ಅಂಕಣ ಬರಹ

ಶರಣಬಸವೇಶ್ವರ ಲೀಲೆಗಳಿಗೆ ಅಂತ್ಯವಿಲ್ಲ

ಮಹಾದಾಸೋಹಿ ಶರಣಬಸವೇಶ್ವರ ಶಿವಲೀಲೆಗಳಿಗೆ ಅಂತ್ಯವಿಲ್ಲ ಅವು ನಿರಂತರವಾಗಿ ನಡೆಯುತ್ತಲೇ ಇರುತ್ತವೆ ಎಂದು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಶಿವರಾಜ ಶಾಸ್ತ್ರಿ ಹೇರೂರ್ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶನಿವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು. ಒಂದು ಸಲ ಕೆಲವು ಜನರು ಕೂಡಿ ಮೂರ್ತಿಯೊಂದನ್ನು ಮಾಡಿ ಅದಕ್ಕೆ ಜಂಗಮರ ಉಡಿಗೆ ತೊಡಿಗೆಗಳನ್ನು ಉಡಿಸಿ ಶರಣಬಸವರ ಮಹಾಮನೆಯ ದಾಸೋಹ ಪಂಕ್ತಿಯಲ್ಲಿ ಪ್ರಸಾದಕ್ಕೆಂದು ಕೂಡಿಸಿ ತಾವು ಅದರ ಪಕ್ಕದಲ್ಲಿಯೇ ಕುಳಿತರು. ಅಲ್ಲಿಯೇ ಕುಳಿತ ಶರಣರು ಇದನ್ನೆಲ್ಲ ನೋಡುತ್ತಾರೆ. ಮೂರ್ತಿ ಕೂಡಾ ಉಳಿದವರಂತೆ ಉಣ್ಣಲು ಪ್ರಾರಂಭಿಸಿತು. ತನ್ನ ಸಮೀಪ ಕುಳಿತರವ ಪ್ರಸಾದವು ತಿನ್ನತೊಡಗಿತು. ಗಾಬರಿಗೊಂಡ ಅವರೆಲ್ಲರೂ ಶರಣರ ಪಾದ ಹಿಡಿದು ತಪ್ಪಾಯ್ತಪ್ಪಾ ಎಂದು ಬೇಡಿಕೊಳ್ಳುತ್ತಾರೆ. ಆ ಜನರ ಕಡೆಗೆ ನಡೆದು ಬರುತ್ತಿದ್ದ ಮೂರ್ತಿಯನ್ನು ಶರಣರು ದೃಷ್ಟಿಸಿದಾಗ ಅದು ಅಲ್ಲಿಯೇ ಬಿದ್ದುಬಿಡುತ್ತದೆ.

ಆಳಂದ ಊರಿನ ವ್ಯಕ್ತಿಯೊಬ್ಬರು ಶರಣಬಸವರಲ್ಲಿ ಅಪಾರ ಭಕ್ತಿ ಗೌರವವನ್ನಿರಿಸಿಕೊಂಡಿದ್ದರು. ತನ್ನ ಮಗ ಹಾಸಿಗೆ ಹಿಡಿದಿದ್ದರೂ ಅವರ ಮುಂದೆ ಹೇಳದೆ ಸುಮ್ಮನಾಗಿದ್ದರು. ಶರಣರಿಗೆ ಇದು ಗೊತ್ತಾಯಿತು. ಅವರು ತನ್ನ ಭಕ್ತನಿಗೆ ನಿನ್ನ ಮನೆಗೆ ನಾನು ಬರುತ್ತೇನೆಂದು ಹೇಳಿದರು. ಶರಣರು ಬರುತ್ತಾರೆಂದು ಎಲ್ಲವನ್ನು ತಯಾರಿ ಮಾಡಿದ್ದ. ಶರಣರು ಹೇಳಿದ ದಿನ ಬಂದು ಸ್ನಾನ ಮಾಡಿ ಪೂಜೆಗೆ ಕೂಡುತ್ತಾರೆ. ಮಗು ಹಾಸಿಗೆಯಲ್ಲಿ ಒಂದೇ ಸವನೆ ನರಳಾಡುತ್ತಿರುತ್ತದೆ. ಶರಣರ ಕಿವಿಯ ಮೇಲೆ ಈ ಕೂಗು ಬೀಳುತ್ತಲೆ ಇತ್ತು. ಲಿಂಗಪೂಜೆ ಮುಗಿಸಿಕೊಂಡು ಲಿಂಗದ ನೀರು ಮತ್ತು ಭಸ್ಮವನ್ನು ತೆಗೆದುಕೊಂಡು ಆ ಕೂಸಿನ ಹತ್ತಿರ ಹೋಗಿ ಆ ಲಿಂಗದ ನೀರನ್ನು ಸಿಂಪಡಿಸಿದರು, ಭಸ್ಮವನ್ನು ಹಚ್ಚಿದರು. ಹುಡುಗ ನಿದ್ದೆಗಣ್ಣಿನಿಂದ ಏಳುವಂತೆ ಎದ್ದ. ಆ ಬಡದಂಪತಿಗಳಿಗೆ ಆನಂದವೇ ಆನಂದ. ಅಂದಿನಿಂದ ಆ ಬಡ ದಂಪತಿಗಳಿಗೆ ಶರಣರ ಮೇಲಿನ ಭಕ್ತಿ ಇಮ್ಮಡಿಗೊಂಡಿತು.

ಅಫಜಲಪೂರ ಊರಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಶರಣರು ಭಾಗಿಯಾಗುತ್ತಾರೆ. ಶರಣರ ಶಿಷ್ಯರಲ್ಲಿ ಒಬ್ಬನಾದ ವೀರಭದ್ರಯ್ಯ ಎಂಬಾತ ಅವರಲ್ಲಿಗೆ ಬಂದು ದೂರದಿಂದಲೇ ದರ್ಶನ ಮಾಡಿ ದೂರ ಕುಳಿತಿರುತ್ತಾನೆ. ಶರಣರು ಆತನನ್ನು ಕರೆದು ಖಿನ್ನ ಮನಸ್ಸಿಗೆ ಕಾರಣವೇನು ಎಂದು ಪ್ರಶ್ನಿಸುತ್ತಾರೆ. ಆತ ತನಗಂಟಿದ ಮಹಾರೋಗದ ಬಗ್ಗೆ ಶರಣರಲ್ಲಿ ನಿವೇದಿಸಿಕೊಂಡು ಅವರ ಪಾದ ಹಿಡಿಯುತ್ತಾನೆ. ಆಗ ಶರಣರು ತಾವು ಯಾವ ಸ್ಥಳದಲ್ಲಿ ಕುಳಿತಿದ್ದರೋ ಆ ಸ್ಥಳದಲ್ಲಿ ಕುಳಿತು ಬಸವಪುರಾಣವನ್ನು ಮೂರು ತಿಂಗಳವರೆಗೆ ಹೇಳಲು ತಿಳಿಸುತ್ತಾರೆ. ಒಪ್ಪಿದ ಆತ ಕೆಲವೇ ದಿನಗಳಲ್ಲಿ ಆ ಪುರಾಣವನ್ನು ಪ್ರಾರಂಭಿಸುತ್ತಾನೆ. ಮುಕ್ತಾಯದದಿನ ಇಡೀ ರೋಗದಿಂದ ಮುಕ್ತನಾಗುತ್ತಾನೆ.

ಹನುಮಂತ ಎನ್ನುವ ಶರಣರ ಭಕ್ತನಿಗೆ ತನ್ನವರೆನ್ನುವರು ಅವನಿಗೆ ಯಾರೂ ಇರಲಿಲ್ಲ. ಕೂಲಿ ಮಾಡಿ ಮುರುಕು ಮನೆಯಲ್ಲಿ ವಾಸಿಸುತ್ತಿದ್ದ. ಬಂದುದರಲ್ಲಿ ಇನ್ನೊಬ್ಬರಿಗೆ ಕೊಟ್ಟು ಸಂತೃಪ್ತಿ ಪಡುತ್ತಿದ್ದ. ಶರಣರು ಅವನಿಗೊಮ್ಮೆ ’ ನಿನ್ನ ಮನೆಗೆ ನಾಡಿದ್ದು ಹತ್ತು ಜನ ಜಂಗಮರು ಬರುತ್ತಾರೆ ಅವರಿಗೆ ಪ್ರಸಾದ ಮಾಡಿಸಪ್ಪಾ’ ಎಂದಾಗ ಆಯ್ತಪ್ಪಾ ಎನ್ನುತ್ತಾನೆ. ಆದರೆ ಏನು ಮಾಡಲಿ ಎಂಬ ಚಿಂತೆಯಲ್ಲಿದ್ದಾಗ ಆತನಿಗೆ ಪರಿಚಯವಿದ್ದ ಸಾಹುಕಾರನೊಬ್ಬ ’ ಹನುಮಂತಾ ಈ ಐವತ್ತು ಚೀಲಗಳನ್ನು ಇಳಿಸಿ ಕೆಳಗಿಡಪ್ಪಾ’ ಎಂದು ಹೇಳಿದಾಗ ಹನುಮಂತ ಭಕ್ತಿಯಿಂದ ಆ ಕೆಲಸ ಮಾಡಿದ. ಆ ಸಾಹುಕಾರ ಕೊಟ್ಟ ೫೦-೬೦ ರೂಪಾಯಿಂದ ಜಂಗಮರ ಪ್ರಸಾದ ಮಾಡಿದ. ಹಾಗೆ ಮಾಡಿದ್ದ ಆ ಯುವಕ ಕೆಲವೇ ದಿನಗಳಲ್ಲಿ ಶ್ರೀಮಂತನಾದನು ಎಂದು ಶರಣರ ಹಲವು ಲೀಲೆಗಳನ್ನು ಡಾ.ಶಾಸ್ತ್ರಿ ಹೇಳಿದರು.

ಡಾ. ಶಿವರಾಜ ಶಾಸ್ತ್ರಿ ಹೇರೂರ್, ಸಹ ಪ್ರಾಧ್ಯಾಪಕ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago