ಬಿಸಿ ಬಿಸಿ ಸುದ್ದಿ

ಶರಣಬಸವೇಶ್ವರ ಲೀಲೆಗಳು ಅಗಣಿತ

ಮಹಾದಾಸೋಹಿ ಶರಣಬಸವೇಶ್ವರ ಶಿವಲೀಲೆಗಳಿಗೆ ಕೊನೆಯೇ ಇಲ್ಲ. ಅವು ಅಗಣಿತವಾಗಿದ್ದು ಎಂದು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಸಹ ಪ್ರಾಧ್ಯಾಪಕ ಡಾ.ಚಿದಾನಂದ ಚಿಕ್ಕಮಠ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ರವಿವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

ಹೆಣ್ಣುಮಗಳೊಬ್ಬಳು ಗಂಡನಿಗೆ ಗೊತ್ತಿಲ್ಲದ ಹಾಗೇ ಸಾಲ ಮಾಡಿದ್ದಳು. ಆದರೆ ಆಕೆ ಸಾಲ ಮಾಡಿದ್ದು ತನಗಾಗಿ ಅಲ್ಲ ತನ್ನ ತವರ ಮನಿಯವರಿಗಾಗಿಯೂ ಅಲ್ಲ. ಕೇವಲ ಗಂಡನ ಬಳಗಕ್ಕಾಗಿ. ಆ ಸಾಲ ಒಂದಕ್ಕೆ ಎರಡಾಗಿ, ಎರಡಕ್ಕೆ ನಾಕಾಗಿ ಆಕೆಯ ಕೊರಳಿಗೆ ಉರಲಾಗುತ್ತದೆ. ಗಂಡನಿಗೆ ತಿಳಿಸುವಂತಿಲ್ಲ. ಸಾಲದ ಬೇಗೆಯಲ್ಲಿ ಬಳಲುತ್ತಿದ್ದಳು. ಆದರೆ ಯಾವಾಗಲೂ ಶರಣಬಸವರ ಸ್ಮರಣೆ ಮಾತ್ರ ಮಾಡುತ್ತಿದ್ದಳು. ಶರಣರ ಮನಸ್ಸಿಗೆ ಮುಟ್ಟಿತು ಆ ಕೂಗು. ಆ ಸ್ತ್ರೀಯ ಸಾಲವನ್ನು ಹೇಗಾದರು ಮಾಡಿ ತೀರಿಸಬೇಕೆಂಬ ಚಿಂತೆಯೊಳಗಿದ್ದರು. ಒಂದು ಸಲ ಆಕೆ ಸದಿ ಕಳೆಯಲು ಹೋದ ಸ್ಥಳದಲ್ಲಿಯೇ ಸಾಲ ತೀರಿಸುವಷ್ಟು ಹೊನ್ನು ಸಿಗುವಂತೆ ಮಾಡಿದರು.

ಗರ್ಭಿಣಿಯಾಗಿರುವ ಅಕ್ಕನ ಮೇಲೆ ತಮ್ಮನಿಗೆ ಯಾವಾಗಲೂ ಸಿಟ್ಟು. ಯಾವಾಗಲೂ ಆಕೆಯ ಜೊತೆ ಜಗಳವಾಡುತ್ತಲೇ ಇರುತ್ತಿದ್ದ. ಅವಳನ್ನು ಅವಮಾನ ಮಾಡುತ್ತಲೇ ಇದ್ದ. ಆಕೆ ಇದರಿಂದ ಬಹಳ ನೋವು ಅನುಭವಿಸತೊಡಗಿದಳು. ಶರಣಬಸವರನ್ನು ನೆನೆಯತೊಡಗಿದಳು. ’ ನನ್ನ ತಮ್ಮನಿಗೆ ಒಳ್ಳೆಯ ಬುದ್ಧಿ ಕೊಡು ತಂದೆ ’ ಎಂದು ಬೇಡತೊಡಗಿದಳು. ಅಲ್ಲದೆ ತವರಿನಿಂದ ತಂದ ಬುತ್ತಿಯನ್ನು ಊರ ಜನರಿಗೆ ಪ್ರಸಾದ ಮಾಡಿಸುತ್ತಿದ್ದಾಗ ಪ್ರಸಾದ ಕಡಿಮೆ ಬೀಳುತ್ತದೆ. ಆಗ ಗಂಡ ಬಯ್ಯತೊಡಗಿದ. ಅವಳು ’ ಯಪ್ಪಾ ಶರಣಾ ಕಾಪಾಡಪ್ಪಾ’ ಎಂದು ಹಲುಬತೊಡಗಿದಳು. ಊರಿಗೆ ಊರು ಪ್ರಸಾದ ಮಾಡಿದರೂ ಇನ್ನೂ ಪ್ರಸಾದ ಡಬ್ಬಿಗಳಲ್ಲಿ ಹಾಗೇ ಉಳಿಯಿತು. ಶರಣರು ಆಕೆಯ ತಮ್ಮನಿಗೆ ಮತ್ತು ಗಂಡನಿಗೆ ಒಳ್ಳೆಯ ಬುದ್ದಿ ಕೊಟ್ಟರು.

ಆಳಂದ ತಾಲೂಕಿನ ಜಿಡಗಿ ಹಳ್ಳಿಯಲ್ಲಿ ಗುರುಬಾಯಿ ಎನ್ನುವ ಹೆಣ್ಣುಮಗಳು ಹಾಡುವುದರಲ್ಲಿ ಪ್ರಸಿದ್ದಳು. ತತ್ವಪದಗಳು, ಭಜನಾ ಪದಗಳು, ಹಂತಿಪದ, ಗೀಗೀಪದ ಹೀಗೆ ಅಸಂಖ್ಯಾತ ಹಾಡುಗಳನ್ನು ಹಾಡುತ್ತಿದ್ದಳು. ಆಗಾಗ ದಾಸೋಹ ಮಹಾಮನೆಗೆ ಬಂದು ಅಲ್ಲಿ ತನ್ನ ಸೇವೆ ಸಲ್ಲಿಸಿ ಹೋಗುತ್ತಿದ್ದಳು. ಆಕೆಯ ಸಂಗೀತ ಸೇವೆಗೆ ಶರಣರು ಪ್ರಸನ್ನರಾಗಿದ್ದರು. ಆಕೆಯ ಸಂಗೀತ ಕಲಿಕೆಗೆ ಹೆಚ್ಚಿನ ಅವಕಾಶ ಕೊಟ್ಟು ಆಶೀರ್ವದಿಸುತ್ತಾರೆ. ಮುಂದೆ ಅವಳು ಕೆಲವೇ ದಿನಗಳಲ್ಲಿ ಬಹು ಪ್ರಸಿದ್ಧಿ ಪಡೆಯುತ್ತಾಳೆ.

ರಾಯಚೂರು ಸಮೀಪದಲ್ಲಿರುವ ಗೆಜ್ಜೆಲಗಟ್ಟಿ ಹಳ್ಳಿಯ ದೇಸಾಯಿ ಮನೆತನದವರು ಧರ್ಮದಿಂದ ಆಡಳಿತ ನಡೆಸಿಕೊಂಡು ಹೋಗುತ್ತಿದ್ದರು. ಇವರಲ್ಲಿ ಆನೆ, ಕುದುರೆಗಳು ಇದ್ದವು. ಮನುಷ್ಯರಂತೆ ಅವುಗಳನ್ನು ಅವರು ಕಾಣುತ್ತಿದ್ದರು. ಒಂದು ಸಲ ಪಟ್ಟದ ಆನೆ ದೊಡ್ಡ ರೋಗದಿಂದ ಬಳಲುತ್ತಿತ್ತು. ಮನೆಯಲ್ಲಿ ಎಲ್ಲರೂ ಚಿಂತಾಕ್ರಾಂತರಾದರು. ಆಗ ಯಾರೋ ಒಬ್ಬರು ಶರಣಬಸವರ ಹೆಸರು ಹೇಳಿ ಅವರಲ್ಲಿಗೆ ಇದನ್ನು ಒಯ್ಯಲು ತಿಳಿಸುತ್ತಾರೆ. ದೇಸಾಯಿಗಳು ಶರಣರಲ್ಲಿ ಬಂದು ವಿಷಯವನ್ನು ತಿಳಿಸುತ್ತಾರೆ. ಮೂಕಸಂಕುಲಕ್ಕೆ ಅರಸ ತೋರುವ ಪ್ರೀತಿ ಅನುಕಂಪಗಳು ಶರಣರಿಗೆ ಬಹಳ ಸಂತೋಷ ನೀಡುತ್ತದೆ. ಭಸ್ಮವನ್ನು ತಂದು ಅರಸನ ಕೈಗೆ ಕೊಟ್ಟು ಮೂರು ದಿನ ಅದರ ಮೈತುಂಬ ಹಚ್ಚಲು ತಿಳಿಸುತ್ತಾರೆ. ಶರಣರ ನಾಮಸ್ಮರಣೆ ಮಾಡುತ್ತಾ, ದಿನಾಲೂ ಆನೆಯ ಮೈಗೆ ವಿಭೂತಿ ಸವರುತ್ತಾರೆ. ದಿನದಿಂದ ದಿನಕ್ಕೆ ಚೇತರಿಸಿಕೊಂಡು ಆ ಗಜರಾಜನ ರೋಗ ಮುಕ್ತವಾಗುತ್ತದೆ. ಶರಣಬಸವರ ಲೀಲೆಗಳು ಬಸವಾದಿ ಶರಣರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ಹೇಳಿದರು.

ಡಾ.ಚಿದಾನಂದ ಚಿಕ್ಕಮಠ, ಸಹ ಪ್ರಾಧ್ಯಾಪಕ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago