ಬಿಸಿ ಬಿಸಿ ಸುದ್ದಿ

ಅಹಿಂದ ವೇದಿಕೆ 2015ರ ಕಾಂತರಾಜ ವರದಿ ಕುರಿತು ವಿಚಾರ ಸಂಕಿರಣ

ಸುರಪುರ: ಕರ್ನಾಟಕದಲ್ಲಿ ಕಾಂತರಾಜ ಅವರ ಆಯೋಗದ ಮೂಲಕ 2013 ರಲ್ಲಿ ಮಾಡಲಾದ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಯಾವುದೇ ಲೋಪವಾಗಿಲ್ಲ,ಸಮೀಕ್ಷೆಗೆ ಬಂದಾಗ ಸರಿಯಾಗಿ ಮಾಹಿತಿ ನೀಡದವರು ಈಗ ಅದನ್ನು ವಿರೋಧಿಸುತ್ತಿದ್ದಾರೆ ಎಂದು ಕಾಂತರಾಜ್ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಲ್ಲಿದ್ದ ಸದಸ್ಯ ಕೆ.ಎನ್.ಲಿಂಗಪ್ಪ ಹೆಸರು ಹೇಳದೆ ವೀರಶೈವ ಲಿಂಗಾಯತ ಸೇರಿದಂತೆ ಮೇಲ್ವರ್ಗಗಳ ವಿರುದ್ಧ ಆರೋಪಿಸಿದರು.

ಅಹಿಂದ ವೇದಿಕೆಯಿಂದ ನಗರದ ಡಾ:ಬಾಬು ಜಗಜೀವನರಾಮ್ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಕಾಂತರಾಜ್ ವರದಿಯ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ-2015ರ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿ, ಕಾಂತರಾಜ್ ಆಯೋಗದ ಸಮೀಕ್ಷೆಯಲ್ಲಿ 1,33,410 ಜನರಿಗೆ 2 ಬಾರಿ ತರಬೇತಿಯನ್ನು ನೀಡುವ ಮೂಲಕ ಸರಿಯಾದ ಸಮೀಕ್ಷೆಯನ್ನು ಮಾಡಿಸಲಾಗಿದೆ,ಇದಕ್ಕಾಗಿ 22,289 ಜನರನ್ನು ಮೇಲ್ವಿಚಾರಕರನ್ನು ನೇಮಿಸಲಾಗಿತ್ತು,ಅಲ್ಲದೆ ಈ ಸಮೀಕ್ಷೆಗೆ ಆಯೋಗದಲ್ಲಿದ್ದ ನಾವಾಗಲಿ,ಎಲ್ಲೋ ಬೇರೆ ಬೇರೆ ಜಿಲ್ಲೆಯವರನ್ನು ನೇಮಿಸಿಲ್ಲ,ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು,ಉಪ ವಿಭಾಗಾಧಿಕಾರಿಗಳು,ಜಿ.ಪಂ ಸಿಇಓ,ತಹಸೀಲ್ದಾರ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ಹಾಗೂ ಶಿಕ್ಷಕರನ್ನು ಬಳಕೆ ಮಾಡಿಕೊಂಡು ಸಮೀಕ್ಷೆ ಮಾಡಿಸಲಾಗಿದೆ ಎಂದರು.

ಈಗ ವಿರೋಧಿಸುತ್ತಿರುವವರು ಹಿಂದಿನಿಂದ ಬಂದಿರುವ ಜಾತಿ ಪದ್ಧತಿ ಹಾಗೇ ಇರಬೇಕು ಎನ್ನುವ ಮನಸ್ಥಿತಿಯಿಂದ ಹೇಳುತ್ತಿದ್ದಾರೆ,ವರದಿಯ ಮೂಲಕ ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯಗಳು ಮೇಲೆ ಬಂದರೆ ಮುಂದೆ ನಮಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಇದನ್ನು ವಿರೋಧಿಸುತ್ತಿದ್ದಾರೆ ಎಂದರು.

