ಬಿಸಿ ಬಿಸಿ ಸುದ್ದಿ

ಸೇಡಂ: ಅಲ್ಟ್ರಾಟೆಕ್ ಸಿಮೆಂಟ್ 5ನೇ ಘಟಕ ಸ್ಥಾಪನೆಗೆ ಬಹುತೇಕರ ಸಮ್ಮತಿ

  • ಜನರ ಅಭಿಪ್ರಾಯಗಳನ್ನು ಸರ್ಕಾರಕ್ಕೆ ಸಲ್ಲಿಸಾಲಾಗುವುದು : ಜಿಲ್ಲಾಧಿಕಾರಿ ಫೌಜಿಯ ತರನ್ನುಮ್
  • ಮಳಖೇಡದ ಸಿಮೆಂಟ್ ಕಾರ್ಖಾನೆಯ 5ನೇ ಘಟಕ ಸ್ಥಾಪನೆಗೆ ಪರಿಸರ ನಿಯಂತ್ರಣ ಮಂಡಳಿಯಿಂದ ಸಾರ್ವಜನಿಕ ಆಲಿಕೆ ಸಭೆ

ಸೇಡಂ: ತಾಲೂಕಿನ ಮಳಖೇಡ ಗ್ರಾಮದ ಆದಿತ್ಯನಗರದಲ್ಲಿ ರಾಜಶ್ರೀ ಸಿಮೆಂಟ್ ಘಟಕದ ಅಲ್ಪಾಟೆಕ್ ಸಿಮೆಂಟ್ ಕಾರ್ಖಾನೆಯ ಅವರಣದಲ್ಲಿ ಕಾರ್ಖಾನೆಯ 5ನೇ ಘಟಕದ ವಿಸ್ತರಣೆ ಮಾಡುವ ನಿಮಿತ್ಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ಪರಿಸರ ಸಾರ್ವಜನಿಕ ಆಲಿಕೆ ಸಭೆ ಜರುಗಿತು.

ಜಿಲ್ಲಾಧಿಕಾರಿ ಫೌಜಿಯ ತರನ್ನುಮ್ ಸಭೆ ನೇತೃತ್ವವಹಿಸಿ ಮಾತನಾಡಿದ ಅವರು, ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಅಭಿಪ್ರಾಯಗಳನ್ನು ಮೌಖಿಕವಾಗಿ ಹಾಗೂ ಲಿಖಿತ ರೂಪದಲ್ಲಿಯೂ ಪಡೆಯಲಾಗಿದ್ದು ವರದಿಯನ್ನು ಸರಕಾರಕ್ಕೆ ಸಲ್ಲಿಸುವೆ, ನಾನು ಇಲ್ಲಿ ಯಾವುದೇ ತಿರ್ಮಾನ ತೆಗೆದುಕೊಳ್ಳುವುದಿಲ್ಲ. ರಾಜ್ಯ ಸರಕಾರವೇ ಜನರ ಅಭಿಪ್ರಾಯಗಳ ಆಧಾರದ ಮೇಲೆ 5 ಘಟಕದ ವಿಸ್ತರಣೆ ಸಂಬಂಧಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಫೌಜಿಯ ತರನ್ನುಮ್ ಭರವಸೆ ನೀಡಿದರು.

ರಾಜಶ್ರೀ ಸಿಮೆಂಟ್ ಕಂಪನಿಯಿಂದ ರೈತರಿಗೆ ಹಾಗೂ ಸ್ಥಳಿಯರಿಗೆ ಯಾವುದೇ ತೊಂದರೆ ಆಗುತ್ತಿರುವುದನ್ನು ನನ್ನ ಗಮನಕ್ಕೆ ತಂದಿದ್ದು. ಹಾಗೂ ಯಾರಿಗೆ ಮಾತನಾಡಲು ಸರಿಯಾಗಿ ಸಮಯ ಸಿಕಿಲ. ಅಂತವರು ಲಿಖಿತ ರೂಪದಲ್ಲಿ ಕೌಂಟರ್ ನಲ್ಲಿ ಸಲ್ಲಿಸಬಹುದು. ತಮ್ಮ ಸಮಸ್ಯೆಗಳು ಸರ್ಕಾರಕ್ಕೆ ರವಾನಿಸಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಈ ಸಭೆಗೂ ಮುನ್ನ ಸಿಮೆಂಟ್ ಕಾರ್ಖಾನೆಯ ಆಡಳಿತಾಧಿಕಾರಿ ಕೆಎ ರೆಡ್ಡಿ ಮಾತನಾಡಿ, ನಮ್ಮ ಕಾರ್ಖಾನೆಯ 5 ನೇ ಘಟಕದ ವಿಸ್ತರಣೆಯಿಂದ ಇಲ್ಲಿನ ಸ್ಥಳೀಯ ಜನರಿಗೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸಿಗಲಿದೆ, ಇಲ್ಲಿನ
ಜನರ ಬದುಕು ಸುಂದರಗೊಳ್ಳಲಿದೆ ಹೀಗಾಗಿ ಸಾರ್ವಜನಿಕರು ಅನುಮತಿಯನ್ನು ನೀಡಬೇಕು ಎಂದು ಮನವಿ ಮಾಡಿದರು.

ಮಳಖೇಡನ ಮುಖಂಡರಾದ ಮರೆಪ್ಪ ಪೂಜಾರಿ ಅಪ್ಪಾಜಿ ಮಾತನಾಡಿ, 5 ನೇ ಘಟಕ ಆರಂಭಕ್ಕೆ ಯಾವುದೇ ತಕರಾರಿಲ್ಲ, ಆದರೆ ಸ್ಥಳೀಯ ಯುವಕರಿಗೆ ಮೊದಲ ಆದ್ಯತೆ ನೀಡಿ ಹೆಚ್ಚಿನ ಉದ್ಯೋಗ ಓದಗಿಸಿಕೊಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜಶ್ರೀ ಸಿಮೆಂಟ್ ಕಂಪನಿಯವರು 5ನೇ ಘಟಕ ಪ್ರರಂಭಿಸುವ ಮುಂಚೆ ಅಕ್ಕ ಪಕ್ಕದ ಗ್ರಾಮಗಳಲ್ಲಿ ರಸ್ತೆ. ಒಳ್ಳಚರಂಡಿ ಸೇರಿ ಅನೇಕರು ಮೂಲಭೂತ ಸೌಲಭ್ಯ ಒದಗಿಸಲು ಮುಂದಾಗಬೇಕು.ರೈತರಿಂದ ಜಮೀನು ಪಡೆದ ಯುವಕರಿಗೆ ಉದ್ಯೋಗ ನೀಡಬೇಕು. ಹಾಗೂ ಹೇಚಾಗಿ ಯುವಕರು ಮಧ್ಯಪಾನ ಸೇವಿಸಿ ಆರೋಗ್ಯ ಹಾಳಾಗುತ್ತಿವೆ. ಹಲವು ಗ್ರಾಮಗಳಲ್ಲಿ ಕೂಡಲೇ ಮಧ್ಯಪಾನ ಅಂಗಡಿಗಳು ಬಂದ್ ಮಾಡಬೇಕು ಎಂದು ಮಳಖೇಡ ದರ್ಗಾದ ಹಜರತ್ ಸೈಯದ್ ಷಾ ಮುಸ್ತಾಫ ಖಾದ್ರಿ ಸ್ವಾಮಿಜಿಗಳು ಹೇಳಿದರು.

ಪಕ್ಕದಲ್ಲಿರುವ ಸೌತ್ ಇಂಡಿಯಾ ಕಂಪನಿ ಮುಚ್ಚಿ ಹೋಗಿರುವುದರಿಂದ ಸುಮಾರು 30ಕ್ಕಿಂತಲೂ ಹೆಚ್ಚು ಕುಟುಂಬಗಳು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕಷ್ಟಗಳನ್ನು ಎದುರಿಸುತ್ತಿದ್ದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ ಐದನೇ ಯೂನಿಟ್ ಬರುವುದರಿಂದ ಸುತ್ತಮುತ್ತಲಿನ ಹಳ್ಳಿಯ ನಿರುದ್ಯೋಗಗಳಿಗೆ ಉದ್ಯೋಗ ದೊರಕುವುದಲ್ಲದೆ ವಲಸಿ ಹೋಗುವ ಪ್ರಮಾಣವು ಕಡಿಮೆಯಾಗುತ್ತದೆ ಕಂಪನಿಯ ಶಾಲೆಯಲ್ಲಿ ಓದಿರುವ ಸುತ್ತಮುತ್ತಲಿನ ಹಳ್ಳಿಯ ಮಕ್ಕಳು ಇಂದು ಹಲವಾರು ಜನರು ಇಂಜಿನಿಯರಿಂಗ್ ಮೆಡಿಕಲ್ ಹಾಗೂ ಇನ್ನೂ ಹಲವು ಪದವಿಗಳನ್ನು ಪಡೆದಿದ್ದಾರೆ ಅಲ್ಲದೆ ಇಂದು ಹೊರದೇಶದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ ಇದನ್ನು ಹೇಳಲು ಹೆಮ್ಮೆ ಪಡಬೇಕಾಗಿದೆ ಈ ಕಂಪನಿಯಿಂದ ಬಹಳಷ್ಟು ಕಾರ್ಯಗಳನ್ನು ಕಂಪನಿಯವರು ಹಳ್ಳಿಗಳಲ್ಲಿ ಹೊಸ ಹೊಸ ಯೋಜನೆಗಳಿಂದ ನಮ್ಮ ಹಳ್ಳಿಯನ್ನು ಹಾಗೂ ಹಳ್ಳಿಯ ಜನರನ್ನು ಹಾಗೂ ಮಕ್ಕಳನ್ನು ಮುಂದೆ ಬೆಳೆಸುವದ ಪ್ರಕ್ರಿಯೆ ಆಗಿದೆ ಎಂದು ನೃಪತುಂಗ ನಗರದ ಜನರು ಹರ್ಷ ವ್ಯಕ್ತಪಡಿಸಿದರು.

