ಬಿಸಿ ಬಿಸಿ ಸುದ್ದಿ

ತಾಂತ್ರಿಕ ಬದಲಾವಣೆ ಅನಿವಾರ್ಯ ಅದನ್ನು ಎದುರಿಸುವ ಗುರಿಯನ್ನು ಹೋದುವುದು ಅತ್ಯಗತ್ಯ: ಅಜೇಯ ಸಾಂಬ್ರಾಣಿ

ಕಲಬುರಗಿ: ತಾಂತ್ರಿಕ ಜ್ಞಾನದ ಬಳಕೆ ಅದನ್ನು ನೈಜ ಜೀವನಕ್ಕೆ ಅಳವಡಿಸುವ ಅನಿವಾರ್ಯತೆ ಹಾಗೂ ತಾಂತ್ರಿಕ ಬದಲಾವಣೆಯನ್ನು ಎದುರಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಯಿಸಿಕೊಳ್ಳಬೇಕು ಹಾಗೂ ಕಾರ್ಯತಂತ್ರಗಳ  ಬದಲಾವಣೆ ಅತಿವೇಗದಲ್ಲಿ ನಡೆದಿದ್ದು ಮುಂಬರುವದಿನಗಳಲ್ಲಿ ಕೇವಲ ವಾಯ್ಸ್ ಟೆಕ್ನಾಲಜಿ ಚಾಲ್ತಿಗೆ ಬರುತ್ತವೆ. ಹಾಗೂ ಪ್ರತಿಯೊಂದು ಪ್ರಕ್ರೀಯೇಗಳು ಆನ್ ಲಾಯಿನ್, ಐಓಟಿ, ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸಿಯ ತಂತ್ರಗಾರಿಕೆಯಿಂದ ರೂಪಗೊಳ್ಳುತ್ತವೆ ಎಂದು ಎಶಿಯಾ, ಮಧ್ಯ-ಪೂರ್ವ ಮತ್ತು ಉತ್ತರ ಆಫ್ರಿಕೆಯ ಟುಬಾಕೆಕ್ಸ್ ಗ್ರುಪ್ ನ ಮುಖ್ಯಸ್ಥ ಹಾಗೂ ಪಿ.ಡಿ.ಎ. ಮಹಾವಿದ್ಯಾಲಯದ ಹಳೆಯ ವಿಧ್ಯಾರ್ಥಿಯಾದ ಅಜೇಯ ಸಾಂಬ್ರಾಣಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಇಂದು ಇಲ್ಲಿನ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ತಮ್ಮ ವಿದ್ಯಾರ್ಥಿ ಜೀವನದ ಮೇಲುಕು ಹಾಕುತ್ತಾ ತಮ್ಮ ತಂದೆಯವರಾದ ಡಾ. ವಾಮನರಾವ ಸಾಂಬ್ರಾಣಿಯವರು ಈ ಮಹಾವಿದ್ಯಾಲಯಕ್ಕೆ ಸೇವೆಯನ್ನು ಸಲ್ಲಿಸಿದ್ದನ್ನು ಸ್ಮರಿಸಿದರು. ದೊಡ್ಡ ಕನಸುಗಳನ್ನು ಕಾಣಿರಿ ಹಾಗೂ ಅವುಗನ್ನು ನಿಜವನ್ನಾಗಿ ಮಾಡಲು ಸತತವಾಗಿ ದುಡಿಯಿರಿ, ಪ್ರತಿಯೊಂದು ಕಾರ್ಯವನ್ನು ಹಾಗೂ ಸಮಸ್ಯೆಗಳನ್ನು ಸವಾಲನ್ನಾಗಿ ಸ್ವೀಕರಿಸಿ ಅದನ್ನು ಎದುರಿಸದರೆ ಮಾತ್ರ ನಾವು ಯಶಸ್ವಿಯ ಮೆಟ್ಟಿಲು ಹತ್ತಲು ಸಾಧ್ಯ ಎಂದು ಗೌರವ ಅತಿಥಿಗಳಾಗಿ ಅಗಮಿಸಿದ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಹಾಗೂ ಹಿನಿವೆಲ್ ಟೆಕ್ನಾಲಜಿ ಸಲೂಶನ್ಸ್‌ನ ವಿಷಯ ಪ್ರಾವಿಣ್ಯತೆ ತನುಜಾ ವಿಜಯಕುಮಾರ ಅವರು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಹಿಳೆ ಸಬಲೀಕರಣಕ್ಕೆ ಒತ್ತು ಕೊಟ್ಟ ಅವರು ಮಹಿಳಾ ಉದ್ಯೋಗಿಗಳು ಮದುವೆಯ ನಂತರ ತಮ್ಮ ಜೀವನ ಕೇವಲ ಕುಟುಂಬಕ್ಕೆ ಮೀಸಲಿರಿಸದೆ ಸಂಶೋಧನಾ ಚಟುವಟಿಕೆ ಹಾಗೂ ತಾಂತ್ರಿಕ ಕಾರ್ಯಕಲ್ಪಗಳಲ್ಲಿ ತೊಡಗಬೇಕೆಂದು ಮಹಿಳಾ ವಿದ್ಯಾರ್ಥಿಗಳನ್ನುದ್ಧೆಶಿಸಿ ಮಾತನಾಡಿದರು. ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥಯ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ. ಬಿಲಗುಂದಿಯವರು ಮಾತನಾಡಿ ಈಗಾಗಲೇ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ, ವಿದ್ಯಾರ್ಥಿಗಳಿಗಾಗಿ ಸೈಬರ್ ಸೆಕ್ಯೂರಿಟಿ ಕೋರ್ಸ, ಉತ್ತಮ ಲ್ಯಾಬೋರೆಟರಿಗಳು, ಕೈಗಾರಿಕೊದ್ಯಮದ ಜೋತೆ ವಿದ್ಯಾರ್ಥಿ ಪ್ರಾಜೆಕ್ಟಗಳು ಮಾಡಲಾಗುತ್ತಿದೆ ಹಾಗೂ ಮಹವಿದ್ಯಾಲಯದ ಮೂರು ವಿಭಾಗಗಳು ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದಿದ್ದು ಮುಂಬರುವ ದಿನಗಳಲ್ಲಿ ಉಳಿದ ವಿಭಾಗಗಳಿಗೂ ಕೂಡ ಮಾನ್ಯತೆದೊರಕಲಿದೆ ಎಂದು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.

ಕಲಬುರಗಿ ನಗರದ ಹಲವು ಗಣ್ಯ ವ್ಯಕ್ತಿಗಳು, ಸಂಘ ಸಂಸ್ಥೆಗಳು ಮತ್ತು ಮಹಾವಿದ್ಯಾಲಯದಿಂದ ಪ್ರಾಯೋಜಿತವಾದ ೩೩ ಸ್ವರ್ಣಪದಕಗಳನ್ನು, ಮಹಾವಿದ್ಯಾಲಯದ ವಿವಿಧ ವಿಭಾಗಗಳ ೨೩ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಯಿತು. ಉಳಿದವರಿಗೆ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. ಗಣಕ ತಂತ್ರಜ್ಞಾನ ವಿಭಾಗದ ಕುಮಾರಿ. ಸುಮಯಾ ಸಿದ್ದಿಕಾ ಇವರು ೦೬ ಸ್ವರ್ಣಪದಕಗಳನ್ನು ಬಾಚಿಕೊಳ್ಳುವುದರ ಮೂಲಕ ಸುವರ್ಣ ಬಾಲಕಿ ಎನಿಸಿದಳು. ಕುಮಾರಿ ಪೂಜಾ ಕೇಶವ ಬಿರಾದಾರ ಇಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ ವಿಭಾಗದ ವಿದ್ಯಾರ್ಥಿನಿ ಮೂರು ಸ್ವರ್ಣಪದಕಗಳನ್ನು ತನ್ನದಾಗಿಸಿಕೊಂಡರು.

ಆರ್ಕಿಟೆಕ್ಚರ್ ವಿಭಾಗ ಶರಣಗೌಡ, ೦೩ ಸ್ವರ್ಣಪದಕಗಳನ್ನು, ಸಿವಿಲ ವಿಭಾಗದ ಕುಮಾರಿ ಪೂರ್ಣಿಮಾ ೦೨ ಸ್ವರ್ಣಪದಕಗಳನ್ನು ಪಡೆದರು. ಉಳಿದವರು ತಲಾ ಒಂದರಂತೆ ಸ್ವರ್ಣಪದಕ ಪಡೆದರು. ಸಮಾರಂಭದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ.ಶಿವಾನಂದ ಎಸ್. ದೇವರಮನಿ,  ಆಡಳಿತ ಮಂಡಳಿ ಸದಸ್ಯರುಗಳಾದ ಸಂಪತಕುಮಾರ ಲೋಯಾ, ಅರುಣಕುಮಾರ ಪಾಟೀಲ, ಉದಯ ಚಿಂಚೋಳಿ, ಅನಿಲಕುಮಾರ ಮರಗೋಳ, ಅನುರಾಧ ಪಾಟೀಲ, ಹಾಗೂ ಸತೀಶ್ಚಂದ್ರ ಹಡಗಲಿಮಠ ಇವರು ಉಪಸ್ಥತರಿದ್ದರು, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್.ಎಸ್. ಹೆಬ್ಬಾಳ, ಡೀನ ಅಕಾಡೆಮಿಕ್ಸ ಡಾ.ಎಸ್.ಆರ್.ಪಾಟೀಲ,  ಪರೀಕ್ಷಾವಿಭಾಗದ ನಿಯಂತ್ರಣಾಧಿಕಾರಿಗಳಾದ ಪ್ರೊ. ರವೀಂದ್ರ ಎಮ್. ಲಠ್ಠೆ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಹ-ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಮಾರಂಭದಲ್ಲಿ ಉಪಸ್ಥತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago