ಬಿಸಿ ಬಿಸಿ ಸುದ್ದಿ

ಗಡಿಭಾಗದಲ್ಲಿ ಕನ್ನಡ ಉತ್ಸವಗಳು ಸದಾ ನಡೆಯುತ್ತಿರಬೇಕು: ಸಮ್ಮೇಳನಾಧ್ಯಕ್ಷ ಶ್ರೀಶೈಲ ಅವಟಿ

ಮಹಾನ್ ಶರಣೆ ಗುಡ್ಡಾಪುರ ಧಾನಮ್ಮಾಳ ತವರು ಉಮರಾಣಿಯಲ್ಲಿ ವಿಜೃಂಬಣೆಯಿಂದ ಜರುಗಿದ ಗಡಿನಾಡ ಸಾಹಿತ್ಯ ಸಮ್ಮೇಳನ

ಜತ್ತ: ಜತ್ತ ಸಂಸ್ಥಾನ ಹಾಗೂ ಉಮರಾಣಿ ಸಂಸ್ಥಾನ ಇವು ಹಿಂದಿನ ಕಾಲದಿಂದಲೂ ಕನ್ನಡವನ್ನು ಆರಾಧಿಸುತ್ತ ಬಂದ ಪ್ರದೇಶಗಳು. ಭಾಷಾವಾರು ಪ್ರಾಂತ ರಚನೆಯಲ್ಲಿ ಮಹಾರಾಷ್ಟ್ರಕ್ಕೆ ಸೇರಿ ಸದ್ಯ ಜತ್ತ ತಾಲ್ಲೂಕು ಆಗಿದೆ. ಇಂದಿಗೂ ಇಲ್ಲಿನ ಬಹುಸಂಖ್ಯೆ ಜನರ ಹೃದಯ ಭಾಷೆ ಕನ್ನಡವೇ ಆಗಿದೆ. ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಬೆಳವಣಿಗೆಗೆ ಈ ಭಾಗದಲ್ಲಿ ಕನ್ನಡ ಉತ್ಸವಗಳು ಸದಾ ನಡೆಯುತ್ತಿರಬೇಕು ಎಂದು ಶ್ರೀಶೈಲ ಅವಟಿಯವರು ಹೇಳಿದರು.

ಅವರು ಮಹಾರಾಷ್ಟ್ರದ ಗಡಿಭಾಗವಾದ ಜತ್ತ ತಾಲ್ಲೂಕಿನ ಅಂದರೆ ೧೨ ನೇ ಶತಮಾನದ ಮಹಾನ್ ಶರಣೆ ಗುಡ್ಡಾಪುರ ಧಾನಮ್ಮಾಳ ತವರು ಉಮರಾಣಿಯಲ್ಲಿ ಪರಮಪೂಜ್ಯ ಮಾತಾಜಿ ಅಕ್ಕಮಹಾದೇವಿ ಜ್ಞಾನಯೋಗಾಶ್ರಮದಲ್ಲಿ ಹಮ್ಮಿಕೊಂಡ ಗಡಿನಾಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿದರು.

ಅವರು ಮುಂದೆ ಮಾತನಾಡಿ ‘ಗಡಿಭಾಗದ ಕನ್ನಡಿಗರ ಮುಂದೆ ಬಹಳಷ್ಟು ಸವಾಲುಗಳಿವೆ, ಅದಕ್ಕೆ ನಾವೆಲ್ಲಾ ಒಟ್ಟಾಗಿ ಸೇರಿ ಚಿಂತನೆ ಮಾಡುವುದು ಅವಶ್ಯಕವಾಗಿದೆ. ಕೇವಲ ಸರಕಾರದ ಸಹಾಯದಿಂದ ಕನ್ನಡ ಉತ್ಸವಗಳನ್ನು ಮಾಡುವದಕ್ಕಿಂತ ನಾವು ಕನ್ನಡಿಗರು ಸೇರಿ ಕನ್ನಡ ಸಮ್ಮೇಳನ, ಕನ್ನಡಪರ ಚಟುವಟಿಕೆಗಳು ನಿರಂತರವಾಗಿ ಮಾಡಬೇಕಿದೆ. ಸ್ವಂತ ವೆಚ್ಚದಲ್ಲಿ ಅಕ್ಕಮಹಾದೇವಿ ಜ್ಞಾನಯೋಗಾಶ್ರಮ ಉಮರಾಣಿ ಹಮ್ಮಿಕೊಂಡ ಈ ಸಮ್ಮೇಳನ ನಿಜಕ್ಕೂ ಶ್ಲಾಘನೀಯ..’ ಎಂದರು.