ಮಳಖೇಡ ಗ್ರಾಪಂ ಸದಸ್ಯ ಉಮೇಶ್ ಚೌವಾಣ್ ಅವರು ಮಾತನಾಡಿ, ಸುಮಾರು ವರ್ಷಗಳಿಂದ ರಾಜಶ್ರೀ ಸಿಮೆಂಟ್ ಕಂಪನಿ ಅವರು ಸ್ಥಳೀಯರಿಗೆ ಹಾಗೂ ರೈತರಿಗೆ ಸರಿಯಾದ ಮೂಲಭೂತ ಸೌಲಭ್ಯ ಇಲ್ಲದೆ ಸಂಪೂರ್ಣ ನಿರ್ಲಕ್ಷ್ಯತೆ ವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸ್ಥಳೀಯರಿಗೆ ಉದ್ಯೋಗ ನೀಡದೇ ಬೇರೆ ರಾಜ್ಯ ಜನ್ಯರಿಗೆ ಉದ್ಯೋಗ ನೀಡುತ್ತಾ ಬರಲಾಗುತ್ತಿದೆ. ಐದು ಎಕರೆ ಜಮೀನಿಗೆ ಒಂದು ಕಾಯಂ ನೌಕರಿ ನೀಡಬೇಕು, ಗ್ರಾಪಂಗಳಲ್ಲಿ ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿಸಬೇಕು. ಕನಿಷ್ಟ ಎರಡು ವರ್ಷಕ್ಕೆ ಒಮ್ಮೆಯಾದರೂ ಮಾಲಿನ್ಯದಿಂದ ಇಲ್ಲಿನ ಜನರ ಆರೋಗ್ಯದ ತಪಾಸಣೆ ಮಾಡಬೇಕು, ಜಮೀನುಗಳಿಗೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಸರ್ವೇ ಮಾಡಬೇಕು. ಮಳಖೇಡ ರೈಲು ನಿಲ್ದಾಣದಲ್ಲಿ ಈ ಮೊದಲಿನಂತೆ ರೈಲುಗಳು ನಿಲ್ಲುಗಡೆಯಾಗಬೇಕು ಎಂದು ಕಾಗ್ರೆಸ್ ಮುಖಂಡರಾದ ಬಸವರಾಜ ಪಾಟೀಲ ಆರ್ ಪಾಟೀಲ್ ಊಡಗಿ ಅವರು ಆಗ್ರಹಿಸಿದರು.

ಹಿರಿಯ ಪರಿಸರ ಅಧಿಕಾರಿ ಎಸ್ ಮಧುಸೂದನ, ಸಿ ಎನ್ ಮಂಜಪ್ಪ, ಉಪ ವಿಭಾಗಾಧಿಕಾರಿ ಆಶಪ್ಪ ಪೂಜಾರಿ, ತಹಶಿಲ್ದಾರ ಶ್ರೀಯಾಂಕ್ ದನಶ್ರೀ ವೇದಿಕೆ ಮೇಲೆ ಇದರು. ಮಾಜಿ ಹಾಪ್ ಕಾಮ್ಸ್ ಅಧ್ಯಕ್ಷ ಹಾಗೂ ಕಾಂಗ್ರಸ್ ಹಿರಿಯ ಮುಖಂಡ ಬಸವರಾಜ ಪಾಟೀಲ್ ಊಡಗಿ ,ಘಟಕದ ಮುಖ್ಯಸ್ಥ ಉದಯ ಕುಮಾರ್ ಪವಾರ್, FH.HR. KVVYS ನಾರಾಯಣ , ಸಿಎಸ್ಆರ್ ವಿಭಾಗದ ಮುಖ್ಯಸ್ಥ ಚೇತನ್ ವಾಘಮೋರ್, ರವಿಕುಮಾರ್, ನಾಗರಾಜ್ ಸುತಾರ್, ಬಿಜೆಪಿ ಮುಖಂಡ ಶಿವಕುಮಾರ್ ಜಿಕೆ ಪಾಟೀಲ್ ತೆಲ್ಕೂರ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮುಖ್ರಾಂಖಾನ್, ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ. ಜೆಡಿಎಸ್ ಮುಖಂಡೆ ಸುನೀತಾ ತಳವಾರ. ರಾಜಶೇಖರ್ ಪುರಾಣಿಕ ಸೇರಿದಂತೆ ಊಡಗಿ ,ಹಂಗನಹಳ್ಳಿ , ನೃಪತುಂಗನಗರ , ಮಳಖೇಡ್,ದಿಗ್ಗಾಂವ ಮತ್ತು ಸೇಡಂ ಸುತ್ತಮುತ್ತಲ್ಲಿನ ಗ್ರಾಮದ ರತರು ಹಾಗೂ ಸಾರ್ವಜನಕರು ಹಾಜರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago