ಬಿಸಿ ಬಿಸಿ ಸುದ್ದಿ

ದೇಶದ ಚರಿತ್ರೆಯಲ್ಲಿ ನೇಪಥ್ಯಕ್ಕೆ ಸರಿದ ಮಹಾನ್ ನಾಯಕ ಬಿ.ಶ್ಯಾಮಸುಂದರ

ಕಲಬುರಗಿ: ದಲಿತರ, ಶೋಷಿತರ, ಕಾರ್ಮಿಕರ ಮತ್ತು ಮಹಿಳೆಯರ ಏಳ್ಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ, ಕೆಳವರ್ಗದವರನ್ನು ಸಬಲೀಕರಣಗೊಳಿಸಲು ಅವಿರತವಾಗಿ ದುಡಿದ ಕೀರ್ತಿ ಬಿ.ಶ್ಯಾಮಸುಂದರ್ ಅವರಿಗೆ ಸಲ್ಲುತ್ತದೆ. ಅನೇಕ ಸಾಮಾಜಿಕ ಸುಧಾರಣಾ ಕಾರ್ಯಗಳ ಮಧ್ಯೆಯೂ ದೇಶದ ಚರಿತ್ರೆಯಲ್ಲಿ ನೇಪಥ್ಯಕ್ಕೆ ಸರಿದ ಮಹಾನ್ ನಾಯಕ ಎಂದು ಚಿಂತಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಪ್ರೊ ಯಶವಂತರಾಯ ಅಷ್ಠಗಿ ಅಭಿಪ್ರಾಯಪಟ್ಟರು.

ಕರ್ನಾಟಕ ಸಮತಾ ಸೈನಿಕ ದಳದ ವತಿಯಿಂದ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ,ಮಾತನಾಡಿದರು.

ಬೆಂಕಿಯನ್ನು ಬಚ್ಚಿಡುವುದು ಸಾಧ್ಯವಿಲ್ಲ ಎಂಬಂತೆ ಬಿ. ಶ್ಯಾಮಸುಂದರ್ ಅವರ ಹೋರಾಟದ ಕ್ರಾಂತಿ ಜ್ವಾಲೆಗಳು ದೇದೀಪ್ಯಮಾನವಾಗಿ ರಾಷ್ಟ್ರದಾದ್ಯಂತ ಬೆಳಗಬೇಕೇಂಬ ಆಶಯ ಪ್ರೊ ಅಷ್ಠಗಿ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಕಲಬುರಗಿ ಮಹಾನಗರ ಪಾಲಿಕೆಯ ಉಪ ಮಹಾಪೌರ ಶಿವಾನಂದ ಪಿಸ್ತಿ ಉದ್ಘಾಟಿಸಿದರು.

ಔರಂಗಾಬಾದಿನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ಥಾಪಿಸಿದ ಜನತಾ ಶಿಕ್ಷಣ ಸಂಸ್ಥೆಗೆ 12 ಲಕ್ಷ ರೂಪಾಯಿ ಧನಸಹಾಯ ನೀಡಿದರು ಎಂದು ಭಾರತೀಯ ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷರಾದ ಸೂರ್ಯಕಾಂತ ನಿಂಬಾಳ್ಕರ್ ಹೇಳಿದರು.

ಅಸ್ಪೃಶ್ಯರು ಉದ್ಧಾರವಾಗಬೇಕಾದರೆ ಶಿಕ್ಷಣದಷ್ಟೇ ಮಹತ್ವದ್ದು ಭೂಒಡೆತನ. ಭೂಮಿ ಹಂಚಿಕೆಯಾಗಿ ‘ಉಳುವವನೇ ಭೂಮಿಯ ಒಡೆಯ’ ನಿಯಮವನ್ನು ತರುವಲ್ಲಿ ಬಿ ಶ್ಯಾಮಸುಂದರ ರವರು ನಿಜಾಂ ಪ್ರಾಂತೀಯ ಸರ್ಕಾರದಲ್ಲಿ ಅನುಷ್ಠಾನಕ್ಕೆ ಶ್ರಮಿಸಿದರು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಜೀವಕುಮಾರ ಟಿ ಮಾಲೆ ಹೇಳಿದರು. ಪೂಜ್ಯ ಭಂತೆ ಧಮ್ಮ ದೀಪ ಹಾಗೂ ಭಂತೆ ಸಂಘಾನಂದ ಸಾನಿಧ್ಯ ವಹಿಸಿದ್ದರು.

ಪತ್ರಕರ್ತ ಶಿವರಾಯ ದೊಡ್ಡಮನಿ, ಡಾ.ದೇವಿಂದ್ರಪ್ಪ ಕಮಲಾಪುರಕರ ಮಾತನಾಡಿದರು.

ಈ ಸಂದರ್ಭದಲ್ಲಿ ಸಾಯಬಣ್ಣ ಹೋಳಕರ, ಪೃಥ್ವಿರಾಜ್ ಬಳ್ಳಾರಿ, ಶಂಕರ್ ಫಿರಂಗೆ ಬೀದರ್, ಲಕ್ಷ್ಮಣ ಮೂಲಭಾರತಿ, ಎಂ ಎನ್ ಸುಗಂಧಿ,ಅಪ್ಪಾರಾಯ ಭಾವಿಮನಿ, ಮಹಾದೇವ ನಾಟಿಕರ,ವಿಜಯಕುಮಾರ ಉದ್ದಾ, ಮಲ್ಲಿಕಾರ್ಜುನ ಉದಯಕರ, ಅಮೃತ ನಾಯಕೋಡಿ, ಶಿವಲಿಂಗಮ್ಮ ಸಾವಳಗಿ, ಯಶೋಧಾ ಕುಸನೂರ, ಇಂದುಮತಿ ಭರತನೂರ, ಶಿಲ್ಪಾ ಕಾಂಬಳೆ, ಮಹಾದೇವಿ ಬಾಪುನಗರ, ಶಿವಮೂರ್ತಿ ಬಲಿಚಕ್ರವರ್ತಿ, ಮುತ್ತಣ್ಣ ಡೆಂಗಿ,ಮಾರುತಿ ಲೇಂಗಟಿ, ಖತಲಪ್ಪಾ ಕಟ್ಟಿಮನಿ,ಹೆಚ್ ಎಸ್,ಬರಗಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಂ ಎನ್ ಸುಗಂಧಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಅಪ್ಪಾರಾವ ಎಸ್ ಭಾವಿಮನಿ ನಿರೂಪಿಸಿದರು, ಮಹಾದೇವ ನಾಟಿಕರ ವಂದಿಸಿದರು.

ಸ್ವಾತಂತ್ರ್ಯಾ ನಂತರದಲ್ಲಿ ದಲಿತರನ್ನು ಸಂಘಟಿಸಿ ಅನೇಕ ಅರಿವಿನ ಕಾರ್ಯಕ್ರಮಗಳನ್ನು ರೂಪಿಸಿದರು. ಹಲವಾರು ಚಿಂತನಾಪರ ಕೃತಿಗಳನ್ನು ರಚಿಸಿದರು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ದಲಿತ ಚಳವಳಿಗೆ ನಾಂದಿ ಹಾಡಿದರು. – ಶಿವಾನಂದ ಪಿಸ್ತಿ, ಉಪ ಮಹಾಪೌರ ಮಹಾನಗರ ಪಾಲಿಕೆ ಕಲಬುರಗಿ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

12 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

14 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

21 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

21 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago