ಬಿಸಿ ಬಿಸಿ ಸುದ್ದಿ

ಪಡಿತರ ಚೀಟಿ ಹಾಗೂ ಪಡಿತರ ವಿತರಣೆಯಲ್ಲಿ ಉಂಟಾಗುವ ಸಮಸ್ಯೆಯನ್ನು ನಿವಾರಿಸಲು ಆಗ್ರಹ

ಕಲಬುರಗಿ: ರಾಜ್ಯದಲ್ಲಿ ಪಡಿತರ ವಿತರಣ ಮತ್ತು ಪಡಿತರ ಆಹಾರ ಧಾನ್ಯ ವಿತರಣೆಯಲ್ಲಿ ಆಗುತ್ತಿರುವ ವ್ಯತ್ಯಾಸ ಹಾಗೂ ಸರಕಾರದಿಂದ ಸಿಮೆ ಎಣ್ಣೆ ವಿತರಣೆ ಸೇರಿದಂತೆ ಇತರೆ ಆಹಾರ ಪದಾರ್ಥವನ್ನು ಪೂನರ ಆರಂಭಿಸಬೇಕೆಂದು ಅವರು ಎಸ್.ಯು.ಸಿ.ಐ.(ಸಿ) ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಹೆಚ್. ವ್ಹಿ ದಿವಾಕರ್ ಅವರು ಮುಖ್ಯಾಮಂತ್ರಿಗಳಿ ಪತ್ರ ಬರೆದು ಆಗ್ರಹಿಸಿದರು.

ಅವರು ಇಂದು ನಗರದ ತಿಮ್ಮಾಪುರಿ ಸರ್ಕಲ್ ನಿಂದ ಪ್ರತಿಭಾಟನಾ ಮೆರವಣಿಗೆ ನಡೆಸಿ ಮಾತನಾಡಿದ ಅವರು ಬಿಪಿಎಲ್ ಕಾರ್ಡುದಾರರಿಗೆ ಅಗತ್ಯ ವಸ್ತುಗಳು ಪೂರೈಕೆ ಆಗುತ್ತಿಲ್ಲ. ಪಡಿತರ ವಿತರಣೆ ಮಾಲೀಕರು ಮುಕ್ತ ಮಾರುಕಟೆಯಲ್ಲಿ ಕಳಪೆ ಮಟ್ಟದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಅವರು ಆರೋಪಿಸಿದರು.

ಪಡಿತರ ವಿತರಣೆಯಲ್ಲಿ ಮುಕ್ತ ಮಾರುಟಕೆ ನೆಪ್ಪದಲ್ಲಿ ಕಳಪೆ ಮಟ್ಟದ ಸೂಪೂ ಮತ್ತು ಪೌಡರ್ ಸೇರಿದಂತೆ ಮುಂತಾದ ವಸ್ತುಗಳು ಪಡಿತರ ಗ್ರಾಹಕರಿಗೆ ಮಾರುಕಟ್ಟೆ ದರಕಿಂತ ಹೆಚ್ಚಿನ ದರಲ್ಲಿ ಮಾರಾಟ ಮಾಡುತ್ತಿದ್ದಾರೆ ಈ ದಂಧೆಗೆ ಬ್ರೇಕ್ ಹಾಕಿ, ಹಿಂದೆ ಪಡಿತರದಾರರಿಗೆ ಅಕ್ಕಿ, ಗೋಧಿ, ಸಕ್ಕರೆ, ಅಡುಗೆ ಎಣ್ಣೆ, ಹೆಸರು ಬೆಳೆ, ಬೆಲ್ಲ, ಉಪ್ಪು, ಹಾಗೂ ಸೀಮೆ ಎಣ್ಣೆ ದಂತಾಹ ಪದಾರ್ಥಗಳು ವಿತರಿಸುವುದನ್ನು ಪೂನರ್ಹರಂಭಿಸಬೇಕೆಂದು ಒತ್ತಾಯಿಸಿದರು.

ನಂತರ ಎಸ್.ಎಂ ಶರ್ಮಾ ಮಾತನಾಡಿ, ರಾಜ್ಯದಲ್ಲಿ ಪಡಿತರ ಚೀಟಿ ವಿತರಣೆ ವಿಳಂಬ ನೀತಿ ಖಂಡಿಸಿ ಅರ್ಹರಿಗೆ ತ್ವರಿತವಾಗಿ ಪಡಿತರ ಚೀಟಿ ವಿತರಸಿ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಸ್.ಎಂ ಶರ್ಮಾ, ಸೀಮಾ ದೇಶಪಾಂಡೆ, ಸಂತೋಷಕುಮಾರ ಹಿರವೆ, ಸ್ನೇಹಾ ಕಟ್ಟಿಮನಿ, ಶಿಲ್ಪಾ ಬಿ.ಕೆ, ಕರ್ಣ, ಪ್ರೀತಿ ದೊಡ್ಮನಿ, ಪ್ರೀತಿ ಇಂಗಳಗಿ ಹಾಗೂ ರೇವಣಸಿದ್ದಪ್ಪ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

emedialine

Recent Posts

ಮಹಿಳೆಯರನ್ನು ಗೌರವಿಸುವ ಶ್ರೀಮಂತ ಸಂಪ್ರದಾಯ ಹೊಂದಿರುವ ದೇಶ ಭಾರತ

ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಅಶೋಕ ಪಾಟೀಲ ಮಹಿಳೆ ಅಥವಾ ಸ್ತ್ರೀ ಪದವು ಸಂಸ್ಕøತದ್ದು, ಕನ್ನಡದಲ್ಲಿ ಈ…

4 days ago

ನಿಧನ ವಾರ್ತೆ: ಭೀಮರಾವ.ಸಿ.ಸುಗೂರ

ಶಹಾಬಾದ:ನಗರದ ಹಳೆಶಹಾಬಾದನ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಭೀಮರಾವ.ಸಿ.ಸುಗೂರ (77) ಶನಿವಾರದಂದು ನಿಧನರಾಗಿದ್ದಾರೆ. ಇವರಿಗೆ ಇಬ್ಬರು ಸುಪುತ್ರರು, ಇಬ್ಬರು ಸುಪುತ್ರಿಯರು…

1 week ago

ನೆಲೋಗಿ ಬಿ.ಆರ್.ಅಂಬೇಡ್ಕರ ಭವನದಲ್ಲಿ ಛತ್ರಪತಿ ಶಿವಾಜಿಯ ಮಹಾರಾಜರ ಜನ್ಮ ದಿನಾಚರಣೆ

ಜೇವರ್ಗಿ: ಇಂದು ನೆಲೋಗಿ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಸೇವಾ ಚಾರಿಟೇಬಲ್ ಟ್ರಸ್ಟ್ ನೆಲೋಗಿವತಿಯಿಂದ ಡಾ. ಬಿ.ಆರ್.ಅಂಬೇಡ್ಕರ ಸಮುದಾಯ ಭವನದಲ್ಲಿ ಛತ್ರಪತಿ…

3 weeks ago

ಸಮಾಜದಲ್ಲಿನ ಅನಿಷ್ಟ ಪದ್ಧತಿ ಹೋರಾಟ ಅಗತ್ಯ: ಮೇಯರ್

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಮೂಢನಂಬಿಕೆ, ಅನಿಷ್ಟ ಪದ್ಧತಿ, ಸಂವಿಧಾನದ ಆಶಯ ಈಡೇಸುವ ನಿಟ್ಟಿನಲ್ಲಿ ಜನ್ಮ ತಾಳಿದ ಮಾನವ ಬಂಧುತ್ವ…

4 weeks ago

ಕಲಬುರಗಿ; 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ ಆಯೋಜನೆ

ಕಲಬುರಗಿ: ನಗರದ ಸೆಂಟ್ ಮೇರಿ ಶಾಲೆಯಲ್ಲಿ 5 ರಿಂದ 9 ನೇ ತರಗತಿಯ 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ…

4 weeks ago

ಉಚಿತ ಆರೋಗ್ಯ ತಪಾಸಣೆ ಶಿಬಿರ

ಜೇವರ್ಗಿ: ತಾಲೂಕಿನ ಜನರ ಸೇವೆಗಾಗಿ ಕಲಬುರಗಿಯ ಇಸ್ಲಾಮಾಬಾದ ಕಾಲೋನಿಯ ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥರು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು…

1 month ago