ಅಲ್ಲದೆ ಹಿಂದೆ ನಾವು ಮಾಡಿರುವ ಸಮೀಕ್ಷಾ ವರಿದಯನ್ನು ಸ್ವೀಕರಿಸಲು ಹಿಂದಿನ ಸರಕಾರದ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ. ಕುಮಾಸ್ವಾಮಿಯವರು,ಶಿಕಾರಿಪುರದ ಯಡಿಯೂರಪ್ಪನವರು ವರದಿ ತೆಗೆದುಕೊಳ್ಳಿ ಎಂದು ಹೋದಾಗೆಲ್ಲ ಏನಾದಲು ಸಬೂಬು ಹೇಳಿ ಹಿಂದಕ್ಕೆ ಕಳುಹಿಸಿದ್ದಾರೆ. ನಂತರ ನಮ್ಮ ಆಯೋಗವನ್ನೆ ರದ್ದುಗೊಳಿಸಿದರು,ನಾವು ನಮ್ಮ ಸಮೀಕ್ಷಾ ವರದಿಯ 45 ಸಂಪುಟಗಳನ್ನು ಒಂದು ರೂಮಿನಲ್ಲಿಟ್ಟು ಅದೆಲ್ಲವನ್ನು ಸರಿಯಾಗಿ ಪ್ಯಾಕ್ ಮಾಡಿ,ಸಂಪುಟಗಳನ್ನಿಟ್ಟ ರೂಮಿಗೆ ಬೀಗ ಹಾಕಿ ಸೀಲ್ ಮಾಡಿ ಅದನ್ನು ಒಬ್ಬ ಆಯ್.ಎ.ಎಸ್ ಅಧಿಕಾರಿ ನೇಮಕಗೊಂಡವರಿಗೆ ನೀಡಲಾಗಿದೆ,ಆದರೆ ನಂತರದಲ್ಲಿ ರೂಮಿನ ಬೀಗ ತೆಗೆದು,ವರದಿಯನ್ನು ನೋಡಿರುವ ಸಾಧ್ಯತೆಯ ಕುರಿತು ಅನುಮಾನ ವ್ಯಕ್ತಪಡಿಸಿದರು.ಇದರಿಂದ ವಿರೋಧಿಸುತ್ತಿರುವ ಸಾಧ್ಯತೆಯೂ ಇದೆ ಎಂದರು.

ಅಲ್ಲದೆ ಈಗ ನೇಮಕಗೊಂಡಿರುವ ಆಯೋಗ ನಮ್ಮ ವರದಿಯನ್ನು ಸರಕಾರ ಸ್ವೀಕರಿಸುವ ಕುರಿತು ಯಾವುದೇ ರೀತಿಯ ಪ್ರಯತ್ನ ಮಾಡುತ್ತಿಲ್ಲ,ರಾಜ್ಯದಲ್ಲಿರುವ ಒಟ್ಟು 1351 ಜಾತಿಗಳ ಸಮಗ್ರವಾದ ಸಾಮಾಜಿಕ,ಶೈಕ್ಷಣಿಕ,ಆರ್ಥಿಕ,ರಾಜಕೀಯ ಸೇರಿದಂತೆ ಎಲ್ಲಾ ವಿಧದ ಸಮೀಕ್ಷೆಯನ್ನು ಮಾಡಲಾಗಿದೆ,ಇದರಿಂದ ರಾಜ್ಯದಲ್ಲಿನ ಹಿಂದುಳಿದ ಸಮುದಾಯಗಳ ಸರ್ವಾಂಗಿಣ ಏಳಿಗೆಗೆ ಅನುಕೂಲವಾಗಲಿದೆ,ಆದರೆ ಅದಕ್ಕೆ ನಮ್ಮ ಹಿಂದುಳಿದ ಜನರೆ ಧ್ವನಿ ಎತ್ತುತ್ತಿಲ್ಲ ಎನಿಸುತ್ತದೆ,ಧ್ವನಿ ಎತ್ತಿದರೆ ಸರಕಾರ ವರದಿಯನ್ನು ಸ್ವೀಕರಿಸಿ ಬಹಿರಂಗಗೊಳಿಸಬಹುದು ಎಂದರು.

