ಬಿಸಿ ಬಿಸಿ ಸುದ್ದಿ

ಭೀಮ ಆರ್ಮಿಯಿಂದ ಕಲಬುರಗಿಯಲ್ಲಿ ಪ್ರತಿಭಟನೆ

ಕಲಬುರಗಿ; ಮಹಾನಗರ ಪಾಲಿಕೆಯಲ್ಲಿ ದಿನಗೂಲಿ ಕಾರ್ಮಿಕರಾಗಿ ಸುಮಾರು 20 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಪಾಲಿಕೆಯ ಹೊರಗುತ್ತಿಗೆ ಆಧಾರವನ್ನು ನಿಲ್ಲಿಸಿ ಮಾನ್ಯ ನ್ಯಾಯಾಲಯದ ಮಹತ್ವಪೂರ್ಣ ಆದೇಶದೊಂದಿಗೆ ದಿನಗೂಲಿ ನೌಕರರಾಗಿರುತ್ತಾರೆ. ಅಲ್ಲದೇ ತಾವು 35 ತಿಂಗಳಿಂದ ದುಡಿದಿರುವ ಬಾಕಿ ಇರುವ ವೇತನ ನೀಡುವಂತೆ ಹೋರಾಟ ನಡೆಸಿದ್ದರು.

ವೇತನ ನೀಡದಿದ್ದಾಗ ಕಾರ್ಮಿಕ ನ್ಯಾಯಾಲಯಕ್ಕೆ ಮೋರೆ ಹೋದಾಗ 35 ತಿಂಗಳ ವೇತನ ನೀಡಲು ಮಹಾನಗರ ಪಾಲಿಕೆಗೆ ಆದೇಶಿಸಿತ್ತು. ಕಾರ್ಮಿಕ ನ್ಯಾಯಾಲಯದ ಆದೇಶದ ವಿರುದ್ಧ ಪಾಲಿಕೆಯು ಕಲಬುರಗಿ ಜಿಲ್ಲಾ ಮಾನ್ಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ಮಾನ್ಯ ಕಲಬುರಗಿ ನ್ಯಾಯಾಲಯವು ಸಮಾನ ಕೆಲಸಕ್ಕೆ ಸಮಾನ ವೇತನ ಕಾಯ್ದೆ ಅಡಿ 35 ತಿಂಗಳ ಬಾಕಿರುವ ವೇತನ ನೀಡುವಂತೆ ಮತ್ತು ದಿನಗೂಲಿ ನೌಕರರೆಂದು ‘ಪರಿಗಣಿಸಲು ಆದೇಶಿಸಿದೆ. ಇಂತಹ ಒಂದು ಮಹತ್ವದ ಆದೇಶದ ಕುರಿತು ರಾಜ್ಯ ರಾಷ್ಟ್ರಮಟ್ಟದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಅಂಕಣಕಾರರು ಸುದ್ದಿ ಮಾಡಿರುತ್ತಾರೆ.

ಅಲ್ಲದೇ ರಾಷ್ಟ್ರೀಯ “ಕಾನೂನು ಮಹಾವಿದ್ಯಾಲಯದಲ್ಲಿ ಸದರಿ ಆದೇಶದ ಬಗ್ಗೆ ಅಧ್ಯಾಯನಕ್ಕೆ” ವಿಷಯವಾಗಿ ಆಯ್ಕೆ ಮಾಡಿಕೊಂಡಿರುತ್ತದೆ. ಈ ಮಧ್ಯೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಪಾಲಿಕೆಯಲ್ಲಿ ದಿನಗೂಲಿ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ.

ದಿನಗೂಲಿ ನೌಕರರಿಗೆ ಸಿಗಬೇಕಾದ ಸೌಲಭ್ಯ ಹಾಗೂ 20 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವುದರಿಂದ ತಮ್ಮನ್ನು ಖಾಯಂಗಾಗಿ ಸಂಬಂಧಪಟ್ಟ ಕಾರ್ಮಿಕ ಇಲಾಖೆ ಮತ್ತು ಸರ್ಕಾರಕ್ಕೆ ಒತ್ತಾಯಿಸಿ ಮಾಜಿ ಕಾರ್ಮಿಕ ಸಚಿವರಾದ ಎಸ್.ಕೆ. ಕಾಂತಾ ರವರ ನೇತೃತ್ವದಲ್ಲಿ ಹಾಗೂ ಮಠಾಧಿಶರು ಕಲಬುರಗಿ ಪ್ರಗತಿಪರರು ಸೇರಿ ಹೋರಾಟ ನಡೆಸುತ್ತಿರುವ ಒತ್ತಡಕ್ಕೆ ಮಣಿದು ಗುಲಬರ್ಗಾ ಪಾಲಿಕೆ ಸೇರಿದಂತೆ ಇಡೀ ರಾಜ್ಯದಲ್ಲಿ ದುಡಿಯುತ್ತಿರುವ ದಿನಗೂಲಿ ನೌಕರರು, ಹೊರಗುತ್ತಿಗೆ ಪೌರ ಕಾರ್ಮಿಕರು, ಕ್ಷೇಮಾಭಿವೃದ್ಧಿ ಸಂಘದ ಅಡಿಯಲ್ಲಿ ದುಡಿಯುತ್ತಿರುವ ಒಟ್ಟಾಗಿ ಪೌರಕಾರ್ಮಿಕರಾಗಿ ದುಡಿಯುತ್ತಿರುವವನ್ನು ಖಾಯಂಗಾಗಿ ಸಚಿವ ಸಂಪುಟದಲ್ಲಿ ನಿರ್ಣಯಿಸುತ್ತದೆ.

2016-17ನೇ ಸಾಲಿಗಾಗಿ ಸರ್ಕಾರದ ಆದೇಶದಂತೆ ಮಹಾನಗರ ಪಾಲಿಕೆ ಹೊರತುಪಡಿಸಿ ರಾಜ್ಯದ್ಯಾಂತ ಪೌರ ಕಾರ್ಮಿಕರ ಖಾಯಂಮಾತಿ ಪ್ರಕ್ರಿಯೇ ಪೂರ್ಣಗೊಂಡಿರುತ್ತದೆ.  ಮಹಾನಗರ ಪಾಲಿಕೆಯಲ್ಲಿ ಖಾಯಂಮಾತಿ ಪ್ರಕ್ರಿಯೆಗೆ 3 ವರ್ಷಗಳ ತಡವಾಗಿ ಕಲಬುರಗಿ ಜಿಲ್ಲಾಧಿಕಾರಿಗಳು ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪೌರಕಾರ್ಮಿಕರ ನೇರನೇಮಕಾತಿ, ನೇರಪಾವತಿ, ಅಧೀಸೂಚನೆ ಹೊರಡಿಸಿ ಅರ್ಜಿ ಅವ್ಹಾನಿಸಿರುತ್ತದೆ. ಪಾಲಿಕೆಯ ಕೆಲವು ಭ್ರಷ್ಟ ಅಧಿಕಾರಿಗಳು ಸರ್ಕಾರದ ನಿಯಮಗಳು ಹಾಗೂ ಮಾನ್ಯ ನ್ಯಾಯಾಲಯದ ಆದೇಶ ಉಲ್ಲಂಘಿಸಿ ತಮ್ಮ ಸ್ವ-ಹಿತಾಸಕ್ತಿ ಕಾಪಾಡಲು ಪೌರಕಾರ್ಮಿಕ ಅಲ್ಲದವರನ್ನು ಆಯ್ಕೆಗೊಳಿಸಿ ತಾತ್ಕಾಲಿಕ ಖಾಯಂಮಾತಿ ಆಯ್ಕೆ ಪಟ್ಟಿ ಅಂತಿಮಗೊಳಿಸಿರುತ್ತಾರೆ.

ನೊಂದ ಮತ್ತು ಅರ್ಹರ ದಿನಗೂಲಿ ಪೌರಕಾರ್ಮಿಕರು ಕಾಲಮಿತಿಯೊಳಗೆ ಜಿಲ್ಲಾಧಿಕಾರಿಗಳಿಗೆ ತಾತ್ಕಾಲಿಕ ನೇಮಕಾತಿ ಆಯ್ಕೆ ಪಟ್ಟಿಯ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಿರುತ್ತಾರೆ. ಸದರಿ ಆಕ್ಷೇಪಣೆಗಳ ಕುರಿತು ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದರ ‘ವಿರುದ್ಧ ಅಂದಿನ” ಪಾಲಿಕೆಯ ಆಡಳಿತಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರಿಗೆ ಜಿಲ್ಲಾಧಿಕಾರಿ ಸೇರಿದಂತೆ ಮತ್ತು ಪಾಲಿಕೆಯ ಪರಿಸರ ಅಭಿಯಂತರರಾದ ಮುನಾಫ ಪಟೇಲ್ ಇತರ ಮೂರು ಜನ ವಿರುದ್ಧ ಕ್ರಮಕ್ಕಾಗಿ ದೂರು ಸಲ್ಲಿಸಿದ ಪ್ರಯುಕ್ತ ಮಾನ್ಯ ಪ್ರಾದೇಶಿಕ ಆಯುಕ್ತರು, ದೂರಿನನ್ವಯ ಗಂಭೀರವಾಗಿ ವಿಚಾರಣೆ ನಡೆಸಿ ಜಿಲ್ಲಾಧಿಕಾರಿಗಳು ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಪೌರಕಾರ್ಮಿಕರ ಖಾಯಂಮಾತಿ ಮತ್ತು ನೇರನೇಮಕಾತಿ, ನೇರಪಾವತಿ ಪ್ರಕ್ರೀಯೇಯಲ್ಲಿ ಗಂಭೀರ ಕರ್ತವ್ಯಲೋಪ ಮಾಡಿರುವುದನ್ನು ವಿಚಾರಣೆ ವೇಳೆಗೆ ಮನಗಂಡು ಕಾನೂನಿನಂತೆ ಅಧೀಸೂಚನೆ -ಹೊರಡಿಸಿ 3 ವರ್ಷದ ಒಳಗಾಗಿ ನೇಮಕಾತಿ ಪ್ರಕ್ರಿಯೇ ನಡೆಸಬೇಕು ಅಲ್ಲದೇ ಯಾವ ಹುದ್ದೆಗೆ ಆಯ್ಕೆಗಾಗಿ ಅಧೀಸೂಚನೆ ಹೊರಡಿಸಿರುತ್ತದೆ.

ಅದರ ತಕ್ಕಂತೆ ಅಭ್ಯರ್ಥಿಗಳನ್ನು ಆಯ್ಕೆಗೊಳಿಸದೇ ಪೌರಕಾರ್ಮಿಕ ಅಲ್ಲದವರನ್ನು ಮತ್ತು ಉದ್ದೇಶಪೂರ್ವಕವಾಗಿ 35 ತಿಂಗಳ ನಿರಂತರ ದಿನಗೂಲಿ ನೌಕರರೆಂದು ಮಾನ್ಯ ನ್ಯಾಯಾಲಯದ ಆದೇಶದೊಂದಿಗೆ ದುಡಿಯುತ್ತಿರುವ ಅರ್ಹ ದಿನಗೂಲಿ ಪೌರಕಾರ್ಮಿಕರನ್ನು ಆಯ್ಕೆ ಪಟ್ಟಿಯಿಂದ ಕೈಬಿಟ್ಟಿರುವುದು ಗಂಭೀರ ಕರ್ತವ್ಯಲೋಪ ಆಗಿರುತ್ತದೆ ಎಂದು ತಮ್ಮ ವರದಿಯಲ್ಲಿ ಸರ್ಕಾರಕ್ಕೆ ತಿಳಿಸಿರುತ್ತಾರೆ. ಅಲ್ಲದೇ ಸದರಿ ಆಯ್ಕೆ ಪಟ್ಟಿಯಲ್ಲಿ ಕ್ರಿಮಿನಲ್ ಮೊಕದಮೆ ಹೊಂದಿರುವ, ಮರಣ ಹೊಂದಿದವರ ವ್ಯಕ್ತಿಗಳ ಹೆಸರು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಬಂದಿರುವುದು ಗಂಭೀರವಾದ ಕರ್ತವ್ಯಲೋಪ ಮಾಡಿರುವ ಅಂದಿನ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆಯ ಸಕ್ಷಮ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಜೋತಿಷ್ಠಾ, ಪಾಲಿಕೆಯ ಪರಿಸರ ಅಭಿಯಂತರರಾದ ಮುನಾಫ ಪಟೇಲ್ ಇತರರ ಮೂರು ಅಧಿಕಾರಿಗಳ ವಿರುದ್ಧ ಕಾನೂನು ಕೈಗೊಳ್ಳಲು ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿರುತ್ತಾರೆ.

ಹೀಗಿದ್ದು, ತಪ್ಪಿಸ್ಥ ಅಧಿಕಾರಿಗಳ ವಿರುದ್ಧ ಸರ್ಕಾರ ಇಲ್ಲಿಯವರೆಗೆ ಕ್ರಮಕೈಗೊಳ್ಳದಿರುವದನ್ನು ಮನಗಂಡ ಪೌರಕಾರ್ಮಿಕರು ಮಾನ್ಯ ಉಚ್ಚನ್ಯಾಯಾಲಯ ಮೋರೆ ಹೋದಾಗ ಪೌರಕಾರ್ಮಿಕರ ನೇರ ನೇಮಕಾತಿ ಖಾಯಂಮಾತಿಯ ಆಯ್ಕೆಯ ತಾತ್ಕಾಲಿಕ ಆಯ್ಕೆ ಪಟ್ಟಿಯ ವಿರುದ್ಧ ತಡೆಯಾಜ್ಞೆ ನೀಡಿರುತ್ತದೆ:

ಆದ್ದರಿಂದ ಪೌರಕಾರ್ಮಿಕರ ನೇರನೇಮಕಾತಿ ಮತ್ತು ಖಾಯಂಮಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ದಪಡಿಸಿರುವುದನ್ನು ಕೂಡಲೇ ರದ್ದುಗೊಳಿಸಬೇಕು ಹಾಗೂ ದಿನಗೂಲಿ ಪೌರಕಾರ್ಮಿಕರನ್ನು ನೇರನೇಮಕಾತಿ, ಖಾಯಂಮಾತಿ, ನೇರಪಾವತಿ ಆಯ್ಕೆಗೊಳಿಸಬೇಕು ಮತ್ತು ಭ್ರಷ್ಟ ಅಧಿಕಾರಿಗಳು ಇನ್ನೂ ಪಾಲಿಕೆಯಲ್ಲಿ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಒಂದು ವಾರದೊಳಗಾಗಿ ಇಂತಹ ಭ್ರಷ್ಟ ಅಧಿಕಾರಿಗಳಿಗೆ ಅಮಾನತ್ತುಗೊಳಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಭೀಮ ಆರ್ಮಿ ಜಿಲ್ಲಾ ಘಟಕವು ಈ ಪತ್ರಿಕಾಗೋಷ್ಟಿಯ ಮೂಲಕ ಒತ್ತಾಯಿಸುತ್ತದೆ.

ಸೂರ್ಯಕಾಂತ ನಿಂಬಾಳ್ಕರ್, ಸುನೀಲ ಮಾರುತಿ ಮಾನಪಡೆ, ಸೂರ್ಯಕಾಂತ ಜೀಡಗಾ, ಶಿವಶರಣಪ್ಪ ದೊಡ್ಡಮನಿ, ಭಾರತಬಾಯಿ, ತಿಮ್ಮಯ್ಯ ಭೋವಿ, ಕಟ್ಟಲಪ್ಪ, ಶಿವಶಂಕರ ಭೋವಿ ಇತರರು ಇದ್ದರು

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

44 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago