ಬಿಸಿ ಬಿಸಿ ಸುದ್ದಿ

ದೇವಸ್ಥಾನಗಳ ಜೀರ್ಣೋದ್ಧಾರ ಅಕ್ರಮ: ತನಿಖೆಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಳಗಾವಿ ಸುವರ್ಣಸೌಧ,ಡಿ.04: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ 5 ಗ್ರಾಮಗಳಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ ನೆಪದಲ್ಲಿ ಯಾವುದೇ ಕಾಮಗಾರಿಗಳನ್ನು ನಡೆಸದೇ ಬಿಲ್ ಮಾಡಲಾಗಿದೆ ಎಂಬ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಅವರ ಮನವಿಗೆ ಸ್ಪಂದಿಸಿದ ಸಾರಿಗೆ,ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು.

ವಿಧಾನಸಭೆಯಲ್ಲಿ ಶಾಸಕಿ ಕರೆಮ್ಮ ನಾಯಕ್ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದರು. ದೇವದುರ್ಗ ತಾಲೂಕಿನಲ್ಲಿ ಈಗಾಗಲೇ ಬಿಡುಗಡೆ ಮಾಡಿದ ಅನುದಾನದಲ್ಲಿ 87 ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿಗಳನ್ನು ಕೈಗೊಳ್ಳದಿರುವುದು ಸರಕಾರದ ಗಮನದಲ್ಲಿದ್ದು, ಶಾಸಕರು ಬೇರೆ ದೇವಸ್ಥಾನಗಳ ಪಟ್ಟಿ ನೀಡಿದ್ದಲ್ಲಿ ಅವುಗಳನ್ನು ಪರಿಗಣಿಸಲಾಗುವುದು ಎಂದರು.

ತುಮಕೂರು ಗ್ರಾಮಾಂತರ ಶಾಸಕರು ಸಹ ತಮ್ಮ ಕ್ಷೇತ್ರದಲ್ಲಿ ಇದೇ ರೀತಿ 10 ದೇವಸ್ಥಾನಗಳ ಜೀರ್ಣೋದ್ಧಾರ ನೆಪದಲ್ಲಿ ಅಕ್ರಮ ನಡೆದಿದ್ದು,ತನಿಖೆ ನಡೆಸುವಂತೆ ಸಚಿವರನ್ನು ಕೋರಿದರು;ಇದಕ್ಕೂ ಸಮ್ಮತಿ ನೀಡಿದ ಸಚಿವ ರಾಮಲಿಂಗಾರೆಡ್ಡಿ ಅವರು ತನಿಖೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಹೊಸದಾಗಿ 500 ಬಸ್‌ಗಳ ಖರೀದಿ: ಹೊಸದಾಗಿ 500 ಬಸ್‌ಗಳನ್ನು ಖರೀದಿ ಮಾಡಲಾಗುತ್ತಿದ್ದು,ಮಾರ್ಚ್ ವೇಳೆಗೆ ಬರಲಿವೆ. 9 ಸಾವಿರ ಸಿಬ್ಬಂದಿಗಳ ನೇಮಕ ಪ್ರಕ್ರಿಯೆ ನಡೆದಿದ್ದು, ಸಿಬ್ಬಂದಿ ಮತ್ತು ಬಸ್‌ಗಳು ಬಂದ ನಂತರ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಕ್ರಮವಹಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವೇಗವಾಗಿ ಬೆಳೆಯುತ್ತಿರುವ ಗಂಗಾವತಿ ನಗರದಲ್ಲಿ ಸ್ಯಾಟಿಲೈಟ್ ಬಸ್ ನಿಲ್ದಾಣ ನಿರ್ಮಿಸುವುದಕ್ಕೆ ಜಮೀನು ಗುರುತಿಸುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಪ್ರಸ್ತಾವನೆ ಗಮನಕ್ಕಿದ್ದು, ಈ ಕುರಿತು ಸ್ಥಳೀಯ ಶಾಸಕರೊಂದಿಗೆ ಸರಕಾರದ ಜಾಗದ ಕುರಿತು ಚರ್ಚಿಸಲಾಗಿದೆ;ಸಂಬಂಧಿಸಿದ ಸಚಿವರೊಂದಿಗೆ ಸಭೆ ನಡೆಸಿ ಸದರಿ ಜಾಗ ಪಡೆದು ಸ್ಯಾಟಿಲೈಟ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಜನಾರ್ಧನರೆಡ್ಡಿ ಅವರ ಪ್ರಶ್ನೆಯೊಂದಕ್ಕೆ ಸಚಿವ ರಾಮಲಿಂಗಾರೆಡ್ಡಿ ಅವರು ಉತ್ತರಿಸಿದರು.

