪರರು ಭಾಗವಹಿಸಿದ್ದರು.

ಸಮಾವೇಶದಲ್ಲಿ ಪಿ. ದಿನೇಶ್, ಮುಖ್ಯ ಪ್ರಧಾನ ವ್ಯವಸ್ಥಾಪಕರು, ನರ್ಬಾಡ್, ಮುಂಬೈ, ಡಾ.ಎಸ್. ಕೆ. ಪ್ರಧಾನ್, ಸಹಾಯಕ ಮಹಾ ನಿರ್ದೇಶಕರು, ಐಸಿಎಆರ್, ನವದೆಹಲಿ,ಡಾ. ಎಂ.ಬಿ. ಚೆಟ್ಟಿ, ಕುಲಪತಿಗಳು, ಸಂಸ್ಕøತಿ ವಿಶ್ವವಿದ್ಯಾಲಯ, ಮಥುರ, ಉತ್ತರ ಪ್ರದೇಶರವರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago