ಕಲಬುರಗಿ: ನಾಡಿಗೆ ಮೊದಲ ವ್ಯಾಕರಣ ಗ್ರಂಥ ‘ಶಬ್ದಮಣಿದರ್ಪಣ’, ಮುಖ್ಯಮಂತ್ರಿ ನೀಡಿದ ನೆಲ ಜೇವರ್ಗಿಯಾಗಿದೆ. ಶರಣಬಸವೇಶ್ವರರು, ಕಡಿಕೋಳ ಮಡಿವಾಳೇಶ್ವರ, ಷಣ್ಮುಖ ಶಿವಯೋಗಿ ಅಂತಹ ಮಹಾನ ಶರಣರು, ತತ್ವಪದಕಾರರು ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಆದರೆ ಶೈಕ್ಷಣಿಕ, ಅಭಿವೃದ್ಧಿ ದೃಷ್ಟಿಯಿಂದ ಇನ್ನೂ ಹಿಂದುಳಿದಿದ್ದು, ಅಭಿವೃದ್ಧಿಗೆ ನೈಜ ಕಾಳಜಿ ವಹಿಸಿ ಶ್ರಮಿಸಬೇಕಾಗಿದೆ ಎಂದು ಕಡಕೋಳದ ಪೂಜ್ಯ ಡಾ.ರುದ್ರಮುನಿ ಶಿವಾಚಾರ್ಯರು ಮಾರ್ಮಿಕವಾಗಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ತಾಲೂಕಿನ ಚಿಗರಹಳ್ಳಿಯ ಶ್ರೀ ಜಗದ್ಗುರು ಮರುಳ ಶಂಕರ ದೇವರ ಗುರುಪೀಠದ ಸಮುದಾಯ ಭವನದಲ್ಲಿ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನವಾದ ಬುಧವಾರ ಜರುಗಿದ ‘ಕನ್ನಡ ನಾಡಿಗೆ ಜೇವರ್ಗಿ ಕೊಡುಗೆ’ ಎಂಬ ವಿಷಯದ ಕುರಿತು ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಯಡ್ರಾಮಿ ಕದಂಬ ಪಿಯು ಕಾಲೇಜು ಮತ್ತು ಜೇವರ್ಗಿಯ ನರೇಂದ್ರ ಪಿಯ ಕಾಲೇಜಿನ ಪ್ರಾಚಾರ್ಯ ದೇವಿಂದ್ರ ಬಿ.ಗುಡುರ್, ನಮ್ಮ ಜೇವರ್ಗಿ ನೆಲ ಪುಣ್ಯಭೂಮಿಯಾಗಿದೆ. ‘ವಚನ ಸಾಹಿತ್ಯದ ಕೊನೆಯ ಕೊಂಡಿ’ಯಾಗಿ ಷಣ್ಮುಖ ಶಿವಯೋಗಿಗಗಳು ವಚನಗಳು, ಕಡಕೋಳ ಮಡಿವಾಳೇಶ್ವರರು ಮತ್ತು ಚನ್ನೂರಿನ ಜಲಾಲಸಾಬ್ ಅವರ ತತ್ವಪದಗಳು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖವಾದವು. ಶರಣಬಸವೇಶ್ವರರು ದಾಸೋಹಕ್ಕೆ ಹೊಷ ಭಾಷ್ಯ ಬರೆದಿದ್ದಾರೆ ಎಂದರು.
ವಿಶ್ವರಾಧ್ಯ, ಮಲ್ಲಾರಾಧ್ಯ, ಕೋಳಕುರ ಸಿದ್ಧಬಸವೇಶ್ವರರು, ಆಧ್ಯಾತ್ಮಿಕತೆ ಮೇರು ವ್ಯಕ್ತಿಗಳು. ಸೊನ್ನದ ದಾಸೋಹ ಮಠ, ಯಡ್ರಾಮಿ, ನೆಲೋಗಿ, ಚಿಗರಹಳ್ಳಿ ಮಠ ಸೇರಿದಂದ ತಾಲೂಕಿನಲ್ಲಿ ಅನೇಕ ಮಠ-ಮಾನ್ಯಗಳು, ದಾರ್ಮಿಕ ಸಂಸ್ಥೆಗಳು ಕೊಡುಗೆ ನೀಡಿವೆ. ಸರ್ದಾರ ಶರಣಗೌಡ ಇನಾಮದಾರ್ ಅವರು ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ. ಸನ್ಮಾನ್ಯ ಧರ್ಮಸಿಂಗ ಅವರು ಮುಖ್ಯಮಂತ್ರಯಾಗಿ ಜೇವರ್ಗಿ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ತಾಲೂಕಿನ ಸಾಹಿತ್ಯ, ಧಾರ್ಮಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಅಂಕಿ-ಅಂಶಗಳ ಸಹಿತ ವಿವರಿಸಿದರು.
ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಸಿದ್ದಬಸವ ಕಬೀರ ಸ್ವಾಮೀಜಿ, ಕಾಲೇಜಿನ ಪ್ರಾಚಾರ್ಯ ಮೊಹ್ಮದ್ ಅಲ್ಲಾಉದ್ದೀನ್ ಸಾಗರ, ಉಪನ್ಯಾಸಕರಾದ ರವೀಂದ್ರಕುಮಾರ ಬಟಗೇರಿ, ರಂಜಿತಾ ಠಾಕೂರ, ಸಮೀನಾ ಬೇಗಂ, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಎಚ್.ಬಿ.ಪಾಟೀಲ, ಪ್ರ.ದ.ಸ ನೇಸರ ಎಂ.ಬೀಳಗಿಮಠ, ಯಡ್ರಾಮಿ ಕದಂಬ ಪಿಯು ಕಾಲೇಜಿನ ಉಪನ್ಯಾಸಕ ಸಿದ್ರಾಮಯ್ಯ ಮಠಪತಿ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕರು ಪಾಲ್ಗೊಂಡಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…