emedialine

Recent Posts

ಅನರ್ಹ ಬಿ.ಪಿ.ಎಲ್ ಪಡಿತರ ಚೀಟಿ ಪತ್ತೆ ಹಚ್ಚಿ: ಅಕ್ರಮ‌ ಮದ್ಯ ಮಾರಾಟಕ್ಕೆ ಬ್ರೆಕ್ ಹಾಕಿ| ಡಿ.ಸಿ. ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಉಳ್ಳವರು ಸಹ ಸರ್ಕಾರಿ ಸೌಲಭ್ಯ ಪಡೆಯಲು ಬಿ‌.ಪಿ‌.ಎಲ್ ಪಡಿತರ ಚೀಟಿ ಪಡೆದಿರುವ ಸಾಧ್ಯತೆ ಇದ್ದು, ಕೂಡಲೆ ಇಂತಹ ಅನರ್ಹ…

4 hours ago

ಕುಂಬಾರ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ನೀಡಲು ಒತ್ತಾಯ

ಶಹಾಬಾದ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುಂಬಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಅನುದಾನ ನೀಡುವ ಮೂಲಕ ಕಲಬುರಗಿ…

5 hours ago

ಪರಿಸರಸ್ನೇಹಿ ಪರ್ಯಾಯ ಇಂಧನಗಳ ಬಳಕೆ ಅಗತ್ಯ

ಶಹಬಾದ: ಪರಿಸರ ಮಾಲಿನ್ಯ ಉಂಟು ಮಾಡುವ ಇಂಧನಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿಯಾಗುವ ಪರ್ಯಾಯ ಇಂಧನಗಳ ಬಳಕೆ ಮಾಡಿದಲ್ಲಿ…

5 hours ago

ಕೊಲುವೆನೆಂಬ ಭಾಷೆ ದೇವನದಾದರೆ ಗೆಲುವೆನೆಂಬ ಭಾಷೆ ಭಕ್ತನದಾಗಬೇಕು

ಬಸವಾದಿ ಶರಣರ ರಚನೆಯ ವಚನ ಎನ್ನುವುದು ಬಹಳ ಮೌಲಿಕವಾದ ನುಡಿ. 'ವ' ಎಂಬ ಸೂತ್ರವನ್ನು ಬಿಡಿಸುವುದಾದರೆ, ವ ಎಂಬ ಮೊದಲ…

6 hours ago

ಮೋಹರಂ ಭಾವೈಕ್ಯತೆಯ ಸಂಕೇತದ ಉತ್ಸವ

ಕಲಬುರಗಿ: ಭಾರತ ಅನೇಕ ಜಾತಿ, ಧರ್ಮಗಳಿಂದ ಕೂಡಿದ್ದ ದೇಶವಾಗಿದ್ದು, ಹಬ್ಬ, ಜಾತ್ರೆ, ಉತ್ಸವಗಳು ಪರಸ್ಪರ ಬೆಸೆಯುತ್ತವೆ. ತ್ಯಾಗ, ಭಾವೈಕ್ಯತೆಯ ಸಂಕೇತವಾಗಿ…

6 hours ago

ತಾಜಸುಲ್ತಾನಪುರ: ಶಾಲಾ ಸಂಸತ್ತು ರಚನೆ

ಕಲಬುರಗಿ: ನಗರ ಹೊರವಲಯದ ತಾಜಸುಲ್ತಾನಪುರ ಗ್ರಾಮದ ಕೆಎಸ್ ಆರ್ ಪಿ ಸರಕಾರ ಪ್ರೌಢ ಶಾಲೆ ಕೆ. ಎಸ್. ಆರ್. ಪಿ…

6 hours ago