ಕಲಬುರಗಿ: ಶಾದಿ ಭಾಗ್ಯ ಮತ್ತು ಹಿಂದುಳಿದ ವಸತಿ ನಿಲಯ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಹಣ ಲೂಟಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಹುದ್ದೆಯಿಂದ ವಜಾ ಗೊಳಿಸಬೇಕೆಂದು ಆರ್.ಟಿ.ಐ ಕಾರ್ಯಕರ್ತ ರವಿ ಮದನಕರ್ ಅವರು ಒತ್ತಾಯಿಸಿದರು.
ಅವರು ಇಂದು ನಗರದ ಸರದಾರ ವಲ್ಲಭಾಯಿ ಪಟೇಲ್ ವೃತ ಹತ್ತಿರ ಪ್ರತಿಭಟನೆ ನಡೆಸಿ, ಕಳೆದ ಹತ್ತು ವರ್ಷಗಳಿಂದ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಯಾಗಿ ಶಾದಿ ಭಾಗ್ಯ ಯೋಜನೆಯ ಅನುದಾನವನ್ನು ಬೇಕಾಬಿಟ್ಟಿಯಾಗಿ ಬಿಡುಗಡೆ ಮಾಡಿಕೊಂಡು ಲೂಟಿ ಮಾಡಿದ್ದ ತನಿಖಾ ತಂಡದಿಂದ ಬಹಿರಂಗವಾಗಿದೆ ಎಂದು ಅವರು ತಿಳಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ವಿರುದ್ಧ ಕ್ರಮಕ್ಕಾಗಿ ಕಲಬುರಗಿ ಪ್ರದೇಶಿಕ ಆಯುಕ್ತರು ಅಲ್ಪಸಂಖ್ಯಾತರ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆಂದು ಅವರು ತಿಳಿಸಿದರು.
ಅಲ್ಲದೇ ಇಂತಹ ಭ್ರಷ್ಟ ಅಧಿಕಾರಿಗೆ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಿಂದುಳಿದ ವರ್ಗದ ಇಲಾಖೆಯ ಅಧಿಕಾರಿಯಾಗಿ ನಿಯೋಜಿಸಿ ಮತ್ತಷ್ಟು ಭ್ರಷ್ಟಾಚಾರಕ್ಕೆ ಕುಮಕ್ಕು ನೀಡಿದಂತಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದರು.
ನಂತರ ಇನ್ನೂರ್ವ ಆರ್.ಟಿ.ಐ ಕಾರ್ಯಕರ್ತರಾದ ಸಂಗಮನಾಥ ಗಿರೇಗೌಡ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ಕಲಬುರಗಿ ವಿಶ್ವ ವಿದ್ಯಾಲಯದಲ್ಲಿ ವಸತಿ ನಿಲಯದ ದುರಸ್ತಿ ಕಾಮಗಾರಿಗಳು ಕಳಪೆ ಆಗಿದ್ದು, ಇದಕ್ಕೆ ವಿರೋಧ ಮಾಡಿರುವವರ ಜೊತೆ ಸೇರಿ ಹಣ ಲೂಟಿ ಮಾಡಿದ್ದಾರೆಂದು ಆರೋಪಿಸಿದರು.
ಇಂತಹ ಅಧಿಕಾರಿಗಳಿಗೆ ಎರಡು ಹುದ್ದೆ ನೀಡಿ ಪತ್ತಷ್ಟು ಪ್ರೋತ್ಸಾಹಿಸಿದಂತೆದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗುರು ಭಂಡಾರಿ, ಗಿರೀಶ ಚಕ್ರ, ಆಕಾಶ ರಾಠೋಡ, ಶಶಿಕುಮಾರ, ಮಲ್ಲಿಕಾರ್ಜುನ್ ತಳಕೇರಿ, ಶೇಖ್ ಶಫೀ ಅಹ್ಮದ್, ಚಂದು ಪವಾರ್, ರಮೇಶ ಚವ್ಹಾಣ, ಆನಂದ ಚವ್ಹಾಣ, ಬಿ. ಎಂ ಯಳವಾರ, ಹೀರಾ ಹೇಮಂತ ರಾಠೋಡ, ವಿಶ್ವನಾಥ ಪಾಟೀಲ, ಸಂತೋಷ ಭೈರಾಮಡಗಿ, ಕಿರಣ ಪವಾರ ಸೇರಿದಂತೆ ಮುಂತಾದ ಆರ್.ಟಿ.ಐ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.
ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಅಶೋಕ ಪಾಟೀಲ ಮಹಿಳೆ ಅಥವಾ ಸ್ತ್ರೀ ಪದವು ಸಂಸ್ಕøತದ್ದು, ಕನ್ನಡದಲ್ಲಿ ಈ…
ಶಹಾಬಾದ:ನಗರದ ಹಳೆಶಹಾಬಾದನ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಭೀಮರಾವ.ಸಿ.ಸುಗೂರ (77) ಶನಿವಾರದಂದು ನಿಧನರಾಗಿದ್ದಾರೆ. ಇವರಿಗೆ ಇಬ್ಬರು ಸುಪುತ್ರರು, ಇಬ್ಬರು ಸುಪುತ್ರಿಯರು…
ಜೇವರ್ಗಿ: ಇಂದು ನೆಲೋಗಿ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಸೇವಾ ಚಾರಿಟೇಬಲ್ ಟ್ರಸ್ಟ್ ನೆಲೋಗಿವತಿಯಿಂದ ಡಾ. ಬಿ.ಆರ್.ಅಂಬೇಡ್ಕರ ಸಮುದಾಯ ಭವನದಲ್ಲಿ ಛತ್ರಪತಿ…
ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಮೂಢನಂಬಿಕೆ, ಅನಿಷ್ಟ ಪದ್ಧತಿ, ಸಂವಿಧಾನದ ಆಶಯ ಈಡೇಸುವ ನಿಟ್ಟಿನಲ್ಲಿ ಜನ್ಮ ತಾಳಿದ ಮಾನವ ಬಂಧುತ್ವ…
ಕಲಬುರಗಿ: ನಗರದ ಸೆಂಟ್ ಮೇರಿ ಶಾಲೆಯಲ್ಲಿ 5 ರಿಂದ 9 ನೇ ತರಗತಿಯ 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ…
ಜೇವರ್ಗಿ: ತಾಲೂಕಿನ ಜನರ ಸೇವೆಗಾಗಿ ಕಲಬುರಗಿಯ ಇಸ್ಲಾಮಾಬಾದ ಕಾಲೋನಿಯ ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥರು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು…