ಕಲಬುರಗಿ: ಸಾಮಾನ್ಯವಾಗಿ ದಿನನಿತ್ಯ ಬದುಕಿನ ಸಲುವಾಗಿ ಮಾಡುವ ಕಾಯಕ ನಿಜವಾದ ಕಾಯಕವಲ್ಲ. ಕಾಯಕ ಎಂದರೇ ಯಾವುದೇ ಕೆಲಸವನ್ನು ಲಾಭಕ್ಕಾಗಿ ಮಾಡದೇ, ಅದರಿಂದ ಫಲ ಮತ್ತು ಹಿತ ಬಯಸದೇ ಸತ್ಯ ಶುದ್ಧ ಮತ್ತು ಪರಹಿತಕ್ಕಾಗಿ ಮಾಡುವ ನಿಸ್ವಾರ್ಥ ಸೇವೆಯೇ ಪರಿಶುದ್ಧ ಕಾಯಕವಾಗುತ್ತದೆ ಎಂದು ಅಮೇರಿಕಾದ ಬಸವ ಡಿವೈನ್ ಕೇಂದ್ರದ ಸಂಸ್ಥಾಪಕರಾದ ರೂಪಕಾ ಅಕ್ಕಾ ಹೇಳಿದರು.
ಶರಣಬಸವ ಶತಮಾನೋತ್ಸವ ಸಭಾಂಗಣದಲ್ಲಿ ಶರಣಬಸವ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಬಹು ಶಿಸ್ತಿನ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ. ಸತ್ಯಶುದ್ಧವಿಲ್ಲದು ಕಾಯಕವಲ್ಲ. ಆಸೆಂಬುವುದು ಭವದ ಬೀಜ. ನಿರಾಸೆಯೆಂಬುದು ನಿತ್ಯಮುಕ್ತಿ ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ. ಕಾಣವ್ವಾ ಎಂಬ ಶರಣೆ ಕಾಳವ್ವೆ ಬರೆದ ವಚನದ ಸಾರಾಂಶ ಹೇಳಿದರು.
ವೈದ್ಯರು ಒಳ್ಳೆಯ ಮನೋಭಾವನೆಯಿಂದ ರೋಗಿಗೆ ವಾಸಿ ಮಾಡುವ ಚಿಕಿತ್ಸೆ ಶುದ್ಧ ಕಾಯಕವಾಗಿರುತ್ತದೆ. ಆದರೆ ಹಣದ ಆಮೀಷದ ಕಾರಣಕ್ಕೆ ಮಾಡುವ ಚಿಕಿತ್ಸೆ ಅದು ದಾಸೋಹ ಕಾಯಕವಾಗಿರುವದಿಲ್ಲ. ಇದರಿಂದ ಮಹಾತ್ಮ ಬಸವಣ್ಣನವರ ಕಾಯಕ ಮತ್ತು ದಾಸೋಹ ಎಂಬ ಮಹಾನ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯಾರು ಕಷ್ಟದಲ್ಲಿ ಇರುತ್ತಾರೆ, ಅವರಿಂದ ಯಾವುದೇ ನಿರೀಕ್ಷೆ ಮಾಡದೆ ಶುದ್ಧ ಮನಸ್ಸಿನಿಂದ ಸಹಾಯ ಮಾಡುವುದು ಸಹ ನಿಜವಾದ ದಾಸೋಹವಾಗುತ್ತದೆ. ನಮ್ಮಲ್ಲಿರುವ ನಕಾರಾತ್ಮಕ ವಿಚಾರಗಳು ತೆಗೆದುಹಾಕಿ. ಸಕಾರಾತ್ಮಕ ವಿಚಾರಗಳು ಅಳವಡಿಸಿಕೊಳ್ಳಬೇಕು. ನಾವು ಕಲಿತ ವಿದ್ಯೆ ಇನ್ನೊಬ್ಬರಿಗೆ ಉಚಿತವಾಗಿ ನೀಡುವುದೆ ದಾಸೋಹದ ಪರಿಕಲ್ಪನೆಯಾಗಿದೆ ಎಂದು ದಾಸೋಹ ಸೂತ್ರದ ಬಗ್ಗೆ ತಿಳಿಸಿದರು.
ಅಮೇರಿಕಾದಲ್ಲಿ ಒರ್ವ ಮಹಿಳೆಯ ಮೇಲೆ ದೌರ್ಜನ್ಯ ನಡೆದಿರುತ್ತದೆ. ದೌರ್ಜನ್ಯಕ್ಕೆ ತುತ್ತಾದ ಮಹಿಳೆ ಬಹಳ ನೊಂದಿರುತ್ತಾಳೆ. ಆರೋಪಿಯನ್ನು ಹಿಡಿದುಕೊಡಬೇಕು ಎಂದು ಪೊಲೀಸರು ಮಾಧ್ಯಮದ ಮೂಲಕ ತಿಳಿಸುತ್ತಾರೆ. ತಕ್ಷಣ ಒರ್ವ ಮಹಿಳೆ ಪೊಲೀಸರಿಗೆ ಕರೆ ಮಾಡಿ ಆರೋಪಿ ನಮ್ಮ ಮನೆಯಲ್ಲಿ ಇದ್ದಾನೆ. ಕರೆದುಕೊಂಡು ಹೋಗಿ ಎನ್ನುತ್ತಾಳೆ. ಆದರೆ ಆರೋಪಿ ಆ ಮಹಿಳೆಯ ಮಗನಾಗಿರುತ್ತಾನೆ. ಆಂದರೆ ತಾಯಿ ಮಗ ಎಂಬ ಸಂಬಂದ ಲೆಕ್ಕಿಸದೇ, ಮಹಿಳೆಗೆ ಆದ ಅನ್ಯಾಯ ನೋವು ತಾನು ಅನುಭವಿಸಿ ಇನ್ನೊರ್ವ ಮಹಿಳೆಗೆ ಸಹಾಯ ಮಾಡುತ್ತಾಳೆ ಅದುವೇ ಹೆಂಪತಿಯಾಗಿದೆ. ಇದರಿಂದ ಪ್ರತಿಯೊಬ್ಬರು ಇಂತಹ ಹೆಂಪತಿ ಬೆಳೆಸಿಕೊಳ್ಳಬೇಕು ಎಂದು ಮಹಾತ್ಮರ ತತ್ವಗಳು ಪರಿಚಯಿಸಿದರು.
ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ.ಬಸವರಾಜ ಬೆಣ್ಣಿ ಮಾತನಾಡಿದರು. ಮಾತೋಶ್ರೀ ಪೂಜ್ಯ ದಾಕ್ಷಾಯಿಣಿ ಅವ್ವಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಕುಲಸಚಿವ ಡಾ. ಅನೀಲ ಕುಮಾರ ಬಿಡವೆ, ವಿವಿ ಸಮ ಕುಲಪತಿ ಡಾ. ವಿ.ಡಿ.ಮೈತ್ರಿ, ವಿವಿ ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ವಿವಿ. ಡೀನ್ ಡಾ.ಲಕ್ಷ್ಮಿ ಮಾಕಾ, ಕ್ಯಾಲಿರ್ಫೊನಿಯದ ಸೊನಮ್ ರಾಜ್ಯ ವಿಶ್ವವಿದ್ಯಾಲಯದ ಎಲೆಟ್ರಿಕಲ್ ಸೈನ್ಸ್‌ಸದ ಅಧ್ಯಕ್ಷ ಡಾ. ಫರಿದ್ ಫಾರಹ್ಮದ್, ಐರಲ್ಯಾಂಡ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಡಾ. ಮಾರಟೀನ್ ಸೆರಾನೊ, ಡಾ.ಶಿವುಕುಮಾರ ಮಠಪತಿ, ಗೋದುತಾಯಿ ಪದವಿ ಮಹಿಳಾ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ನೀಲಾಂಬಿಕಾ ಶೇರಿಕಾರ್, ಡಾ.ವಿಲಾಸವತಿ ಖುಬಾ ಇದ್ದರು. ಪ್ರೊ.ಚೇತನಾ ಪಾಟೀಲ ನಿರೂಪಿಸಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…