ಪೂಜ್ಯೆ ಮಾತೆ ಅಕ್ಕಮಹಾದೇವಿಯವರು ಮಾತನಾಡಿ, ‘ಬಹುದಿನಗಳಿಂದ ನನ್ನದೊಂದು ಆಸೆ ಇತ್ತು. ಈ ಭಾಗದಲ್ಲಿ ಒಂದು ಕನ್ನಡ ಸಾಹಿತ್ಯ ಸಮ್ಮೇಳನ ಜರುಗಬೇಕು. ನಾವು ಆಶ್ರಮದಲ್ಲಿ ಪ್ರತಿವರ್ಷ ಐದು ದಿನಗಳವರಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಆದರೆ ಇಂದಿನ ಕನ್ನಡ ಸಾಹಿತ್ಯ ಸಮ್ಮೇಳನ ವಿಶೇಷವಾದದ್ದು. ಕರ್ನಾಟಕ ಸರಕಾರ ಇಲ್ಲಿನ ಮಠ ಹಾಗೂ ಆಶ್ರಮಗಳಿಗೂ ಸಹ ಸಹಕಾರ ನೀಡಬೇಕು. ನಮ್ಮ ಆಶ್ರಮ ಸದಾ ಕನ್ನಡಿಗರ ಏಳಿಗೆಗಾಗಿ ಶ್ರಮಿಸುತ್ತದೆ. ಮುಂದಿನ ದಿನಗಳಲ್ಲಿ ನಾವು ಇಲ್ಲಿ ಶರಣರ ಉತ್ಸವ ಹಮ್ಮಿಕೊಳ್ಳುವ ನಿಯೋಜನೆ ಮಾಡಿದ್ದೇವೆ..’ ಎಂದರು.

ಈ ಮುಂಚೆ ಬೆಳಿಗ್ಗೆ ಕನ್ನಡ ಧ್ವಜಾರೋಹಣ ಮಾಡುವದರ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ವಿವಿಧ ಮೆರವಣಿಗೆ ತಂಡಗಳ ವಾದ್ಯವೈಭವದೊಂದಿಗೆ ಭುವನೇಶ್ವರಿ ದೇವಿ ಹಾಗೂ ಸರ್ವಾಧ್ಯಕ್ಷರ ಮೆರವಣಿಗೆ ಸಾಗಿತು. ಬೀದಿ ಬೀದಿಗಳಲ್ಲಿ ಕನ್ನಡದ ಘೋಷಣೆಗಳು ಮತ್ತು ಮೆರವಣಿಗೆ ತಂಡಗಳು ಜನರ ಮನಸ್ಸು ಸೆಳೆದವು.

ನಂತರ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನೆರವೆರಿತು. ಭುವನೇಶ್ವರಿ ದೇವಿ, ದಿ. ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಹಾಗೂ ದಿ. ಇಬ್ರಾಹಿಮ್ ಸುತಾರರ ಪ್ರತಿಮೆಗಳಿಗೆ ಪುಷ್ಪ ನಮನಗಳನ್ನು ಸಲ್ಲಿಸಿ ವೇದಿಕೆಯ ಗಣ್ಯರು ದೀಪ ಪ್ರಜ್ವಲಿಸುವದರ ಮುಖಾಂತರ ಸಮ್ಮೇಳನ ಉದ್ಘಾಟಿಸಿದರು.

ಲೇಖಕ ಚೆನ್ನಪ್ಪ ಸುತಾರರ “ತಿರುಕ ನಾಗ” ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅದರಂತೆ ಗಡಿನಾಡಿನಲ್ಲಿ ಕನ್ನಡಕ್ಕಾಗಿ ವಿಶೇಷ ಸೇವೆ ಸಲ್ಲಿಸಿದ ೧೮ ಜನ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಗಡಿನಾಡಿನ ಸಾಹಿತ್ಯ, ಕನ್ನಡ ಸಾಹಿತ್ಯ ಮತ್ತು ಮೌಲ್ಯಗಳು, ಶರಣ ಸಾಹಿತ್ಯ ಚಿಂತನೆ ಈ ವಿಷಯಗಳ ಕುರಿತು ಉಪನ್ಯಾಸ ಗೋಷ್ಠಿ ಜರುಗಿತು. ಸಂಜೆ ಹೊತ್ತು ಕವಿ ಗೋಷ್ಠಿಯಲ್ಲಿ ಕವಿಗಳ ಕವಿತೆಗಳು ಸಭಿಕರ ಮನ ಗೆದ್ದವು.

ಸಮಾರೋಪ ಸಮಾರಂಭದೊಂದಿಗೆ ಸಮ್ಮೇಳನ ಮುಕ್ತಾಯಗೊಂಡಿತು. ಉಮರಾಣಿ ಹಾಗೂ ಸಮೀಪದ ಕನ್ನಡ ಶಾಲೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿದವು.

ಪ.ಪೂ. ಮಾ. ಅಕ್ಕಮಹಾದೇವಿತಾಯಿ ಕದಳಿವನ ಮಠ, ಗದಗ ಹಾಗೂ ಪ.ಪೂ.ಮಾ ಅಭಿನವ ಅಕ್ಕಮಹಾದೇವಿತಾಯಿ, ಚಿಕ್ಕಪಡಸಲಗಿಯವರು ಸಾನಿದ್ಯ ವಹಿಸಿದ್ದರು.ಅಧ್ಯಕ್ಷ ಸ್ಥಾನ ಪೂಜ್ಯೆ ಮಾತೆ ಅಕ್ಕಮಹಾದೇವಿ ಉಮರಾಣಿಯವರು ವಹಿಸಿದ್ದರು. ಸರ್ವಾಧ್ಯಕ್ಷ ಶ್ರೀಶೈಲ ಅವಟಿಯವರು ಇದ್ದರು.

ಪ್ರಮುಖ ಅತಿಥಿಗಳಾಗಿ ಖ್ಯಾತ ಪ್ರವಚನಕಾರರಾದ ಬಾಬುರಾವ ಮಹಾರಾಜ, ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ ಶೇಖ, ಕೇಂದ್ರ ಪ್ರಮುಖರು ಧರೆಪ್ಪಾ ಕಟ್ಟಿಮನಿ ಹಾಗೂ ಗುರುನಾಥ ಜುಂಜಾ, ಬಾಬುರಾವ ದೇವನಾಯಕ, ಮಲ್ಲಿಕಾರ್ಜುನ ಬಾಲಗಾಂವ, ಈರಣ್ಣಾ ಪಾಟೀಲ, ಎಮ್ ಜಿ ಕಾರಾಜನಗಿ, ಆರ್ ಜಿ ಬಿರಾದಾರ, ದಯಾನಂದ ಪಾಟೀಲ, ದಿಲೀಪ್ ಕಾಂಬಳೆ, ಶಿವಶಂಕರ ಮಾಳಿ, ಗಾಂಧಿ ಚೌಗುಲೆ ಹೀಗೆ ಇನ್ನಿತರರು ಇದ್ದರು.

ಸಮ್ಮೇಳನ ಯಶಸ್ವಿಗಾಗಿ ಅಶೋಕ ಸಾವಳಗಿ, ಶಿವಾನಂದ ಮಳಲಿ, ಚೆನ್ನಪ್ಪ ಸುತಾರ, ಮುಖ್ಯಾದ್ಯಾಪಕ ಕೊಟ್ಟಲಗಿ ಸರ, ಜಯಾನಂದ ತುಂಗಳ, ಮಹಾದೇವ ತಂಗೋಳಿ, ಜಾವೀರ ಸರ್, ಕಾಂಬಳೆ ಸರ್, ಜ್ಞಾನಯೋಗಾಶ್ರಮ ಸಮಿತಿ, ಧಾನೇಶ್ವರಿ ಯುವಕ ಮಂಡಳ, ಶಿವಲಿಂಗೇಶ್ವರ ತರುಣ ಮಂಡಳ ಇನ್ನಿತರರು ಶ್ರಮಿಸಿದರು.

ಚನ್ನಪ್ಪಾ ಸುತಾರ ಪ್ರಾಸ್ತಾವಿಕ ಮಾನಾಡಿದರು, ಮೀನಾಕ್ಷಿ ಹತ್ತಿ ಸ್ವಾಗತಿಸಿದರು. ಜಯಾನಂದ ತುಂಗಳ ನಿರೂಪಿಸಿದರು ಹಾಗೂ ಭಾಗ್ಯಶ್ರೀ ಹೊರ್ತಿಕರ ವಂದಿಸಿದರು.

ಜ್ಞಾನಯೋಗಾಶ್ರಮದ ಈ ಕನ್ನಡ ಸಮ್ಮೇಳನವು ಇಲ್ಲಿನ ಕನ್ನಡಿಗರಿಗೆ ಒಂದು ಹೊಸ ಶಕ್ತಿ ನೀಡಿತು. ಇದೆ ರೀತಿಯಲ್ಲಿ ಗಡಿಭಾಗದಲ್ಲಿಯ ಮಠ ಮತ್ತು ಆಶ್ರಮಗಳು ಕನ್ನಡಿಗರ ಹಾಗೂ ಕನ್ನಡ ಶಾಲೆಗಳ ಹಿಂದೆ ಗಟ್ಟಿಯಾಗಿ ನಿಲ್ಲಬೇಕು. ನಾವೆಲ್ಲಾ ಕನ್ನಡಿಗರು ಐಕ್ಯತೆಯಿಂದ ನಮ್ಮ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡಿದರೆ ಪರಿಹಾರ ಸಿಗುವದು. ಈ ಆಶ್ರಮಕ್ಕೆ ಮುಂದಿನ ದಿನಗಳಲ್ಲಿ ಸಮ್ಮೇಳನ ನಡೆಸಲು ಹಾಗೂ ಭೌತಿಕ ಸೌಲಭ್ಯಗಳಿಗಾಗಿ ಕರ್ನಾಟಕ ಸರಕಾರ ಸಹಕಾರ ನೀಡಬೇಕು. –ಮಲಿಕಜಾನ ಶೇಖ, ಅಧ್ಯಕ್ಷರು, ಆದರ್ಶ ಕನ್ನಡ ಬಳಗ

ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರು: ಸುರೇಶ ನಾಯಿಕ, ಮಹಾದೇವ ಪಾಚಂಗೆ, ಭಾಗ್ಯಶ್ರೀ ಹೊರ್ತಿಕರ, ವಿದ್ಯಾ ಗಣಕೆ, ಕವಿತಾ ಅರಗೆ, ದೊಂಡಪ್ಪಾ ಬಂಡಗರ, ಶಂಕರ ಹಳಗಲಿ, ಮಹಾಂತೇಶ ಪುಟಾಣಿ, ವಿಠ್ಠಲ ಚೌಗುಲೆ, ಪ್ರಶಾಂತ ತೆಲಗಾಂವ, ಸಂಜಯ ಅರಳಿ, ಸಂದೀಪ ತೇಲಿ, ಸೋಮಶೇಖರ ರೂಗಿ, ಮಂಜುನಾಥ ಬನಸೂಡೆ, ರಾಜಕುಮಾರ ಮಸಳಿ, ಗುರಯ್ಯಾ ಮಠ, ಸಂದೀಪ ಪಾಥರೂಟ್, ಮಲ್ಲಿಕಾರ್ಜುನ ಸೋನಾರ

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago