ಬಿಸಿ ಬಿಸಿ ಸುದ್ದಿ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಿದೆ

ಸುರಪುರ: ‘ಈ ಮೊದಲು ಹೈದ್ರಾಬಾದ ಕರ್ನಾಟಕ ಇದ್ದಿದ್ದು ಈಗ ಕಲ್ಯಾಣ ಕರ್ನಾಟಕ ಎಂದಾಗಿದೆ. ಈ ಸುರಪುರ ಶಹಪುರ ಭಾಗದಲ್ಲಿ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎಂದು ಖ್ಯಾತ ಶಾಸನ ತಜ್ಞೆ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿಯ 37ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹನುಮಾಕ್ಷಿ ಗೋಗಿ ಮಾತನಾಡಿದರು.

ನಗರದ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ನಡೆದ ಸುರಪುರ ಕನ್ನಡ ಸಾಹಿತ್ಯ ಸಂಘದ ಸಹಸ್ರ ಚಂದ್ರಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಈಗಾಗಲೇ ಇಲ್ಲಿ ಡಾ.ಪೆದ್ದಯ್ಯ ಅವರು ಸತತ 20 ವರ್ಷಗಳ ಕಾಲ ಉತ್ಖನನ ಕಾರ್ಯ ಕೈಗೊಂಡು ಇಲ್ಲಿಯ ಹುಣಸಗಿ ವಜ್ಜಲ ಬೂದಿಹಾಳ ರಾಜನಕೋಳೂರ ಬೈಚಬಾಳ ಮುಂತಾದ ಭಾಗಗಳಲ್ಲಿ ಲಕ್ಷ ವರ್ಷಗಳ ಹಿಂದೆಯೇ ಜನ ವಸತಿ ಇತ್ತು ಎಂದು ಸಂಶೋಧಿಸಿದ್ದಾರೆ. ಇನ್ನೂ ಇಲ್ಲಿಯ ಶಾಸನಗಳ ಬಗ್ಗೆ ಆಳ ಅಧ್ಯಯನ ನಡೆಯ ಬೇಕಾಗಿದೆ, ಈ ನಿಟ್ಟಿನಲ್ಲಿ ಇಲ್ಲಿಯ ಸಂಶೋಧಕರು ಕವಿ ಸಾಹಿತಿಗಳು ಪ್ರಯತ್ನಿಸಲಿ. ಇಲ್ಲಿಯ ರಾಜರ ಶೌರ್ಯಗಾಥೆ ಕೂಡ ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನ ಪಡೆದು ಕೊಂಡಿದೆ, ಇದು ಶೂರರ ನೆಲ ಇಲ್ಲಿ ಕನ್ನಡ ಸಾಹಿತ್ಯ ಸಂಘವು 80 ವರ್ಷಗಳನ್ನು ಪೂರೈಸಿದ್ದು ನಮಗೆಲ್ಲ ತುಂಬ ಹೆಮ್ಮೆ ತರುವ ವಿಷಯ, ಉರ್ದು ನಾಡಿನಲ್ಲಿ ಕನ್ನಡದ ಬೀಜ ಬಿತ್ತಿದ ಪೂರ್ವಸೂರಿಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ ಸರಿ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕಿ ಶಕುಂತಲಾ ಜಾಲವಾದಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚೈನ್ನೈ ಹಾಗೂ ಹೈದ್ರಾಬಾದನ ಸಿ. ಸೌಭಾಗ್ಯ, ತೇಜಸ್ವಿನಿ, ಹರ್ಷಿಣಿ ಅವರ ಭರತ ನಾಟ್ಯ ಹಾಗೂ ಗೀತಗಾಯನ ಜನರ ಮನ ಸೆಳೆಯಿತು. ಖ್ಯಾತ ಹಿಂದುಸ್ತಾನಿ ಗಾಯಕಿಯರಾದ ನಿರ್ಮಲಾ ರಾಜಗುರು ಹಾಗೂ ಗೀತಾ ಗಾಯತ್ರಿ ಚಕ್ರವರ್ತಿ ಸಹೋದರಿಯರ ಶಾಸ್ತ್ರೀಯ ಸಂಗೀತದ ಜುಗಲ್ಬಂದಿ ಹಾಗೂ ಪಂ.ಸಿ ವೇಣುಗೋಲ ಅವರ ಗಜಲ್ ಗಾಯನ ತುಂಬ ಖುಷಿ ಕೊಟ್ಟಿತು. ಇವರಿಗೆ ಮೋಹನ ಮಾಳದಕರ ಹಾರ್ಮೋನಿಯಂ ಸಾಥ ನೀಡಿದರು. ಇಡೀ ಸಂಜೆ ಸಂಗೀತದ ಗಂಧರ್ವ ಗಾಯಕರಿಂದ ತೋಯ್ದು ಹೋಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಿಕ್ರಿಯೆಶನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಭಾಗವಹಿಸಿ ಮಾತನಾಡಿದರು. ಕಸಾಸಂ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ ನ್ಯಾಯವಾದಿ ಜೆ.ಅಗಸ್ಟಿನ ಪ್ರಾಸ್ತಾವಿಕ ಮಾತನಾಡಿದರು.

ರಾಜಶೇಖರ ದೇಸಾಯಿ ಸ್ವಾಗತಿಸಿದರು. ದೇವು ಹೆಬ್ಬಾಳ ನಿರೂಪಿಸಿದರು. ಎಚ್ ರಾಠೋಡ ಪರಿಚಯಿಸಿದರು. ಶ್ರೀನಿವಾಸ ಜಾಲವಾದಿ ವಂದಿಸಿದರು.

ಕಾರ್ಯಕ್ರಮದಲ್ಲಿ ನಬಿಲಾಲ ಮಕಾನದಾರ, ಶರಣಬಸಪ್ಪ ಯಾಳವಾರ, ಯಲ್ಲಪ್ಪ ಹುಲಕಲ್ಲ, ಗೋವರ್ಧನ ಝಂವರ, ಸಯ್ಯದಾ ಬೇಗಂ, ಶ್ರೀಹರಿ ಆದೋನಿ, ನರಸಿಂಹ ಬಾಡಿಯಾಳ, ರಮೇಶ ಕಟ್ಟಿಮನಿ, ಶ್ರೀಪಾದ ಗಡ್ಡದ, ರಘುನಾಥ ಆಚಾರ್ಯ, ಲಕ್ಷ್ಮಣ ಗುತ್ತೇದಾರ, ಡಾ. ಸತ್ಯನಾರಾಯಣ ಆಲದರ್ತಿ, ಪ್ರಕಾಶಚಂದ ಜೈನ, ಅನ್ವರ ಜಮಾದಾರ, ಖಜಾನೆ ಅಧಿಕಾರಿ ಸಣ್ಣಕ್ಕೆಪ್ಪ, ರಮೇಶ ಕುಲಕಣಿ9, ಶಕುಂತಲಾ ಆಚಾರ್ಯ, ದೊಡ್ಡಮಲ್ಲಿಕಾಜು9ನ ಉದ್ಧಾರ, ಚಂದ್ರು, ಪ್ರಕಾಶ ಬಣಗಾರ, ರಾಘವೇಂದ್ರ ಭಕ್ರಿ, ಮೊದಲಾದವರು ಉಪಸ್ಥಿತರಿದ್ದರು

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago