ಶಹಾಬಾದ :ಬೌದ್ಧಿಕ ಹಕ್ಕುಗಳು ನಾವೀನ್ಯತೆಯ ಹಿತಾಸಕ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿಗಳ ನಡುವೆ ಸಮತೋಲನವನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಕಾರ್ಯಗಾರದ ಮುಖ್ಯ ಅತಿಥಿಗಳಾಗಿದ್ದ ಮೈಸೂರಿನ ಡಾ. ಶರತ್ ಕುಮಾರ ಪತ್ತಾರ್ ಹೇಳಿದರು.
ಅವರು ಹೈ.ಕ.ಶಿಕ್ಷಣ ಸಂಸ್ಥೆಯ ಎಸ್.ಎಸ್.ಮರಗೋಳ ಕಲಾ ಹಾಗೂ ವಾಣಿಜ್ಯ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಭೌದ್ಧಿಕ ಆಸ್ತಿ ಹಕ್ಕುಗಳು” ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪೇಟೆಂಟ್ ರಕ್ಷಣೆಗೆ ಅರ್ಹತೆ ಪಡೆಯಲು, ಆವಿμÁ್ಕರವು ಪೇಟೆಂಟ್ ಮಾಡಬಹುದಾದ ವಿಷಯದ ವ್ಯಾಪ್ತಿಯಲ್ಲಿ ಬರಬೇಕು ಮತ್ತು ನಾವೀನ್ಯತೆ, ಆವಿμÁ್ಕರದ ಹಂತ ಮತ್ತು ಕೈಗಾರಿಕಾ ಅನ್ವಯದ ಮೂರು ಶಾಸನಬದ್ಧ ಅವಶ್ಯಕತೆಗಳನ್ನು ಪೂರೈಸಬೇಕು, ಟ್ರೇಡ್‍ಮಾರ್ಕ್ ಮೂಲದ ಬ್ಯಾಡ್ಜ್ ಆಗಿದೆ. ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಸರಕು ಮತ್ತು ಸೇವೆಗಳ ಮೂಲವನ್ನು ಸಾರ್ವಜನಿಕವಾಗಿಸಲು ಮತ್ತು ಇತರ ಘಟಕಗಳಿಂದ ಸರಕು ಮತ್ತು ಸೇವೆಗಳನ್ನು ಪ್ರತ್ಯೇಕಿಸಲು ಇದು ಒಂದು ನಿರ್ದಿಷ್ಟ ಚಿಹ್ನೆಯಾಗಿದೆ. ಇದು ಮಾಲೀಕ ಮತ್ತು ಉತ್ಪನ್ನದ ನಡುವಿನ ಸಂಪರ್ಕವನ್ನು ಸ್ಥಾಪಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಭೌದ್ಧಿಕ ಹಕ್ಕು ರಕ್ಷಣೆಯ ಕುರಿತು ಸುಧೀರ್ಘವಾಗಿ ಮಾಹಿತಿ ನೀಡಿದರು.
ಉದ್ವಾ ಮ್ಯಾನೇಜ್ಮೆಂಟ್‍ನ ಶ್ರೀನಿವಾಸ ರೆಡ್ಡಿ ಮಾತನಾಡಿ, ಪೇಟೆಂಟ್‍ಗಳು, ಟ್ರೇಡ್‍ಮಾರ್ಕ್‍ಗಳು, ಸೇವಾ ಗುರುತುಗಳು, ಕೈಗಾರಿಕಾ ವಿನ್ಯಾಸ ನೋಂದಣಿಗಳು, ಹಕ್ಕುಸ್ವಾಮ್ಯಗಳು ಮತ್ತು ವ್ಯಾಪಾರ ರಹಸ್ಯಗಳಂತಹ ಹಕ್ಕು ಗಳ ಸಹಾಯದಿಂದ ನಾವೀನ್ಯತೆಗಳ ಉಲ್ಲಂಘನೆಯಿಂದ ರಕ್ಷಿಸಲು ಪ್ರಮುಖ ಕ್ಷಿಪ್ರ ತಂತ್ರಜ್ಞಾನ, ಜಾಗತೀಕರಣ ಮತ್ತು ತೀವ್ರ ಸ್ಪರ್ಧೆ, ಆದರೆ ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆ ಇನ್ನೂ ಇದೆ. ಅವುಗಳನ್ನು ತಡೆಯಲು ಸರ್ಕಾರವೂ ಕ್ರಮ ಕೈಗೊಳ್ಳುತ್ತಿದೆ. ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಲು ಕಾನೂನುಗಳಿವೆ ಎಂದು ಹೇಳಿದರು.
ಈ ಕಾರ್ಯಗಾರದ ಅಧ್ಯಕ್ಷತೆ ವಹಿಸಿದ ಪೆÇ್ರ.ಕೆ ಬಿ.ಬಿಲ್ಲವ್ ರವರು ಮಾತನಾಡಿ, ವಿದ್ಯಾರ್ಥಿಗಳು ಕಾರ್ಯಗಾರದ ಮಾಹಿತಿಯ ಸದುಪಯೋಗವನ್ನು ಪಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಈ ಕಾರ್ಯಗಾರದಲ್ಲಿ ಹಿರಿಯ ಪ್ರಾಧ್ಯಾಪಕರಾದ ಡಾ.ಸಿಬಿ ಗಂದಿಗುಡಿ, ಡಾ.ಗಂಗಾಧರ ಸ್ಥಾವರಮಠ, ಪೆÇ್ರ.ಎಮಕೆ ಬೊತಗಿ, ಪೆÇ್ರ.ಗುರುಲಿಂಗಪ್ಪ ತುಂಗಳ, ಪೆÇ್ರ.ವಿಶಾಲ್ ರಾಠೋಡ, ಪೆÇ್ರ.ಶ್ರೀಮಂತ ದೊಡ್ಡಮನಿ ಹಾಗೂ ಪದವಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಐಕ್ಯೂಎಸಿ ಸಂಯೋಜಕ ಡಾ.ಸೋಮಶೇಕರ್ ಪ್ರಾಸ್ತಾವಿಕ ನುಡಿದರು, ಡಾ.ಲಕ್ಷ್ಮಣ ಸ್ವಾಗತಿಸಿದರು,ಪೆÇ್ರೀ.ಶಿವಶಂಕರ ಹಿರೇಮಠ ನಿರೂಪಿಸಿದರು, ಪೆÇ್ರೀ.ಶಿವಕುಮಾರ ಕುಸಾಳೆ ವಂದಿಸಿದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…