ಕಲಬುರಗಿ : 23 ಡಿಸೆಂಬರ್. ರೈತರು ಆಧುನಿಕ ಕೃಷಿ ಪದ್ಧತಿಯೊಂದಿಗೆ ಹೊಸ ತಂತ್ರಜ್ಞಾನವನ್ನು ಅಳವಸಿಕೊಂಡರೆ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಹಾಗೂ ಖ್ಯಾತ ಕೃಷಿ ತಜ್ಞ ಪ್ರೊ ಎಸ್ ಎ ಪಾಟೀಲ್ ಅಭಿಪ್ರಾಯಪಟ್ಟರು.
ಕಲಬುರಗಿ ತಾಲೂಕು ಮತ್ತು ಜಿಲ್ಲಾ ಕೃಷಿಕ ಸಮಾಜ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ವತಿಯಿಂದ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆಧುನಿಕ ಕೃಷಿ ಪದ್ಧತಿಯಿಂದ ಇಸ್ರೇಲ್ ಸೇರಿದಂತೆ ನೀರಿನ ಕೊರತೆ ಇರುವ ರಾಷ್ಟ್ರಗಳು ಜಗತ್ತಿನಲ್ಲಿ ಯಶಸ್ವಿಯಾಗಿ ಕೃಷಿ ಕ್ಷೇತ್ರದಲ್ಲಿ ಮುನ್ನಡೆಯುತ್ತಿವೆ, ನಮ್ಮ ಫಲವತ್ತಾದ ಭೂಮಿಗಳಲ್ಲಿ ಅಂತಹ ಪದ್ಧತಿಯನ್ನು ಅಳವಡಿಸಿಕೊಂಡರೆ ಇನ್ನೂ ಹೆಚ್ಚಿನ ಆದಾಯ ಗಳಿಸಿ ರಾಷ್ಟ್ರವನ್ನು ಅಭಿವೃದ್ಧಿ ಪಥದೆಡೆಗೆ ತೆಗೆದುಕೊಂಡು ಹೋಗಲು ರೈತರಿಂದ ಸಾಧ್ಯ ಎಂದು ಪಾಟೀಲ್ ನುಡಿದರು.
ಕೃಷಿ ಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳು ಹಾಗೂ ಪ್ರಗತಿಪರ ರೈತರಾದ ಪ್ರೊ. ಯಶವಂತರಾಯ ಅಷ್ಠಗಿ ಮಾತನಾಡಿ, ಸಮಗ್ರ ಕೃಷಿ ಪದ್ಧತಿ ಹಾಗೂ ಮಿಶ್ರ ಕೃಷಿ ಪದ್ಧತಿಯಿಂದ ಮತ್ತು ತೋಟಗಾರಿಕೆಯಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ, ಅದ್ದರಿಂದ ಯುವಕರು ಸ್ವಾವಲಂಬಿಗಳಾಗಿ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಗಣನೀಯ ಸಾಧನೆ ಮಾಡಲು ಇದು ಪ್ರೇರಣೆ ನೀಡಲಿದೆ ಎಂದರು.
ಕೃಷಿಕ ಸಮಾಜದ ಜಿಲ್ಲಾ ಖಜಾಂಚಿಗಳಾದ ಶರಣಪ್ಪ ತಳವಾರ್, ನಿರ್ದೇಶಕರಾದ ರಾಘವೇಂದ್ರ ಕುಲಕರ್ಣಿ ಮಾತನಾಡಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಲ್ಲಯ್ಯ ಮುತ್ಯಾ ತಾಡತೇಗನೂರ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಡಾ. ಸಿದ್ರಾಮಪ್ಪ ಧಂಗಾಪೂರ, ನಿರ್ದೇಶಕರಾದ ಶ್ಯಾಮ್ ನಾಟಿಕರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸಮದ್ ಪಟೇಲ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಸಂತೋಷ್ ಸಜ್ಜನ್, ಕೃಷಿ ವಿಜ್ಞಾನಿ ವಾಸುದೇವ ನಾಯಕ್, ಸೋಮಶೇಖರ್ ಬಿರಾದಾರ್, ಕಲಬುರಗಿ ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ್ ಕೋಟೆ, ತಾಳೆ ಬೆಳೆಗಾರರ ಸಂಘದ ಅಧ್ಯಕ್ಷ ಉತ್ತಮ್ ಕುಮಾರ್ ಪಾಟೀಲ್ ಬೆಳಕೋಟಾ, ಕಸಾಪ ಸಂಘಟನಾ ಕಾರ್ಯದರ್ಶಿ ಹಾಗೂ ಪ್ರಗತಿಪರ ರೈತ ರವೀಂದ್ರಕುಮಾರ್ ಭಂಟನಳ್ಳಿ ಬಂಟನಳ್ಳಿ, ಪಂಪಾಪತಿ ಪಾಟೀಲ್ , ಜೀನೇಶ್ ಜ್ಯೋತಿ, ಶಾಂತಲಿಂಗ ಪಾಟೀಲ್ ಕೋಳಕೂರ್, ಶಾಂತವೀರ ಪಾಟೀಲ್,ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಅನೇಕ ಪ್ರಗತಿಪರ ರೈತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಗತಿಪರ ರೈತರಿಗೆ ಕೃಷಿ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಈ ಸಂದರ್ಭದಲ್ಲಿ ತಾಳೆ ಬೆಳೆ ಕುರಿತು ವಿಚಾರ ಸಂಕಿರಣ ಕೂಡ ನಡೆಯಿತು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಸಿದ್ರಾಮಪ್ಪ ಧಂಗಾಪೂರ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಕಲಬುರಗಿ ತಾಲೂಕಿನ ಕೃಷಿ ಸಹಾಯಕ ನಿರ್ದೇಶಕರಾದ ಚಂದ್ರಕಾಂತ್ ಜೀವಣಗಿ ನಿರೂಪಿಸಿದರು, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಚಿತ್ರಶೇಖರ ಪರಸಪ್ಪಗೋಳ ಸ್ವಾಗತಿಸಿದರು, ಕೃಷಿ ಅಧಿಕಾರಿ ಪ್ರಿಯಾಂಕಾ ಕುಲಕರ್ಣಿ ವಂದಿಸಿದರು.
ಕೃಷಿ ಶ್ರೀ ಪ್ರಶಸ್ತಿ ಪುರಸ್ಕೃತರು : ಶೋಭಾ ಸಂಗಣ್ಣ ಡಂಬಳ, (ತಾಳೆ ಬೆಳೆ)ಪ್ರೊ ಯಶವಂತರಾಯ ಅಷ್ಠಗಿ (ಸಮಗ್ರ ಕೃಷಿ)ಸರುಬಾಯಿ ಕುಸುನೂರ್ (ತೋಟಗಾರಿಕೆ)ಹಣಮಂತ ರೆಡ್ಡಿ (ಹೂವು ಬೆಳೆ) ಶಿವಕುಮಾರ್ ಸಜ್ಜನ, ಪಾಂಡುರಂಗ ಮಸ್ತಾನಪ್ಪ, ಶಾಂತಮಲ್ಲ ಅಣ್ಣಾರಾಯ, ಮಲ್ಲಿಕಾರ್ಜುನ ಕಿರಣಗಿ, ನಾಗರಾಜ್ ಸೂರ್ಯಕಾಂತ, ಲಕ್ಷ್ಮಿಬಾಯಿ ಶರಣಬಸಪ್ಪ, ಶಿವರಾಯ ಹಿಪ್ಪರಗಿ,ಭೀಮಶ್ಯಾ ನೀರ್, ಗಂಗಮ್ಮ ಶಿವನಂದಯ್ಯಾ, ಆನಂದ ಬೆಳಗುಂಪಿ, ಕಲಾವತಿ ರಾಠೋಡ, ಶಿಲಾ ತಿಪ್ಪನೂರ (ತೋಟಗಾರಿಕೆ ಹಾಗೂ ಸಮಗ್ರ ಕೃಷಿ)
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…