ಬಿಸಿ ಬಿಸಿ ಸುದ್ದಿ

ಕಲಬುರಗಿಯಲ್ಲಿ 100 ಎಕರೆ ಪ್ರದೇಶದಲ್ಲಿ ಐಟಿ-ಬಿಟಿ ಪಾರ್ಕ ಸ್ಥಾಪನೆಗೆ ಸಚಿವರಿಗೆ ಮನವಿ

ಕಲಬುರಗಿ: ಹೈದ್ರಾಬಾದ ನಿಜಾಮರ ಆಳ್ವಿಕೆಗೆ ಒಳಪಟ್ಟ ಕಲ್ಯಾಣಕರ್ನಾಟಕ ವಿಭಾಗ ಮತ್ತು ಕಲಬುರಗಿಜಿಲ್ಲೆಯು ಸ್ವತಂತ್ರ ಬಂದು 75 ವರ್ಷ ಕಳೆದರು ಇಂದಿಗೂ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಬಡತನ, ನಿರುದ್ಯೋಗ ಮತ್ತು ವಲಸೆ ಸಮಸ್ಯೆಗಳು ನಮ್ಮನ್ನು ಬಿಟ್ಟು ಹೋಗುತ್ತಿಲ್ಲ. ಎಂದು ಕಲ್ಯಾಣ ನಾಡು ವಿಕಾಸ ವೇದಿಕೆಯ ರಾಜ್ಯಾಧ್ಯಕ್ಷ ಮುತ್ತಣ್ಣ ನಡಗೇರಿ ನೇತೃತ್ವದಲ್ಲಿ ನಗರಕ್ಕೆ ಆಗಮಿಸಿದ ಸಚಿವ ಪ್ರೀಯಾಂಕ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಸರ್ಕಾರವುತನ್ನ ಐಟಿ-ಬಿಟಿ ನೀತಿಯಲ್ಲಿಕಲ್ಯಾಣಕರ್ನಾಟಕ ಮತ್ತು ಕಲಬುರಗಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ರಾಜ್ಯ ಸರ್ಕಾರದ ಬಿಯಾಂಡ್ ಬೆಂಗಳೂರು, ಕರ್ನಾಟಕಡಿಜಿಟಲ್ ಎಕನಾಮಿ ಮಿಷನ್ ಮತ್ತು ಸ್ಟಾರ್ಟಅಪ್‍ಉದ್ಯಮ ಸ್ಥಾಪನೆಯಲ್ಲಿ ಕೇವಲ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ನಗರಗಳಿಗೆ ಮಾತ್ರಆದ್ಯತೆ ನೀಡುತ್ತಿದೆ. ಇದರಿಂದಕಲ್ಯಾಣಕರ್ನಾಟಕ ಮತ್ತು ಭಾಗಕ್ಕೆ ಮೋಸವಾಗುತ್ತಿದೆ ಎಂದು ತಿಳಿಸಿದರು.

ಬೇರೆ ರಾಜ್ಯಗಳಲ್ಲಿ ಟೈರ-2 ಸಿಟಿಗಳನ್ನು ಐಟಿ ಹಬ್ ಆಗಿ ನಿರ್ಮಾಣ ಮಾಡಿದಂತೆ ಮತ್ತು ಬೆಂಗಳೂರಿನ ಮೇಲಿನ ಐಟಿ ಕೈಗಾರಿಕೆಗಳ ಒತ್ತಡಕಡಿಮೆ ಮಾಡಲು ಕಲಬುರಗಿಯಲ್ಲಿಉದ್ಯೋಗ ಸೃಷ್ಠಿ ಮಾಡಿ, ವಲಸೆಯನ್ನು ನಿಯಂತ್ರಿಸಿ, ಬಡತನ ನಿರ್ಮೂಲನೆ ಮಾಡಲು ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡಲು, ವಿಭಾಗೀಯಕೇಂದ್ರ ಕಲಬುರಗಿಯನ್ನುಕರ್ನಾಟಕ ಸರ್ಕಾರದ ಐಟಿ-ಬಿಟಿ, ಬಿಯಾಂಡ್ ಬೆಂಗಳೂರು, ನೀತಿಯಲ್ಲಿ ಸೇರ್ಪಡೆಮಾಡಿ ವಿಶೇಷ ಪ್ರೋತ್ಸಾಹವನ್ನು ನೀಡಬೇಕು ಎಂದು ಒತ್ತಾಯಿದರು.

ಕಲಬುರಗಿ ನಗರದ ವಿಮಾನ ನಿಲ್ದಾಣದ ಹತ್ತಿರ 100 ಎಕರೆ ಪ್ರದೇಶದಲ್ಲಿ “ಹೈಟೇಕ್-ಸಿಟಿ” ಅಥವಾ “ಐಟಿ-ಸಿಟಿ” ಯನ್ನು ನಿರ್ಮಾಣ ಮಾಡಬೇಕುಇಲ್ಲಿದೇಶದ ಪ್ರಮುಖ ಐಟಿ ಕಂಪನಿಗಳಾದ ಟಿಸಿಎಸ್, ಇನ್ಪೋಸಿಸ್, ವಿಪ್ರೋ, ಬಯೋಕಾನಂಥಹ ಉದ್ಯಮಗಳು ತಮ್ಮ ಶಾಖೆ ಮತ್ತುದೊಡ್ಡ ಪ್ರಮಾಣದಕ್ಯಾಂಪಸ್‍ತೆರೆಯಲು ಪ್ರೋತ್ಸಾಹ ನೀಡಬೇಕು.ಜೊತೆಗೆ ಬಹುರಾಷ್ಟ್ರೀಯ ಐಟಿ ಕೈಗಾರಿಕೆಗಳನ್ನು ಸೆಳೆಯಲು ಎಲ್ಲಾರೀತಿಯ ಸಹಕಾರ ಮತ್ತು ಮೂಲಭೂತ ಸೌಕರ್ಯಗಳ ಭರವಸೆ ನೀಡಬೇಕು. ಕೇಂದ್ರ ಸರ್ಕಾರದಎಸ್.ಟಿ.ಪಿ.ಐ (ಸಾಪ್ಟವೇರ್‍ಟೇಕ್ನೋಲಜಿ ಪಾಕ್ರ್ಸ್‍ಆಫ್‍ಇಂಡಿಯಾ) ಕೇಂದ್ರವನ್ನು ಕಲಬುರಗಿಯಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಬೆಂಗಳೂರಿನ ಕೈಗಾರಿಕೆಗಳನ್ನು ಹೋಸೂರು, ಮುಂಬೈನ್ ಕೈಗಾರಿಕೆಗಳನ್ನು ಪುಣೆ-ನಾಸಿಕ್- ದೇಹಲಿಯ ಕೈಗಾರಿಕೆಗಳನ್ನು ನೋಯ್ಡಾ-ಗುರುಗ್ರಾಮ ನಗರಗಳು ಸೆಳೆದಂತೆ ಕಲಬುರಗಿಯ ಹತ್ತಿರಇರುವ ಹೈದ್ರಾಬಾದನ್ ಕೈಗಾರಿಕೆಗಳನ್ನು ಸೆಳೆಯಲು ಕಲಬುರಗಿ-ಸೇಡಂ-ಕೊಡಂಗಲ-ಪರಿಗಿ-ವಿಕಾರಾಬಾದ-ಹೈದ್ರಾಬಾದ ನಡುವೆಚತುಸ್ಪತಎಕ್ಸಪ್ರೇಸ್ ಹೆದ್ದಾರಿಯನ್ನು ನಿರ್ಮಾಣ ಮಾಡಬೇಕು. ಇದು ಕಲಬುರಗಿ ಅಭಿವೃದ್ದಿಗೆ ತುಂಬಾಅವಶ್ಯಕವಾಗಿದೆ ಎಂದು ಮನವಿ ಮಾಡಿದ್ದಾರೆ.

ಐಟಿ-ಬಿಟಿ ಇಲಾಖೆಗೆ ಸಂಬಂಧಿಸಿದಂತೆ, ಐಟಿ-ಸಿಟಿ ಅಥವಾ ಹೈಟೇಕ್ ಸಿಟಿ ನಿರ್ಮಾಣಕ್ಕಾಗಿದೊಡ್ಡಮಟ್ಟದ ವಿಚಾರ ಸಂಕೀರ್ಣ ಮತ್ತು ಹೂಡಿಕೆದಾರರ ಸಮಾವೇಶವನ್ನು ಕಲಬುರಗಿಯಲ್ಲಿಆಯೋಜನೆ ಮಾಡಬೇಕು. ಆ ಮೂಲಕ ಕಲಬುರಗಿ ಅಭಿವೃದ್ದಿಗೆ ತಾವುಗಳು ಮುಂದಾಗಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬಾಬುಮದನಕರ, ಸಂಘಟಕರಾದ ಅವಿನಾಶ ಕಪನೂರ, ಜೈಭೀಮ ಮಾಳಗೆ, ಮೋಹನ ಸಾಗರ, ಸೂರ್ಯಪ್ರಕಾಶ ಚಾಳಿ, ಪ್ರವೀಣ ಖೇಮನ, ರಾಣೇಶ ಸಾವಳಗಿ,ಅರುಣಇನಾಮದಾರ, ಮಹೇಶ ಮಾನೆ ಸೇರಿದಂತೆ ಇತರರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago