ಜೇವರ್ಗಿ: ಶ್ರಾವಣ ಮಾಸದ ಐದನೇ ಸೋಮವಾರದಂದು ತಾಲೂಕಿನ ಹಂಗರಗಾ(ಕೆ) ಗ್ರಾಮದಲ್ಲಿ ಬಸವೇಶ್ವರ ಜಾತ್ರೆಯ ನಿಮಿತ್ಶ ಕುಸ್ತಿ ಪಂದ್ಶಾವಳಿಗಳು ನಡೆದವು. ಗ್ರಾಮದ ಹೊರವಲಯದಲ್ಲಿರುವ ಬಸವೇಶ್ವರ ದೇವಸ್ಥಾನಕ್ಕೆ ಬೆಳಿಗ್ಗೆ ನಂದಿಕೋಲ ತಲುಪಿಸಿದ ನಂತರ ಅನೇಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ಗ್ರಾಮದ ಜನರು ಬೇಡಿಕೊಂಡ ಹರಕೆಗಳನ್ನು ಮುಟ್ಟಿಸಿದರು. ಮಹಿಳೆಯರು ತಮ್ಮ ಉಪವಾಸ ವ್ರತವನ್ನು ಇಂದಿಗೆ ಮುಕ್ತಾಯಗೊಳಿಸಿದರು. ದೇವಸ್ಥಾನದ ಆವರಣದಲ್ಲಿ ನಡೆದ ಕುಸ್ತಿ ಪಂದ್ಶಾವಳಿಗಳಂತು ನೋಡುಗರನ್ನು ಸೆಳೆದವು. ಐದು ನೂರುˌ ಸಾವಿರˌ ಎರಡು ಸಾವಿರ ಹಾಗೂ ಬೆಳ್ಳಿಕಡಗದ ಕುಸ್ತಿಗಳಂತು ಜಿದ್ಬಾಜಿದ್ದಿನ ಸೆಣಸಾಟದ ನಂತರ ಪಟುಗಳು ಕಡಗಗಳನ್ನು ಪಡೆದುಕೊಂಡರು.
ಬಿಜಾಪುರˌ ಇಂಡಿˌ ಮಲಗಾಣˌ ಕಲಬುರಗಿˌ ಸಿಂದಗಿˌ ಆಲಮೇಲ ಸೇರಿದಂತೆ ಹಲವು ಜಿಲ್ಲೆಗಳಿಂದ ಕುಸ್ತಿ ಪಟುಗಳು ಆಗಮಿಸಿದ್ದರು. ಗ್ರಾಮದ ಹನುಮಂತ ದೇವಸ್ಥಾನದಲ್ಲಿ ಪ್ರಸಾದದ ವ್ಶವಸ್ಥೆ ಮಾಡಲಾಗಿತ್ತು.
ಗ್ರಾಮದ ಪ್ರಮುಖರಾದ ಸಿದ್ದಣ್ಣ ಸಾಹು ಹೂಗಾರˌ ನಿಜಣ್ಣ ದೊರೆˌ ಆರ್.ಬಿ. ದೇಸಾಯಿˌ ಶರಣು ಇಲಕಲ್ˌ ಸಿದ್ದುಗೌಡ ಸಾಸಾಬಾಳˌ ಸೋಮನಿಂಗಪ್ಪ ಟಣಕೇದಾರˌ ಮೇಲಪ್ಪ ಕಿರಣಗಿˌ ಶಂಕರಲಿಂಗ ಪಾಟೀಲˌ ಧರ್ಮರಾಜ ದೊಡ್ಮನಿˌ ಚಂದ್ರು ಕೋರಿˌ ಡಾ.ಅಶೋಕ ದೊಡ್ಮನಿ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…