ಬಿಸಿ ಬಿಸಿ ಸುದ್ದಿ

ಮಕ್ಕಳಲ್ಲಿನ ಪ್ರತಿಭೆ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಸಹಕಾರಿ

ಸುರಪುರ:ಮಕ್ಕಳಲ್ಲಿನ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ತುಂಬಾ ಸಹಕಾರಿಯಾಗಿದೆ ಎಂದು ತಾಲುಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ತಿಳಿಸಿದರು.

ನಗರದ ಸರಕಾರಿ ಬಾಲಕ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ಪಂಚಾಯತ್ ಯಾದಗಿರಿ,ತಾಲೂಕು ಪಂಚಾಯತ್ ಸುರಪುರ,ಹುಣಸಗಿ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಮಕ್ಕಳಿಗೆ ಈ ವೇದಿಕೆ ತುಂಬಾ ಮುಖ್ಯವಾಗಿದೆ,ಅಲ್ಲದೆ ಪಾಲಕರು ಕೂಡ ಈ ಕಾರ್ಯಕ್ರಮದ ಬಗ್ಗೆ ತುಂಬಾ ಆಸಕ್ತಿ ಹೊಂದಿರುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಕಟಪೂರ್ವ ಕ್ಷೇತ್ರಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಮಾತನಾಡಿ,ಶಾಲೆಯಲ್ಲಿ ಎಲ್ಲಾ ಮಕ್ಕಳು ಪಾಠದಲ್ಲಿ ಮುಂದೆ ಇರುತ್ತಾರೆ ಎನ್ನಲಾಗದು,ಆದರೆ ಪಾಠದಲ್ಲಿ ಮುಂದೆ ಇಲ್ಲದ ಮಕ್ಕಳಲ್ಲಿ ಒಳ್ಳೆಯ ಕಲಾ ಪ್ರತಿಭೆ ಇರಲಿದೆ,ಅಂತಹ ಮಕ್ಕಳು ಹಾಗೂ ಪೋಷಕರಿಗೆ ಈ ವೇದಿಕೆ ತುಂಬಾ ಅಮೂಲ್ಯವಾಗಿದೆ ಎಂದರು.

ಅಲ್ಲದೆ ತೀರ್ಪುಗಾರರು ಯಾವ ಶಾಲೆ,ಸರಕಾರಿ ಶಾಲೆ,ಖಾಸಗಿ ಶಾಲೆ,ಅನುದಾನಿತ,ಅನುದಾರ ರಹಿತ ಎಂದು ಗಣನೆಗೆ ತೆಗೆದುಕೊಳ್ಳದೆ,ಉತ್ತಮವಾಗಿ ಪ್ರದರ್ಶನ ತೋರಿದ ಮಕ್ಕಳ ಪ್ರತಿಭೆಗೆ ಉತ್ತಮವಾದ ಅಂಕವನ್ನು ನೀಡುವ ಮೂಲಕ ಅಂತಹ ಮಕ್ಕಳಿಗೆ ಪ್ರಶಸ್ತಿಗೆ ಆಯ್ಕೆಗೊಳಿಸುವಂತೆ ತಿಳಿಸಿದರು.ಇದೇ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಪಂಡೀತ ನಿಂಬೂರ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಲಾ ಬಾಲಕಿಯೊಬ್ಬಳು ಯಲ್ಲಪ್ಪ ಕಾಡ್ಲೂರ ಅವರ ಕುರಿತು ಕಣಿ ಹೇಳಿ ಇನ್ನೂ ನಾಲ್ಕು ತಿಂಗಳಲ್ಲಿ ನಿಮಗೆ ಶಾಶ್ವತ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗುವ ಯೋಗವಿದೆ ಎಂದು ಹೇಳಿದಾಗ ಇಡೀ ಕಾರ್ಯಕ್ರಮ ನಗೆಗಡಲಲ್ಲಿ ತೇಲಿತು.ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮಕ್ಕಳು ಮಹರ್ಷಿ ವಾಲ್ಮೀಕಿ,ಜಗಜ್ಯೋತಿ ಬಸವೇಶ್ವರ,ಅಕ್ಕಮಹಾದೇವಿ,ಮಹಾತ್ಮ ಗೌತಮ್ ಬುದ್ಧರ ಛದ್ಮ ವೇಷಧರಿಸಿ ಮಕ್ಕಳು ಕಲಾ ಪ್ರದರ್ಶನ ತೋರಿಸಿದರು. ಅಲ್ಲದೆ ಹುಲಿ ವೇಷಧಾರಿ ಶಾಲಾ ಮಗುವೊಂದು ಉತ್ತಮ ಪ್ರದರ್ಶನ ತೋರಿದರು,ಸುರಪುರ ಮತ್ತು ಹುಣಸಗಿ ತಾಲೂಕಿನ ವಿವಿಧ ಶಾಲಾ ಮಕ್ಕಳಿಂದ ನೃತ್ಯ,ಕೋಲಾಟ,ಭರತನಾಟ್ಯ ಸೇರಿದಂತೆ ವಿವಿಧ ಪ್ರದರ್ಶನಗಳನ್ನು ನಡೆಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಬಿಸಿಯೂಟದ ಸಹಾಯಕ ನಿರ್ದೇಶಕ ಯಲ್ಲಪ್ಪ ಚಂದನಕೇರಿ,ಕಾರ್ಯಕ್ರಮದ ನೋಡಲ್ ಅಧಿಕಾರಿ ಶಿವಪುತ್ರಪ್ಪ ಸಜ್ಜನ್,ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳಾದ ಗೋವಿಂದಪ್ಪ ಟಣಕೆದಾರ,ಬಸನಗೌಡ ವಠಾರ,ಸೋಮರಡ್ಡಿ ಮಂಗಿಹಾಳ,ಶರಣಗೌಡ ದೇವರಗೋನಾಲ,ಎಪಿಎಫ್ ಸಂಪನ್ಮೂಲ ವ್ಯಕ್ತಿ ಅನ್ವರ ಜಮಾದಾರ್, ಗೋಪಾಲ ನಾಯಕ ಯಡಿಯಾಪುರ,ಶರಣು ಪಾಕರಡ್ಡಿ,ಅಪ್ಪಣ್ಣ ಕುಲಕರ್ಣಿ,ಸಾಬರಡ್ಡಿ ಇಟಗಿ ಇದ್ದರು.ಗಾಯಕ ಶರಣಕುಮಾರ ಜಾಲಹಳ್ಳಿ ಪ್ರಾರ್ಥಿಸಿದರು,ಮಹಾದೇವಪ್ಪ ಗುತ್ತೇದಾರ ನಿರೂಪಿಸಿದರು,ಮಾಳಪ್ಪ ಸ್ವಾಗತಿಸಿದರು,ಬಿಆರ್‍ಪಿ ಖಾದರ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿದರು,ಶರಣು ಗೋನಾಲ ವಂದಿಸಿದರು.ಎರಡು ತಾಲೂಕಿನ ಅನೇಕ ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.

emedialine

Recent Posts

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

5 seconds ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

2 mins ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago