ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು ಸಂವಿಧಾನದ 371ನೇ ಜೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ವತಿಯಿಂದ ವ್ಯವಸ್ಥಿತವಾಗಿ ಕಾರ್ಯಾಚರಣೆ ರೂಪದಲ್ಲಿ ಅಭಿಯಾನ ನೆಡೆಸಲು ಕಲ್ಯಾಣ ಕರ್ನಾಟಕ ಪ್ರದೇಶದ ತಜ್ಞರ ಚಿಂತಕರ, ಬುದ್ಧಿಜೀವಿಗಳ ದುಂಡು ಮೇಜಿನ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತುಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ತಿಳಿಸಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ ಹಿರಿಯ ಪತ್ರಕರ್ತರು ಮತ್ತು ಚಿಂತಕರ ಆದ ಶ್ರೀನಿವಾಸ ಸಿರನೂರಕರ್ ರವರು ಮಾತ್ನಾಡಿ ಕಲ್ಯಾಣ ಕರ್ನಾಟಕ ಪ್ರದೇಶದ ವಿಶೇಷ ಅಭಿವೃದ್ಧಿಗೆ ಮಂಡಳಿ ರಚನೆಯಾಗಿದೆ ಮೂರು ದಶಕಗಳು ಕಳೆದರೂ ವಿಭಾಗೀಯ ಕೇಂದ್ರ ಕಲಬುರ್ಗಿಗೆ ಕನಿಷ್ಠ ಮೂಲಭೂತ ಸೌಕರ್ಯ ನೀಡಲು ಆಗದೆ ಇರುವುದು ಖೇದಕರವಾದ ಸಂಗತಿ ಎಂದ ಅವರು ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಗ್ರಾಮ ಮಟ್ಟದಿಂದ ನಗರಗಳ ವರೆಗೆ ಮೂಲ ಸೌಕರ್ಯ ಒದಗಿಸಲು ಸಮಿತಿಯಿಂದ ಅಭಿಯಾನ ನಡೆಸಲು ಪ್ರತಿಪಾದಿಸಿದರು.ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಯ ಬಗ್ಗೆ ಸರ್ಕಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಒತ್ತಾಯಿಸಬೇಕೆಂದು ಪ್ರೊ .ಆರ್.ಕೆ.ಹುಡಗಿಯವರು ಸಭೆಗೆ ಆಗ್ರಹಿಸಿದರು.
ಕೆಕೆಆರ್ ಡಿಬಿಯಿಂದ ದೂರ ದೃಷ್ಟಿಕೋನದ ಕ್ರಿಯಾ ಯೋಜನೆ ರೂಪಿಸಿ ಕಾಲಮಿತಿಯಲ್ಲಿ ಕಲ್ಯಾಣದ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಕೆಕೆಆರ್ ಡಿಬಿಯ ಅಧ್ಯಕ್ಷರ ಮೇಲೆ ಒತ್ತಡ ತರಲು ಅಗ್ರಹಿಸಿದರು.ಈ ಬಗ್ಗೆ ಆದಷ್ಟು ಶೀಘ್ರ ಮಂಡಳಿಯ ಅಧ್ಯಕ್ಷರ ಜೊತೆ ಸಭೆ ನಡೆಸಿ ಆದಷ್ಟು ಶೀಘ್ರ ಕ್ರಮ ಸಮಿತಿ ಯಿಂದ ನಡೆಸಲು ಸಭೆಗೆ ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ ಬೀದರ ಮುತ್ತು ರಾಯಚೂರಿನ ತಜ್ಞರಾದ ರಾಮಣ್ಣ,ವಿನಯ ಮಾಳಗೆ ಯವರು ಮಾತ್ನಾಡಿ ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಯಾವ ಮುಲಾಜಿ ಇಲ್ಲದೆ ಹೋರಾಟಕ್ಕೆ ಹೆಜ್ಜೆ ಇಡಬೇಕು ಎಂದರು.ಸಭೆಯಲ್ಲಿ ಲಿಂಗರಾಜ ಸಿರಗಾಪೂರ,ಡಾ.ಮಾಜಿದ ದಾಗಿ, ವಿಜಯಕುಮಾರ್ ಚಿಮ್ಮುಲಗಿ,ರೌಫ ಖಾದ್ರಿ, ಅಬ್ದುಲ್ ಖದೀರ್,ಡಾ.ದೇವಿದಾಸ ಮಾಲೆ ,ರಾಜೆ ಶಿವಶರಣ,ಸಂತೋಷ ಜವಳಿ,ಬಿ.ಬಿ.ನಾಯಕ, ಮುತ್ತಣ್ಣ ನಾಡಗೇರಿ, ಬೀಮಶೆಟ್ಟಿ ಮುಕ್ಕಾ, ಅಸ್ಲಂ ಚೌಂಗೆ, ಸೇರಿದಂತೆ ಅನೇಕರು ತಮ್ಮ ವಿಷಯಗಳು ಮಂಡಿಸಿದರು.
ಸರ್ವಾನುಮತದಿಂದ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ನಿರ್ಣಯಗಳು ಮಂಡಿಸಿದ್ದರು ಪ್ರೊ.ಆರ್ ಕೆ.ಹುಡಗಿಯವರು ಅನುಮೋದಿಸಿದರು. ಈ ದುಂಡು ಮೇಜಿನ ಸಭೆಯಲ್ಲಿ ಅಶೋಕ ಗುರೂಜಿ, ವೀರೇಶ ಪುರಾಣಿಕ, ಶಿವಲಿಂಗಪ್ಪ ಭಂಡಕ್,ಎಂ.ಬಿ.ನಿಂಗಪ್ಪ, ಸಾಜಿದ್ ಅಲಿ ರಂಜೋಳ್ವಿ,ಶರಣಬಸಪ್ಪ ಕುರಿಕೂಟಾ,ಬಾಬಾ ಫಕ್ರುದ್ದೀನ್,ಮಲ್ಲಿನಾಥ ಸಂಘಶೆಟ್ಟಿ, ಶಿವಕುಮಾರ್ ಬಿರಾದಾರ, ವಿಶ್ವನಾಥ್ ಪಾಟೀಲ್,ಅಣವೀರಪ್ಪ ಹೆಬ್ಬಾಳ, ಸೋಲೋಮನ್ ದಿವಾಕರ ,ಗಿರೀಶ್ ಗೌಡರು,ಡಾ.ಬಿ.ಎಸ್.ಪಾಟೀಲ್, ಶಿವಶಂಕರ ಬಿರಾದಾರ,ಬಸವರಾಜ ಚಿಡಗುಂಪಿ,ರಾಜು ಜೈನ್, ಪ್ರಲ್ಹಾದ ಎಂ ಕಲ್ಯಾಣರಾವ ತೊನಸ್ಸಳ್ಳಿ, ಶಿವಾನಂದ ಕಾಂದೆ, ಮಕ್ಬೂಲ್ ಪಟೇಲ್ ಬೀಮಶಾ ಮಡಿವಾಳ, ಮುನ್ನಿ ಬೇಗಂ, ಮುಮ್ತಾಜ್ ಬೇಗಂ,ಸಾಲಿಯಾ ಬೇಗಂ,ಶಿಲಾರಾಣಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…