ಬಿಸಿ ಬಿಸಿ ಸುದ್ದಿ

ಅಂಗನವಾಡಿ ಕೇಂದ್ರಗಳಿಗೆ 6 ವರ್ಷದಿಂದ ಸಿಲಿಂಡರ್ ಕಡಿತ, 18 ತಿಂಗಳಿಂದ ಬಾಡಿಗೆ ಇಲ್ಲ: ಕಾರ್ಯಕರ್ತೆಯರಿಂದ ಬೃಹತ್ ಪ್ರತಿಭಟನೆ

ಶಹಾಬಾದ: ಅಂಗನವಾಡಿ ಕೇಂದ್ರಗಳಿಗೆ 18 ತಿಂಗಳಿಂದ ಬಾಕಿರುವ ಬಾಡಿಗೆ ಬಿಲ್ ಮತ್ತು 22 ತಿಂಗಳ ತರಕಾರಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಹಾಗೂ ಕೇಂದ್ರಗಳಿಗೆ 6 ವರ್ಷಗಳಿಂದ ಸಿಲಿಂಡರ್ ವಿತರಣೆ ಮಾಡದ ಸರಕಾರದ ಕ್ರಮವನ್ನು ವಿರೋಧಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಹಾಬಾದ್ ಕಚೇರಿ ಎದುರು ಕರ್ನಾಟಕ ಅಂಗನವಾಡಿ ನೌಕರರ ಸಂಘ ತಾಲ್ಲೂಕು ಸಮಿತಿಯಿಂದ ಧರಣಿ ಸತ್ಯಾಗ್ರಹ ನಡೆಸಿ ಸರಕಾರದ ವಿರುದ್ಧ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ.ಸಾಯಬಣ್ಣಾ ಗುಡುಬಾ ಮಾತನಾಡಿ ಶಹಾಬಾದ್ ವ್ಯಾಪ್ತಿಯಲ್ಲಿ ಸುಮಾರು 88 ಅಂಗನವಾಡಿ ಕೇಂದ್ರಗಳು ಬಾಡಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿವೆ. ಸುಮಾರು 18 ತಿಂಗಳಿಂದ ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಮೊತ್ತ ಪಾವುತಿಸಿಲ್ಲ. ಪರಿಣಾಮ ಮನೆ ಮಾಲೀಕರು ಕೇಂದ್ರದಿಂದ ಮಕ್ಕಳನ್ನು ಹೊರಗೆ ದಬ್ಬಿ, ಕೇಂದ್ರ ಖಾಲಿ ಮಾಡುವಂತೆ ಪದೇಪದೇ ಒತ್ತಡ ಹಾಕುತ್ತಿದ್ದಾರೆ. ಇದು ದಿನಾಲು ಮನೆ ಮಾಲೀಕರಿಂದ ನಡೆಯುತ್ತಿರುವ ಮಾನಸಿಕ ಕಿರುಕುಳವಾಗಿದೆ.

ರ್ಯಕರ್ತೆಯರು ಭಯದ ವಾತಾವರಣದಲ್ಲೇ ಕೇಂದ್ರ ನಡೆಸುವಂತಾಗಿದೆ. ಎಂದು ಅಧಿಕಾರಿಗಳ ವಿರುದ್ಧ ಗುಡುಬಾ ಕಿಡಿ ಕಾರಿದರು.
ಹೊಸದಾಗಿ ಆರಂಭವಾಗಿರುವ ಅಂಗನವಾಡಿ ಕೇಂದ್ರಗಳಿಗೆ 6 ವರ್ಷದಿಂದ ಸಿಲಿಂಡರ್ ವಿತರಣೆಯಾಗಿಲ್ಲ. ಚಾಲ್ತಿಯಲ್ಲಿರುವ ಕೇಂದ್ರಗಳಿಗೆ 10 ತಿಂಗಳಿಂದ ಸಿಲಿಂಡರ್ ವಿತರಣೆ ಮಾಡಿಲ್ಲ. ಪರಿಣಾಮ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದಕ್ಕೆ ತುಂಬಾ ಹೊರೆಯಾಗುತ್ತಿದೆ. ಆದರೂ ಅಧಿಕಾರಿಗಳು ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತೆಯರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಶಹಾಬಾದ್ ನಗರದ ವಿಠ್ಠಲ ಮಂದಿರ ಮತ್ತು ರಾಮಣಬಾಯಿ ಟೆಂಪಲ್ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿ ಹುದ್ದೆಗೆ ಅರ್ಜಿ ಕರೆದು ಫಲಾನುಭವಿಗಳ ಪ್ರಮಾಣ ಪತ್ರಗಳು ಪರಿಶೀಲನೆ ಮಾಡಲಾಗಿದೆ. ಆದರೂ 2 ವರ್ಷ ಕಳೆದರು ಇನ್ನೂ ಆದೇಶ ಪತ್ರ ನೀಡಿಲ್ಲ. ಇದು ಅಧಿಕಾರಿಗಳ ಉದ್ದೇಶಿತ ಕುತಂತ್ರವಾಗಿದೆ. ಇದರಿಂದ ಪುನಾ ಈ ಸ್ಥಳಕ್ಕೆ ಅರ್ಜಿ ಕರೆಯಬಾರದು ಎಂದು ಆಗ್ರಹಿಸಿದರು.

ಶಹಾಬಾದ್ ವಲಯದ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಕೂಡಲೇ ಫಲಾನುಭವಿಗಳಿಗೆ ಆದೇಶ ಪ್ರತಿ ನೀಡಬೇಕು. 5 ವರ್ಷ ಸೇವೆ ಸಲ್ಲಿಸಿದ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸೇವಾ ಹಿಂಬಾಕಿ(ಗ್ರಾಜ್ಯುಟಿ) ನೀಡಬೇಕು. ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರು ಇರುವುದಿಲ್ಲ. ಇದರಿಂದ ಕೇಂದ್ರ ನಡೆಸುವುದಕ್ಕೆ ತುಂಬಾ ಕಷ್ಟಕರವಾಗಿದೆ. ಇದರಿಂದ ಖಾಲಿ ಇರುವ ಸಹಾಯಕಿ ಹುದ್ದೆಗಳಿಗೆ ಕೂಡಲೇ ಅರ್ಜಿ ಕರೆಯಬೇಕು. ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಿಡಿಪಿಓ ಜೊತೆ ವಾಗ್ವಾದ: ಕಾರ್ಯಕರ್ತೆಯರ ಸಮಸ್ಯೆ ಕುರಿತು ಈಗಾಗಲೇ ಸಿಡಿಪಿಓ ಅವರ ಗಮನಕ್ಕೆ ತರಲಾಗಿದೆ. ಆದರೂ 2 ವರ್ಷ ಕಳೆದರು ಸಮಸ್ಯೆ ಹಾಗೆ ಮುಂದುವರಿದಿವೆ ಎಂದು ತಹಶಿಲ್ದಾರರಿಗೆ ಪ್ರತಿಭಟನಾಕಾರರು ಹೇಳಿದರಿಂದ ಕೊಪಿತರಾದ ಸಿಡಿಪಿಓ ನನ್ನ ಗಮನಕ್ಕೆ ಈಗ ಬಂದಿದೆ. ಒಂದು ವಾರದೊಳಗೆ ಬಾಡಿಗೆ ಮತ್ತು ಗ್ಯಾಸ್ ಸಿಲಿಂಡರ್, ತರಕಾರಿ ಬಿಲ್ ಪಾವುತಿ ಮಾಡಲಾಗುವುದು ಹೇಳಿದ ಮೇಲೆ ಪ್ರತಿಭಟನಾಕಾರರು ಮತ್ತು ಸಿಡಿಪಿಓ ಮಧ್ಯೆ ವಾಗ್ವಾದ ನಡೆಯಿತು.

ಶಹಾಬಾದ್ ಗ್ರೇಡ್ -2 ತಹಶಿಲ್ದಾರರು ಸ್ಥಳಕ್ಕೆ ಆಗಮಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೆ ಮನವಿ ಪತ್ರ ಸ್ವೀಕರಿಸಿ ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಮೈತ್ರಾಬಾಯಿ ತಳವಾರ(ನಗರ ಅಧ್ಯಕ್ಷೆ). ಸುವರ್ಣ, ಅಂಗನವಾಡಿ ನೌಕರರ ಅಧ್ಯಕ್ಷೆ ಸಾಬಮ್ಮ ಎಮ್ ಕಾಳಗಿ, ಸುಜಾತಾ ರಾವೂರ, ಅಂಬುಜಾ, ರಾಯಪ್ಪ ಹುರಮುಂಜಿ ಇದ್ದರು. ಸರ್ಕಲ್ ಇನ್ಸ್ ಪೆಕ್ಟರ್ ನಟರಾಜ ಲಾಡೆ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago