ಬಿಸಿ ಬಿಸಿ ಸುದ್ದಿ

ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ. ಎನ್ ಧರ್ಮಸಿಂಗ್ ಕಲ್ಯಾಣ ನಾಡಿನ ಎರಡು ಕಣ್ಣು; ಕಸಾಪ ಅಧ್ಯಕ್ಷ ತೇಗಲತಿಪ್ಪಿ

ಕಲಬುರಗಿ: ಮಾಜಿ ಮುಖ್ಯಮಂತ್ರಿಗಳೂ ಆದ ಸರ್ವಧರ್ಮ ಸಮನ್ವಯಕಾರರಾಗಿದ್ದ ಡಾ. ಎನ್ ಧರ್ಮಸಿಂಗ್ ಅವರು ಕೇವಲ ಒಂದು ಕುಟುಂಬದ ಆಸ್ತಿ ಅಲ್ಲ. ಬದಲಾಗಿ ಈ ನಾಡಿನ ಆಸ್ತಿ ಆಗಿದ್ದಾರೆ. ರಾಜ್ಯಸಭೆಯ ವಿಪಕ್ಷ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ. ಎನ್ ಧರ್ಮಸಿಂಗ್ ಅವರು ಕಲ್ಯಾಣ ನಾಡಿನ ಎರಡು ಕಣ್ಣುಗಳಿದ್ದ ಹಾಗೆ. ಪೊಲೀಸ್ ತರಬೇತಿ ಕೇಂದ್ರ, ಕರ್ನಾಟಕ ಉಚ್ಚ ನ್ಯಾಯಾಲಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಹಾಗೂ ಈ ಭಾಗಕ್ಕೆ ಸಂವಿಧಾನದ 371 ನೆ (ಜೆ) ಕಲಂ ಜಾರಿಗೊಳಿಸಲು ಪ್ರಯತ್ನಿಸುವ ಮೂಲಕ ಈ ಭಾಗದ ಪ್ರತಿಭಾವಂತ ವಿದ್ಯಾವಂತರ ಬಾಳಿಗೆ ಅವರು ಬೆಳಕಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ಮಾಜಿ ಸಿಎಂ ಡಾ. ಎನ್ ಧರ್ಮಸಿಂಗ್ ಅವರ 87ನೇ ಜನ್ಮದಿನದ ಪ್ರಯುಕ್ತ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನವು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಏರ್ಪಡಿಸಿದ ಅವರ ಒಡನಾಡಿಗಳಿಗೆ `ಧರ್ಮಪ್ರಜೆ’ ಎಂಬ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ ಕಲೆ, ಸಾಹಿತ್ಯ, ಸಂಗೀತ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿ ಪ್ರೋತ್ಸಾಹಿಸಿದ್ದಾರೆ. ಈ ನೆಲದ ಕೀರ್ತಿಯನ್ನು ಬಾನೆತ್ತರಕ್ಕೆ ಹಾರಿಸಿದ ಶ್ರೀಮಾನ್ ಧರ್ಮಸಿಂಗ್ ಅವರು ಮಾಡಿದ ಕಾರ್ಯಗಳು ನಮಗೆಲ್ಲ ಅನುಕರಣೀಯವಾದುದು ಎಂದು ಮಾರ್ಮಿಕವಾಗಿ ಹೇಳಿದರು.

ನೇತ್ರ ತಜ್ಞೆ ಡಾ. ರಾಜಶ್ರೀ ರೆಡ್ಡಿ ಮಾತನಾಡಿ, ಜನ್ಮ ಕೊಟ್ಟ ಊರನ್ನೇ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಆ ಜನ್ಮಭೂಮಿಯನ್ನು ಇತಿಹಾಸದಪುಟ ಸೇರುವಂಥ ಕೆಲಸ ಮಾಡಿರುವ ಡಾ. ಎನ್ ಧರ್ಮಸಿಂಗ್ ರವರು ತಮ್ಮ ಜೀವನುದ್ದಕ್ಕೂ ಸರಳತೆ ಮತ್ತು ಸಜ್ಜನಿಕೆಯಿಂದ ಸಾರ್ವಜನಿಕರೊಂದಿಗೆ ನಡೆದುಕೊಂಡರು ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರತಿಷ್ಠಾನದ ಸಂಚಾಲಕ ಬಿ.ಎಂ.ಪಾಟೀಲ ಕಲ್ಲೂರ, ಡಾ. ಎನ್ ಧರ್ಮಸಿಂಗ್ ರವರು ರಾಜಕೀಯ ರಂಗದಲ್ಲಿ ಮಾಡಿರುವ ಸಮಾಜ ಸೇವೆ ಸದಾ ಸ್ಮರಣೀಯವಾದುದು. ಇಂಥ ಮಹಾನ್ ನಾಯಕರ ಹೆಸರಲ್ಲಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರು ತಮ್ಮ ಸಾಂಸ್ಕøತಿಕ ಸಂಘಟನೆಯಾದ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಕಳೆದ ಏಳೆಂಟು ವರ್ಷಗಳಿಂದ ಅವರ ಒಡನಾಡಿಗಳಿಗೆ `ಧರ್ಮಪ್ರಜೆ’ ಪ್ರಶಸ್ತಿ ನೀಡುತ್ತಿರುವುದರಿಂದ, ಅವರ ಆದರ್ಶಗಳನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದರು.

ಸಂಶೋಧಕ ಮುಡುಬಿ ಗುಂಡೇರಾವ ಮಾತನಾಡಿ, ಡಾ. ಎನ್ ಧರ್ಮಸಿಂಗ್ ರವರು ಇನ್ನೊಬ್ಬರಿಗೆ ಗೌರವಿಸುವ ವ್ಯಕ್ತಿತ್ವ ಹೊಂದಿದ್ದರು. ಈ ನಾಡಿಗಾಗಿ ಅವರ ಹೃದಯ ಯಾವತ್ತೂ ಮಿಡಿಯುತ್ತಿತ್ತು. ಈ ರೀತಿಯಾದ ಕಾರ್ಯಕ್ರಮಗಳು ಸಮಾಜಮುಖಿಯಾಗಿ ಆಯೋಜಿಸುವ ಮೂಲಕ ಎನ್ ಧರ್ಮಸಿಂಗ್ ರವರ ಕಾರ್ಯ ಸಾಧನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

ಸಾರಂಗಮಠದ ಜಗದ್ಗುರು ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಜೀ ಹಿರಿಯರಿಗೆ `ಧರ್ಮಪ್ರಜೆ’ ಪ್ರಶಸ್ತಿ ಪ್ರದಾನ ಮಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಸಂಚಾಲಕ ಶಿವರಾಜ ಎಸ್ ಅಂಡಗಿ, ಅಫಜಲಪೂರ ತಾಪಂ ನ ಮಾಜಿ ಅಧ್ಯಕ್ಷ ಗುರಣ್ಣಾ ಪಡಶೆಟ್ಟಿ ಉಡಚಣ, ಜೇವರ್ಗಿ ಕಸಾಪ ಅಧ್ಯಕ್ಷ ಎಸ್ ಕೆ ಬಿರಾದಾರ, ಮಂಜುನಾಥ ಕಂಬಾಳಿಮಠ, ಚನ್ನಮಲ್ಲಯ್ಯಾ ಹಿರೇಮಠ ವೇದಿಕೆ ಮೇಲಿದ್ದರು.

ಡಾ. ಎನ್ ಧರ್ಮಸಿಂಗ್ ರವರ ಒಡನಾಡಿಗಳಾದ ಭೀಮರಾಯಗೌಡ ಬಿರಾದಾರ ಮಾಗಣಗೇರಾ, ಅಹ್ಮದ್ ಪಟೇಲ್ ಬಣಮಗಿ,ಮೈಲಾರಿ ಹೊನಗುಂಟಿ ಗುಡೂರ್, ಹೊನ್ನಪ್ಪ ಹೊನಕೇರಿ ಕೋಳಕೂರ, ಶರಣಪ್ಪ ದೊಡ್ಮನಿ ಕರಕಿಹಳ್ಳಿ, ಗುಂಡಪ್ಪ ನಾಟೀಕಾರ ನೆಲೋಗಿ ಅವರನ್ನು `ಧರ್ಮಪ್ರಜೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಲಾವಿದ ಮಹೇಶ ಚಿಂತನಪಳ್ಳಿ ಅವರು ಪ್ರಸ್ತುತಪಡಿಸಿದ ಧರ್ಮಸಿಂಗ್ ರವರ ಜೀವನ ಚರಿತ್ರೆ ಮತ್ತು ವ್ಯಕ್ತಿತ್ವ ಪರಿಚಯವನ್ನೊಳಗೊಂಡ ಸ್ವರಚಿತ ಗೀತೆ ಪ್ರೇಕ್ಷಕರ ಗಮನ ಸೆಳೆಯಿತು.

ಪ್ರಮುಖರಾದ ಧರ್ಮಣ್ಣ ಹೆಚ್. ಧನ್ನಿ, ಡಾ. ಬಾಬುರಾವ ಶೇರಿಕಾರ, ರಾಜೇಂದ್ರ ಮಾಡಬೂಳ, ಜೆ.ಎಸ್. ವಿನೋದಕುಮಾರ, ಶರಣರಾಜ್ ಛಪ್ಪರಬಂದಿ, ಶಕುಂತಲಾ ಪಾಟೀಲ ಜಾವಳಿ, ಶಿವಶರಣಪ್ಪ ಕೋಬಾಳ, ಎಂ.ಎನ್.ಸುಗಂಧಿ, ಎಸ್ ಎಂ ಪಟ್ಟಣಕರ್, ಹೆಚ್ ಎಸ್ ಬರಗಾಲಿ, ವಿಶ್ವನಾಥ ಪಾಟೀಲ ಗೌನಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago