ಕಲಬುರಗಿ; ಜಿಲ್ಲೆಯ ಆಳಂದ ತಾಲೂಕಿನ ಧಂಗಾಪೂರ್ ಗ್ರಾಮದ ರೈತ ನಾಗರಾಜ ಶೇಗಜಿ ರವರಿಗೆ 2023ನೇ ಸಾಲಿನ ಮಹೇಂದ್ರ ಟ್ರ್ಯಾಕ್ಟರ್ ಪ್ರಾಯೋಜಕತ್ವದ “ಮಿಲೆನೀಯರ್ ಆಫ್ ಇಂಡಿಯಾ ಅವಾರ್ಡ”ಪ್ರಶಸ್ತಿ ಲಭಿಸಿದೆ.
ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಕಳೆದ ಸಾಲಿನ ನರ್ಸರಿ ಮತ್ತು ಸುಧಾರಿತ ಬೇಸಾಯ ಕ್ರಮಗಳಿಂದ ಯಶಸ್ವಿಯಾಗಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ. ಇತ್ತೀಚಿಗೆ ದೆಹಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಾರಿಗೆ ಸಚಿವರಾದ ನೀತಿನ್ ಗಡ್ಕರಿರವರು ಪ್ರಶಸ್ತಿ ನೀಡಿ ಶೇಗಜಿಯವರಿಗೆ ಗೌರವಿಸಿದರು.
ನಾಗರಾಜ ಶೇಗಜಿರವರು ವಿಜಯಲಕ್ಷ್ಮಿ ತೋಟಗಾರಿಕೆ ನರ್ಸರಿ ಮೂಲಕ ವಿವಿಧ ತಳಿಗಳ ಸಸಿಗಳನ್ನು ಕಲಬುರಗಿ ಜಿಲ್ಲೆಯ ಬಹುತೇಕ ರೈತರ ಜಮೀನುಗಳಿಗೆ ತಲುಪಿಸಿದ ಹೆಗ್ಗಳಿಕೆ ಜೊತೆಗೆ ನೆರೆ ರಾಜ್ಯಗಳ ಮೇಲಿನ ಅವಲಂಬನೆಯನ್ನು ತಗ್ಗಸಿ ಸಾಗಣಿಕೆ ವೆಚ್ಚದ ಉಳಿತಾಯ ಹಾಗೂ ಗುಣಮಟ್ಟದ ಸಸಿಗಳನ್ನು ಪೂರೈಸುವುದರ ಮೂಲಕ ಈ ಭಾಗದ ರೈತರ ಕಣ್ಮಣಿಯಾಗಿದ್ದಾರೆ.
ಅಲ್ಲದೆ ಕಬ್ಬಿನಲ್ಲಿ ಕಟಾವು ಯಂತ್ರಗಳ ಬಳಕೆ ಮತ್ತುಪ್ರಚಾರ, ಪ್ರೆಸ್‍ಮಡ್ ಕಾಂಪೋಷ್ಟ್ ತಯಾರಿಕೆ ಮತ್ತು ಮಾರಾಟ, ಆಧುನಿಕ ಪದ್ದತಿಯಲ್ಲಿ ಪಪ್ಪಾಯ ಮತ್ತು ಕಲ್ಲಂಗಡಿ ಬೆಳೆಗಳ ನಿರ್ವಹಣೆ ಮತ್ತು ಜಮೀನಿನ ಫಲವತ್ತತೆ ವೃದ್ದಿಸಲು ಎರೆಗೊಬ್ಬರ ಬಳಕೆ ಮುಂತಾದ ಕ್ರಮಗಳಿಂದ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…