ಅಲ್ಲದೆ ಇನ್ನೂ ಅನೇಕರು ವರದಿಯಲ್ಲಿ ಈ ಜಾತಿ ಇಷ್ಟಿದೆ,ಅಷ್ಟಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ,ಸಾಮಾಜಿಕ ಜಾಲತಾಣಗಳಲ್ಲೂ ಬರುವ ಸುದ್ದಿಗಳು ಸುಳ್ಳಿವೆ,ಯಾಕೆಂದರೆ ನಾವು ವರದಿಯ ಸಂಪುಟಗಳನ್ನು ಇಟ್ಟಿರುವ ಕೊಠಡಿಯನ್ನು ಕಾಯುವವರಿಗೆ ಹೋಗಿ ವರದಿ ಬಗ್ಗೆ ಕೇಳಿದಾಗ ಅವರು ಏನು ಹೇಳುತ್ತಾರೆ ಅದನ್ನೆ ನಂಬಿ ಸುಳ್ಳು ಸುದ್ದಿ ಹರಡುತ್ತಿದ್ದು,ಇದನ್ನು ಯಾರೂ ನಂಬಬೇಡಿ,ವರದಿಯ ಕುರಿತು ಯಾವುದೇ ಮಾಹಿತಿ ಸೋರಿಕೆ ಆಗಿಲ್ಲ ಎಂದರು.

ಅಲ್ಲದೆ ಈಗ ವರದಿ ವಿರೋಧಿಸುವವರಲ್ಲಿ ಸರಿಯಾದ ಸ್ಪಷ್ಟನೆ ಇಲ್ಲ,ಯಾವ ಲೋಪ ಅದರಲ್ಲಿ ನೀವು ಗುರುತಿಸಿದ್ದೀರಿ ಎಂದರೆ ಯಾರೂ ಉತ್ತರ ನೀಡುತ್ತಿಲ್ಲ,ಆದರೆ ವಿರೋಧಿಸುತ್ತಿದ್ದಾರೆ,ಅಸಲಿಗೆ ನಾವು ಮಾಡಿರುವುದು ಜಾತಿ ಗಣತಿ ಅಲ್ಲ ಅದು ಕೇವಲ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ,ಇದನ್ನು ಅರಿಯದೆ ಸುಮ್ಮನೆ ವಿರೋಧಿಸುತ್ತಿದ್ದಾರೆ ಎಂದರು.ಇದರ ಕುರಿತು ರಾಜ್ಯದಲ್ಲಿರುವ ಓ.ಬಿ.ಸಿ ಜನರೇ ತೀರ್ಮಾನ ಮಾಡಬೇಕಿದೆ ಎಂದರು.

ವಿಚಾರ ಸಂಕಿರಣದ ವೇದಿಕೆಯಲ್ಲಿ ಅಹಿಂದ ವೇದಿಕೆ ಮುಖಂಡರಾದ ಮಲ್ಲಯ್ಯ ಕಮತಗಿ,ವೆಂಕಟೇಶ ಹೊಸ್ಮನಿ,ಅಹ್ಮದ್ ಪಠಾಣ್,ದೇವಿಂದ್ರಪ್ಪ ಪತ್ತಾರ,ನಂದಕುಮಾರ ಬಾಂಬೆಕರ್ ಕನ್ನಳ್ಳಿ ಹಾಗೂ ಡಾ:ಬಿ.ಆರ್.ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ಅಜಯ್ ಬಿಲ್ಲವ್ ಇದ್ದರು.ಮಹಾಂತೇಶ ದೇವರಗೋನಾಲ ಪ್ರಾಸ್ತಾವಿಕವಾಗಿ ಮಾತನಾಡಿ,ನಂದಕುಮಾರ ಬಾಂಬೆಕರ್ ಸ್ವಾಗತಿಸಿದರು,ರಾಹುಲ್ ಹುಲಿಮನಿ ನಿರೂಪಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ಅಹಿಂದ ವೇದಿಕೆಯ ಅನೇಕ ಜನ ಮುಖಂಡರು ಹಾಗೂ ಕಾರ್ಯಕರ್ತರು ವಿವಿಧ ಸಮುದಾಯಗಳ ಜನರು ಭಾಗವಹಿಸಿದ್ದರು.

ಒಂದೆಡೆ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಸೋರಿಕೆಯಾಗಿದೆ ಎಂದು ಬರುತ್ತಿರುವ ಸುದ್ದಿಗಳು ಸುಳ್ಳು ಎನ್ನುವ ಕೆ.ಎನ್.ಲಿಂಗಪ್ಪ ಅವರು,ನಮ್ಮ ನಂತರ ಬಂದಿರುವ ಆಯೋಗದವರು ನಾವು ಇಟ್ಟಿರುವ ಕೊಠಡಿಯನ್ನು ತೆಗೆದು,ವರದಿ ನೋಡಿರಬಹುದು ಎಂದು ಅನುಮಾನಿಸುವ ಮೂಲಕ ಗೊಂದಲದ ವಿವರಣೆಯನ್ನು ನೀಡಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago